ನವದೆಹಲಿ: ಸಭ್ಯ, ದಕ್ಷ ರಾಜಕಾರಣಿ ಎಂದು ಖ್ಯಾತರಾಗಿದ್ದ ಶ್ರೀ ಅರುಣ್ ಜೇಟ್ಲಿ ಅವರು, 1952ರ ಡಿಸೆಂಬರ್ 28ರಂದು ನವದೆಹಲಿಯಲ್ಲಿ ಜನಿಸಿದರು. ಕಿಶನ್ ಹಾಗೂ ರತನ್ ಪ್ರಭಾ ಜೇಟ್ಲಿ ದಂಪತಿಗಳ ಪುತ್ರರಾದ ಇವರ ತಂದೆ ವಕೀಲರಾಗಿದ್ದರು. 1969-70ರ ಅವಧಿಯಲ್ಲಿ ನವದೆಹಲಿಯಲ್ಲಿ ಸೇಂಟ್ ಕ್ಸೇವಿಯರ್ಸ್ ಶಾಲೆಯಲ್ಲಿ ಅಭ್ಯಾಸ ಮಾಡಿದ ಜೇಟ್ಲಿ, 1973ರಲ್ಲಿ ನವದೆಹಲಿಯ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್’ನಲ್ಲಿ ವಾಣಿಜ್ಯ ಪದವಿಯನ್ನು ಪಡೆದುಕೊಂಡರು. 1977ರಲ್ಲಿ ದೆಹಲಿ ವಿಶ್ವವಿದ್ಯಾನಿಲಯದ ಫ್ಯಾಕಲ್ಟಿ ಆಫ್ ಲಾದಿಂದ ಕಾನೂನು ಪದವಿಯನ್ನು ಪಡೆದುಕೊಂಡರು. ತಮ್ಮ ವಿದ್ಯಾರ್ಥಿ ಜೀವನದಲ್ಲಿ, ಅವರ ವಿದ್ಯಾಭ್ಯಾಸದ ಹಾಗೂ ಇತರ ಚಟುವಟಿಕೆಗಳಲ್ಲಿ ಉತ್ತಮ ಮಟ್ಟದ ಸಾಧನೆಗಾಗಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು. 1974ರಲ್ಲಿ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದರು.
70ರ ದಶಕದಲ್ಲಿ ದೆಹಲಿ ವಿಶ್ವವಿದ್ಯಾನಿಲಯದ ಕ್ಯಾಂಪಸ್’ನಲ್ಲಿ ಜೇಟ್ಲಿಯವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್’ನ ವಿದ್ಯಾರ್ಥಿ ನಾಯಕರಾಗಿ ಗುರುತಿಸಿಕೊಂಡಿದ್ದ ಜೇಟ್ಲಿ, 1974ರಲ್ಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದರು. ದೇಶದಲ್ಲಿ ಆಂತರಿಕ ತುರ್ತು ಪರಿಸ್ಥಿತಿಯ (1975-77) ಘೋಷಣೆಯಾದಾಗ, 19 ತಿಂಗಳುಗಳ ಕಾಲ ಸೆರೆವಾಸದಲ್ಲಿದ್ದರು.
1973ರಲ್ಲಿ ರಾಜ್ ನರೇನ್ ಹಾಗೂ ಜಯಪ್ರಕಾಶ್ ನಾರಾಯಣ್ ಅವರ ನೇತೃತ್ವದಲ್ಲಿ ಆರಂಭವಾದ ಭ್ರಷ್ಟಾಚಾರಕ್ಕೆ ವಿರುದ್ಢದ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜೇಟ್ಲಿ ಅವರನ್ನು, ಜಯಪ್ರಕಾಶ್ ನಾರಾಯಣ್ ಅವರು ಇವರನ್ನು ವಿದ್ಯಾರ್ಥಿಗಳ ನ್ಯಾಷನಲ್ ಕಮಿಟಿಯ ಹಾಗೂ ಯೂತ್ ಆರ್ಗನೈಸೇಶನ್‌ನ ಸಂಯೋಜಕರಾಗಿ ನೇಮಕಗೊಳಿಸಿದರು.
ಸತೀಶ್ ಝಾ ಹಾಗೂ ಸ್ಮಿತು ಕೋಠಾರಿ ಅವರೊಂದಿಗೆ ಸೇರಿ ನಾಗರಿಕ ಹಕ್ಕು ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಪಿಯುಸಿಎಲ್ ಬುಲೆಟಿನ್ ಹೊರತಂದರು ಜೈಲಿನಿಂದ ಹೊರಬಂದ ಮೇಲೆ ಅವರು ಜನಸಂಘವನ್ನು ಸೇರಿದರು.
ಅರುಣ್ ಜೇಟ್ಲಿಯವರು ತಮ್ಮ ವಿದ್ಯಾರ್ಥಿಯಾಗಿದ್ದ ದಿನಗಳಲ್ಲಿಯೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿದ್ಯಾರ್ಥಿ ವಿಭಾಗವಾದ ಎಬಿವಿಪಿಯ ಸಕ್ರಿಯ ಸದಸ್ಯರಾಗಿದ್ದರು. 1999ರ ಚುನಾವಣೆಯ ಸಮಯದಲ್ಲಿ ಇವರು ಬಿಜೆಪಿ ಪಕ್ಷದ ಪರವಾಗಿ ಮಾತನಾಡುವ ವಕ್ತಾರರಾದರು ಸೇವೆ ಆರಂಭಿಸಿದರು.
ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಅಡಿಯಲ್ಲಿ ವಾಜಪೇಯಿ ಸರ್ಕಾರ ಅಧಿಕಾರಕ್ಕೆ ಬಂದಾಗ, 1999 ಅಕ್ಟೋಬರ್ 13 ರಲ್ಲಿ ಇವರು ಮಾಹಿತಿ ಹಾಗೂ ಪ್ರಸಾರದ ರಾಜ್ಯ ಮಂತ್ರಿಯಾಗಿ (ಸ್ವತಂತ್ರ ಹೊಣೆಗಾರಿಕೆ) ನೇಮಕಗೊಂಡರು. ಅಲ್ಲದೇ ಅವರು ಬಂಡವಾಳಹರಣದ ರಾಜ್ಯ ಮಂತ್ರಿಯಾಗಿ (ಸ್ವತಂತ್ರ ಹೊಣೆಗಾರಿಕೆ) ನೇಮಕಗೊಂಡರು, ಹೊಸ ಮಂತ್ರಿಮಂಡಲವು ಮೊದಲ ಬಾರಿಗೆ ವಲ್ಡರ್ ಟ್ರೇಡ್ ಆರ್ಗನೈಸೇಶನ್ (ಡಬ್ಲುಟಿಒ) ಆಳ್ವಿಕೆಯಡಿಯಲ್ಲಿ ಬಂಡವಾಳಹರಣ ನಿಯಮಕ್ಕೆ ಮಂತ್ರಿ ಪದವಿಯನ್ನು ನಿರ್ಮಿಸಿತು.
ಕಾನೂನು, ನ್ಯಾಯಾಂಗ ಹಾಗೂ ಕಂಪನಿಗಳ ವ್ಯವಹಾರದ ಯೂನಿಯನ್ ಕ್ಯಾಬಿನೆಟ್ ಮಂತ್ರಿ ರಾಮ್ ಜೇಟ್ಮಲಾನಿ ಅವರು ರಾಜೀನಾಮೆ ನೀಡಿದ ನಂತರ ಜೇಟ್ಲಿಯವರು ಜುಲೈ 23, 2000ರಲ್ಲಿ ಕಾನೂನು, ನ್ಯಾಯಾಂಗ ಹಾಗೂ ಕಂಪನಿಗಳ ವ್ಯವಹಾರ ಖಾತೆಯನ್ನು ವಹಿಸಿಕೊಂಡು ಹೆಚ್ಚಿನ ಹೊಣೆಗಾರಿಕೆ ತೆಗೆದುಕೊಂಡರು.
ನವೆಂಬರ್ 2000ರಲ್ಲಿ ಕ್ಯಾಬಿನೆಟ್ ಮಂತ್ರಿಯಾಗಿ ಆಯ್ಕೆಯಾದರು ಜೊತೆಯಲ್ಲಿ ಕಾನೂನು, ನ್ಯಾಯಾಂಗ ಹಾಗೂ ಕಂಪನಿ ವ್ಯವಹಾರಗಳು ಹಾಗೂ ಶಿಪ್ಪಿಂಗ್ ಮಂತ್ರಿಯಾಗಿ ನೇಮಕಗೊಂಡರು. ಸಾರಿಗೆ ವಿಧಾನಗಳಿಂದ ಮಂತ್ರಿ ಪದವಿಯ ವಿಂಗಡಣೆಯಾದ ಮೇಲೆ ಮೊದಲಬಾರಿಗೆ ಶಿಪ್ಪಿಂಗ್ ಮಂತ್ರಿ ಪದವಿಯು ಇವರಿಗೆ ಲಭಿಸಿತು. ಸೆಪ್ಟೆಂಬರ್ 1, 2001ರಲ್ಲಿ ಶಿಪ್ಪಿಂಗ್ ಮಂತ್ರಿ ಪದವಿಯನ್ನು ತೊರೆದರು ಹಾಗೂ ಜುಲೈ 1, 2002ರಲ್ಲಿ ಕಾನೂನು, ನ್ಯಾಯಾಂಗ ಹಾಗೂ ಕಂಪನಿ ವ್ಯವಹಾರಗಳ ಖಾತೆಯನ್ನು ತೊರೆದು ಬಿಜೆಪಿಯ ಜನರಲ್ ಸೆಕ್ರೆಟರಿಯಾದರು ಹಾಗೂ ಅದರ ರಾಷ್ಟ್ರೀಯ ವಕ್ತಾರರಾದರು.
ಜನವರಿ 2003ರವರೆಗೆ ಇದೇ ಪದವಿಯಲ್ಲಿ ಮುಂದುವರೆದರು. 29 ಜನವರಿ 2003ರಲ್ಲಿ ಮತ್ತೊಮ್ಮೆ ಯೂನಿಯನ್ ಕ್ಯಾಬಿನೆಟ್ ಅನ್ನು ವಾಣಿಜ್ಯ ಕೈಗಾರಿಕೆ ಹಾಗೂ ಕಾನೂನು ನ್ಯಾಯಾಂಗ ಖಾತೆಯನ್ನು ವಹಿಸಿಕೊಳ್ಳುವುದರ ಮೂಲಕ ಸೇರಿದರು. ಮೇ 2004ರಲ್ಲಿ ಎನ್’ಡಿಎ ಸೋಲು ಅನುಭವಿಸಿದಾಗ, ಜೇಟ್ಲಿಯವರು ಬಿಜೆಪಿಯ ಜನರಲ್ ಸೆಕ್ರೆಟರಿ ಸ್ಥಾನಕ್ಕೆ ಹಿಂದಿರುಗಿದರು ಹಾಗೂ ಕಾನೂನು ವೃತ್ತಿಯನ್ನು ಮುಂದುವರೆಸಿದರು. ಅಲ್ಲಿಂದ ಜೇಟ್ಲಿಯವರು ಗುಜರಾತ್’ನಿಂದ ರಾಜ್ಯಸಭೆಯ ಸದಸ್ಯರಾಗಿದ್ದರು.
Discussion about this post