ಬೆಂಗಳೂರು: ದೇಶದ ಧಾರ್ಮಿಕ ಹಾಗೂ ಅಧ್ಯಾತ್ಮಿಕ ಕ್ಷೇತ್ರಕ್ಕೆ ತನ್ನದೇ ಆದ ವಿಶಿಷ್ಠ ಕೊಡುಗೆ ನೀಡುತ್ತಾ ಬಂದಿರುವ ಬೆಂಗಳೂರಿನ ತೌಳವ ಮಾಧ್ವ ಒಕ್ಕೂಟ ಈಗ ಮತ್ತೊಂದು ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ಜಾಗತಿಕ ವಿಷ್ಣು ಸಹಸ್ರನಾಮ ಕಂಠಪಾಠ ಸ್ಪರ್ಧೆಯನ್ನು ಏರ್ಪಡಿಸಿದೆ.
ವಿದ್ವಾನ್ ಶ್ರೀಕೃಷ್ಣರಾಜ ಕುತ್ಪಾಡಿ ಅವರ ಆಸಕ್ತಿಯಿಂದ ಮೂಡಿರುವ ಈ ಸ್ಪರ್ಧೆಗೆ ಜ್ಞಾನಗಮ್ಯ ಪ್ರಸರಣ ಹಾಗೂ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದ ಸಹಕಾರವಿದ್ದು, ವಿಶ್ವವ್ಯಾಪಿಯಾಗಿ ಈ ಕಂಠಪಾಠ ಸ್ಪರ್ಧೆಯ ಕುರಿತಾಗಿ ಸಂಪೂರ್ಣ ವಿವರ ಇಂತಿದೆ.
ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಆಸಕ್ತಿಯಿರುವ ಬಂಧುಗಳು ಫಾರಂ ಭರ್ತಿ ಮಾಡಿ ನೋಂದಣಿ ಮಾಡಿಕೊಳ್ಳುವುದು ಅಗತ್ಯವಾಗಿದೆ.
ಜಾಗತಿಕ ವಿಷ್ಣುಸಹಸ್ರನಾಮ ಕಂಠಪಾಠ ಸ್ಪರ್ಧೆಗೆ:
1. ಮೊದಲ ಬಹುಮಾನ ರೂ. 15,000
2. ಎರಡನೆ ಬಹುಮಾನ ರೂ. 10,000
3. ಮೂರನೆ ಬಹುಮಾನ ರೂ. 5000
4. 10 ಸಮಾಧಾನಕರ ಬಹುಮಾನಗಳು ರೂ. 1,000
ನಿಯಮಗಳು ಇಂತಿವೆ:
1. ಎಲ್ಲರಿಗೂ ಮುಕ್ತ ಅವಕಾಶ
2. ಉಚ್ಚಾರಣೆ ಸರಾಗವಾಗಿರಬೇಕು
3. ಸ್ಖಾಲಿತ್ಯ, ಅಸ್ಪಷ್ಟತೆ, ಮಹಾಪ್ರಾಣ-ಅಲ್ಪಪ್ರಾಣ ಮೊದಲಾದ ದೋಷಗಳಿಂದ ಮುಕ್ತವಾಗಿರಬೇಕು
4. ಮಹಾಭಾರತ ಮೂಲದಲ್ಲಿ ಇರುವಂತೆ ಕಂಠಸ್ಥವಾಗಿದ್ದರೆ ಸಾಕು
5. ಸ್ಪರ್ಧೆಯಲ್ಲಿ ಭಾಗವಹಿಸುವವರು ಡಿಸೆಂಬರ್ 14 ರ ಒಳಗೆ ಆಡಿಯೋವನ್ನು google form ಭರ್ತಿಗೊಳಿಸಿ ರಿಜಿಸ್ಟರ್ ಮಾಡಿಕೊಳ್ಳಬೇಕು.
6. ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆ ನಡೆಸಲಾಗುತ್ತದೆ
ಯಾರೆಲ್ಲಾ ಪಾಲ್ಗೊಳ್ಳಬಹುದು?
