ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸಾಧನೆಗೆ ಮತ್ತೊಂದು ಹೆಸರೇ ಕರಾವಳಿಯ ಅದ್ಭುತ ಪ್ರತಿಭೆ ವಿಜೆ ಅಮನ್ ಎಸ್ ಕರ್ಕೇರ.. ಹೌದು ಇನ್ನೂ ಸಣ್ಣ ವಯಸ್ಸಾದರೂ ಮಾಡಿರೋ ಸಾಧನೆ ಕೈ ಚಪ್ಪಾಳೆಗಿಂತಲೂ ಮಿಗಿಲು.
11ನೆಯ ವರ್ಷದ ಈ ಬಾಲಕ ಮೂಡುಶೆಡ್ಡೆಯ ಶ್ರೀನಿವಾಸ್ ಅಮೀನ್ ಹಾಗೂ ಬಬಿತಾ ಎಸ್ ಕರ್ಕೇರ ಇವರ ಮುದ್ದಿನ ಮಗ ಪ್ರಸ್ತುತ ಪ್ರೆಸ್ಟೀಜ್ ಇಂಟರ್’ನ್ಯಾಷನಲ್ ಸ್ಕೂಲ್ ಜಪ್ಪಿನಮೊಗರುನಲ್ಲಿ 6ನೆಯ ತರಗತಿಯಲ್ಲಿ ಕಲಿಯುತ್ತಿದ್ದಾನೆ.
ಮಕ್ಕಳ ಮನಸ್ಸು ಸದಾ ಆಟವಾಡುವ ಮೈದಾನದತ್ತ ಇದ್ದರೆ ಇವನ ಯೋಚನೆ ತನ್ನ ಕಲಾಸಾಧನೆಯ ಪಯಣದ ಹಾದಿಯಲ್ಲಿ ಏನಾದರು ಸಾಧಿಸಬೇಕೆಂದು ಮನಸ್ಸು ತುಡಿಯುತ್ತಿತ್ತು. ತಂದೆ ತಾಯಿ ಮಗನ ಇಷ್ಟಕ್ಕೆ ಯಾವತ್ತೂ ಕೊರತೆ ಮಾಡಿದವರಲ್ಲ. ಅಮನ್ ಇವತ್ತು ಇಷ್ಟು ಎತ್ತರಕ್ಕೆ ಬೆಳೆಯಲು ಪ್ರಮುಖ ಕಾರಣ ಅವನ ಪೋಷಕರು ಶಾಲೆಯ ಪುಸ್ತಕದಲ್ಲೂ ಬುದ್ಧಿವಂತಿಕೆ ಮೆರೆಯುತ್ತಾ ಉಳಿದ ಸಮಯವನ್ನು ತನ್ನ ಕಲಾ ಕ್ಷೇತ್ರಕ್ಕೆ ಮುಡಿಪಾಗಿಸುತ್ತಾ ಸದಾ ಕಲಾಸಾಧನೆಗಾಗಿ ಹಾತೊರೆಯುತ್ತಿರುವ ಈ ಬಾಲಕ ನಿಜಕ್ಕೂ ತುಳುನಾಡಿನ ಹೆಮ್ಮೆ.
ಈತನ ಹೆಸರು ಕೇವಲ ಒಂದೇ ಕ್ಷೇತ್ರಕ್ಕೆ ಸೀಮಿತವಾಗಿರದೆ ಹಾಡು, ಚಿತ್ರಕಲೆ, ನಟನೆ, ನಿರೂಪಣೆ, ನೃತ್ಯ, ಕೀಬೋರ್ಡ್, ಡ್ರಮ್ಸ್, ಆಟೋಟ ಸ್ಪರ್ಧೆ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಸೈ ಅನಿಸಿಕೊಂಡಿರುವ ಬಹುಮುಖ ಪ್ರತಿಭೆಯ ಸಾಧನೆ ಎಲ್ಲರೂ ಮೆಚ್ಚುವಂತಹುದು.
ಏಳುಬೀಳುಗಳ ಹಾದಿಯಲ್ಲಿ ಸಾಗಿದ ಈ ಬಾಲಕನ ಸಾಧನೆಯ ಹಾದಿ ಸುಲಭವಾಗಿರಲಿಲ್ಲ. ಸಾಧಿಸುವ ಛಲಕ್ಕೆ ಮುಖ್ಯವಾಗಿ ಬೇಕಾಗಿರೋದು ಹಠ. ನಿಶ್ಚಿತ ಗುರಿ ಹೊಂದಿದ ಅಮನ್’ನ ಸಾಧನೆ ಕುರಿತಾದ ಲೇಖನವನ್ನು ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದಲ್ಲಿ ಕಿರುಪರಿಚಯ ಮಾಡುವ ಪ್ರಯತ್ನ ನನ್ನದು.
ಯಾರೆ ಆಗಲಿ ಸಾಧನೆ ಮಾಡಲು ಪ್ರೋತ್ಸಾಹ ಅತಿ ಅಗತ್ಯ. ಪ್ರತಿಭೆಗಳಿಗೆ ಅಳಿಲು ಸಹಾಯ ಮಾಡಲು ಬಯಸಿದ ಶಶಿಧರ್ ಗುಜ್ಜಾಡಿ ಮಾಡಿದ ಕರಾವಳಿ ಕಲಾಕಣ್ಮಣಿಗಳು ವಾಟ್ಸಪ್ ಗ್ರೂಪ್’ನ ಸಹಾಯದಿಂದ ಪ್ರತಿಭಾ ಸಾಧಕನ ಲೇಖನ ಬರೆಯಲು ಸಹಾಯವಾಯಿತು.
ನಿರೂಪಣೆಯನ್ನು ಮಾಡಲು ದಯಾನಂದ್ ಕತ್ತಲ್ ಸರ್ ಅವರಿಂದ ಕಲಿಯುವುದರ ಜೊತೆಗೆ ನೃತ್ಯಾಭ್ಯಾಸವನ್ನು ವಿಜೆ ಡಿಕ್ಸಾನ್ ಅವರಿಂದ ತರಬೇತಿ ಪಡೆಯುತ್ತಿದ್ದಾನೆ ಈ ಪೋರ.
ಅದಲ್ಲದೇ ಝೀ ಕನ್ನಡದಲ್ಲಿ ನಡೆದ ಡಾನ್ಸ್ ಕರ್ನಾಟಕ ಡಾನ್ಸ್ ಡಿಕೆಡಿ ಆಯ್ಕೆ ಸುತ್ತು ಮತ್ತು ಹಿಂದಿ ವಾಹಿನಿಯಾದ ಕಲರ್ಸ್ ಚಾನೆಲ್’ನಲ್ಲಿ ಪ್ರಸಾರವಾಗುತ್ತಿದ್ದ India Got Talent ರಿಯಾಲಿಟಿ ಶೋನಲ್ಲಿ ಕೂಡ ಭಾಗವಹಿಸಿರುತ್ತಾನೆ.
ಕಲಾಪಯಣದ ಹಾದಿಯಲ್ಲಿ ನಮ್ಮ ಟಿವಿ, ನಮ್ಮ ಕುಡ್ಲ, ವಿ4 ಚಾನೆಲ್, ಡೈಜಿವರ್ಲ್ಡ್, ಅಬ್ಬಕ್ಕ ಟಿವಿ, ಮುಂತಾದ ಸ್ಥಳೀಯ ಟಿವಿ ಚಾನೆಲ್’ಗಳಲ್ಲಿ ನೃತ್ಯ ಪ್ರದರ್ಶನ ನೀಡಿದ ಹಿರಿಮೆ ಈತನಿಗಿದೆ.
V4 ಚಾನೆಲ್’ನಲ್ಲಿ ಆಯೋಜಿಸಿರುವ Comedy Premier Season ಲೀಗ್ 2 ಇದರಲ್ಲಿ ಮೂರು ಎಪಿಸೋಡ್’ನಲ್ಲಿ ಅದ್ಭುತ ಹಾಸ್ಯ ನಟನೆಯ ವೀಕ್ಷಕರ ಮೆಚ್ಚುಗೆ ಪಾತ್ರವಾಗಿದೆ.