ಗುರುಕುಲ ಮತ್ತು ಪಾಠಶಾಲೆಯ ವಿದ್ಯಾರ್ಥಿಗಳಿಗೆ
12 ವರ್ಷದ ಒಳಗಿನವರಿಗೆ
13 ರಿಂದ 35 ವರ್ಷ ವಯೋಮಿತಿಯವರಿಗೆ
36 ರಿಂದ ವಯೋಮಾನದ ಮಿತಿ ಇಲ್ಲದೆ ಎಲ್ಲರಿಗೂ ಅವಕಾಶ
ಎಷ್ಟು ಸುತ್ತಿನಲ್ಲಿ ಸ್ಪರ್ಧೆ ನಡೆಯಲಿದೆ?
ಸ್ಪರ್ಧೆಗಳು 3 ಸುತ್ತುಗಳಲ್ಲಿ ನಡೆಯಲಿದ್ದು, 2 ಸುತ್ತುಗಳಲ್ಲಿ ಉತ್ತೀರ್ಣರಾದವರಿಗೆ ಉಡುಪಿ ಶ್ರೀ ಕೃಷ್ಣ ಮತ್ತು ಶ್ರೀ ಅನಂತಾಸನರ ಸನ್ನಿಧಾನದಲ್ಲಿ ನಡೆಯುವ ಕೊನೆಯ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಇದೆ.
ನೀವು ಕಳುಹಿಸಿದ ಆಡಿಯೋವನ್ನು ಕೇಳಿ ಆಯ್ಕೆದಾರರು ಆಯ್ಕೆಯಾದವರಿಗೆ ಕಾಲ್ ಮೂಲಕ ಸ್ಪರ್ಧೆ ನಡೆಸಲಾಗುತ್ತದೆ.
ಕೊನೆಯ ಸುತ್ತಿನ ಸ್ಪರ್ಧೆ ಮುಖತಃ ನಡೆಸಲಿದ್ದು, ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ 2020ರ ಎಪ್ರಿಲ್ 14ರಂದು ನಡೆಯಲಿದ್ದು, ನಿರ್ಣಾಯಕರ ತೀರ್ಮಾನವೇ ಅಂತಿಮವಾಗಿರುತ್ತದೆ.
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: ಶ್ರೀ ವಾದಿರಾಜ ವೈಲಾಯ(9845348716) ಶ್ರೀವಿಷ್ಣುಮೂರ್ತಿ ರಾವ್(9482020240) ಶ್ರೀ ವಿನಯ ಹೆಬ್ಬಾರ್(9880069468) ಶ್ರೀಮತಿ ಸುಜಾತಾ ರಾವ್(9448296576)
ನೀವು ಕಳುಹಿಸುವ ಆಡಿಯೋ ಎಂಪಿ3(3) ಫಾರ್ಮೆಟ್’ನಲ್ಲಿರಬೇಕು. ಈ ಕೆಳಗಿನ ಲಿಂಕ್’ಗೆ ನಿಮ್ಮ ಆಡಿಯೋವನ್ನು ಕಳುಹಿಸಿ:
https://www.files-conversion.com/audio-converter.php
ವಿಜ್ಞಾಪನೆ: ವಿದ್ವಾಂಸರು ಪುರೋಹಿತರು, ಜ್ಯೋತಿಷ್ಕರು, ಅರ್ಚಕರು ತಮ್ಮ ಶಿಷ್ಯರನ್ನು ಈ ಸ್ಪರ್ಧೆಗೆ ತಯಾರುಗೊಳಿಸಿ ಕಳುಹಿಸಿಕೊಡಿ ಎಂದು ಆಯೋಜಕರು ವಿನಂತಿಸಿದ್ದು, ಈ ವಿಚಾರವನ್ನು ವ್ಯಾಪಕವಾಗಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲೂ ಸಹ ಕೋರಲಾಗಿದೆ.
ಕಂಠಪಾಠಕ್ಕೆ ಮಾರ್ಗಸೂಚಿಯಾಗಿ ಇಲ್ಲಿರುವ ಧ್ವನಿಮುದ್ರಣದ ಕೊಂಡಿಯನ್ನು ಬಳಸಿಕೊಳ್ಳಬಹುದು
ಕಂಠಪಾಠಕ್ಕೆ ಮಾರ್ಗಸೂಚಿಯಾಗಿ PDF format ನಲ್ಲಿ ಸಹಸ್ರನಾಮದ ಪ್ರತಿ ಲಭ್ಯವಿದೆ
https://drive.google.com/drive/folders/1dB8TMql1R18yABLO5h1Skvndc4iRw15i
Discussion about this post