ಚಿತ್ರಕಲೆಯಲ್ಲಿ ಶಾಲಾ, ತಾಲೂಕು, ಜಿಲ್ಲಾ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾನೆ. ತಾನು ಕಲಿಯುತ್ತಿರೋ ಶಾಲೆಯಲ್ಲಿ ಯಾವುದೇ ಸ್ಪರ್ಧೆ ಇದ್ದರೂ ಅಮನ್ ಮಡಿಲಿಗೆ ಒಂದಲ್ಲ ಒಂದು ಬಹುಮಾನ ಕಟ್ಟಿಟ್ಟ ಬುತ್ತಿ. ಛಲವಿದ್ದರೆ ಗೆಲ್ಲೊ ಹಾದಿ ಸುಲಭ ಅನ್ನೋ ಹಾಗೆ ಸದಾ ಕ್ರೀಡೆಯಲ್ಲಿ ಮುಂದು ನಮ್ಮ ಈ ಹುಡುಗ. ನಮ್ಮ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಕುಸಲ್ದ ವಸರ್ ಸ್ಟಾಂಡ್ ಅಪ್ ಕಾಮಿಡಿ ಸ್ಪರ್ಧೆಯಲ್ಲಿ ಫೈನಲ್ ಆಯ್ಕೆಯಾಗಿದ್ದಾನೆ.
ಖಾಸಗಿ ವಾಹಿನಿಗಳಾದ ನಮ್ಮ ಕುಡ್ಲ ಚಾನೆಲ್ ಮತ್ತು ಮುಕ್ತ ಟಿವಿ ನೇರ ಸಂದರ್ಶನ ಮಾಡಿದ್ದಾರೆ. ಸಿನಿಮಾ ಕ್ಷೇತ್ರಕ್ಕೂ ಲಗ್ಗೆ ಇಟ್ಟಿರುವ ಈ ಪೋರ ಕನ್ನಡ ಚಿತ್ರಗಳಾದ ರೂಪಾಂತರ ಹಾಗೂ ಜಿಷ್ಣು ಮತ್ತು ಪೆಪೆರೆರೆ ಪೆರೆರೆರೆ ತುಳು ಚಿತ್ರದಲ್ಲಿ ನಟಿಸಿದ್ದಾನೆ.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕರಂಬಾರು ಕನ್ನಡ ಚಿತ್ರಕ್ಕೆ ಆಯ್ಕೆಯಾಗಿದ್ದಾನೆ. ನಮ್ಮ ಟಿವಿಯ ದೈನಂದಿನ ಕಾರ್ಯಕ್ರಮ ನಮ್ಮ ಶುಭಾಷಯ ನೇರ ಪ್ರಸಾರ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಡುತ್ತಿರುವ ಅಮನ್ ಚಿಕ್ಕ ವಯಸ್ಸಿನಲ್ಲಿಯೇ ಮಹೇಂದ್ರ ಕಾರ್ಮತ್ತು, ನಂದಿನಿ ಕಷಾಯ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು ಹೆಮ್ಮೆಯ ವಿಚಾರ. ಕರುನಾಡ ರಾಜ್ಯೋತ್ಸವ ಪ್ರಶಸ್ತಿ ಹಾಗೂ ವಿಶ್ವ ಮಾನ್ಯ ಕನ್ನಡಿಗರ ಪ್ರಶಸ್ತಿ ಸೇರಿದಂತೆ ಹಲವಾರು ಸಂಘ-ಸಂಸ್ಥೆಗಳು ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಿದೆ. ಬರುವ ವರ್ಷ ಅಂದರೆ 2020ರ ಜನವರಿ 1ರ ಸಿರಿಗನ್ನಡ ವಿಶ್ವ ರಾಷ್ಟ್ರೀಯ ಬಾಲಕಲಾರತ್ನ ರಾಷ್ಟ್ರಮಟ್ಟದ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾನೆ.
ಸೋಲೆ ಬರಲಿ ಗೆಲುವು ಇರಲಿ ಅಮನ್ ಕಲಾಸಾಧನೆ ನಿರಂತರವಾಗಿರಲಿ ಎಂಬುದೇ ನಮ್ಮೆಲ್ಲರ ಆಶಯ.
Get in Touch With Us info@kalpa.news Whatsapp: 9481252093
Discussion about this post