2018 ಜುಲೈ ತಿಂಗಳಲ್ಲಿ ಆರಂಭಗೊಂಡು, ಉತ್ತಮ ಉದ್ದೇಶದಿಂದ, ಕುಂದಾಪ್ರದ ಎಲ್ಲ ಬಂದುಗಳು, ಸ್ನೇಹಿತರು, ಊರಲ್ಲಿ ಇರುವವರು, ಪರ ಊರಲ್ಲಿ ಉರುವವರು ಎಲ್ಲರು ನಾವೆಲ್ಲ ಒಂದೇ ಕುಟುಂಬ ಅನ್ನೊ ರೀತಿ ಇರಲಿ ಹಾಗೆ ಊರನ್ನು ಬಿಟ್ಟು ಹೊರ ಊರಿಗೆ ಹೋದವರಿಗೆ ಆ ನೋವು ಕಾಡಬಾರದೆಂಬ ಉದ್ದೇಶದಿಂದ ಕುಂದಾಪ್ರದಲ್ಲಿ ನಡೆಯುವ ಎಲ್ಲಾ ಆಚರಣೆ ಸಂಪ್ರದಾಯ, ಹಬ್ಬ ಹರಿದಿನಗಳನ್ನು ನೆನಪು ಮಾಡಿಸುತ್ತಾ Kundapurian’s got talent ಅನ್ನೊ ಕಾರ್ಯಕ್ರಮದ ಮೂಲಕ ನಮ್ಮ ಕುಂದಾಪ್ರದ ಪ್ರತಿಭೆಗಳನ್ನು ಬೆಳಕಿಗೆ ತರುವ ಹಾಗೆ ನೆರಳು ಎನ್ನುವ ಕಾರ್ಯಕ್ರಮದ ಮೂಲಕ ಅಶಕ್ತರಿಗೆ, ನೊಂದವರಿಗೆ ನೆರವಾಗುವ ಉದ್ದೇಶದೊಂದಿಗೆ ಯಾರ ಮನಸ್ಸನ್ನು ನೋಯಿಸದೆ ಇನ್ನೂ ಅನೇಕ ಕಾರ್ಯಕ್ರಮಗಳ ಮೂಲಕ ಜನರಿಗೆ ನೆರವಾಗುವ ಮಾಹಿತಿಯನ್ನು ನೀಡುತ್ತಾ ಮನರಂಜನೆಯನ್ನು ನೀಡುವುದು ನಮ್ಮ ಉದ್ದೇಶ.
ನೊಂದರ್ ನೋವ್ ತಣ್ಸಿ, ಪ್ರತಿಭೆಗಳನ್ನ ಪ್ರೋತ್ಸಾಹಿಸಿ, ನಿಮ್ಮೆಲ್ಲರ್ ಸೊಡ್ಡಂಗ್ ಒಂದ್ ತಡ್ಕಾರು ನ್ಯಗಿ ಕಾಣ್ಕ್ ಅಂಬ್ದೆ ನಮ್ಮ್ ಈ ಪೇಜಿನ್ ಉದ್ದೇಶ.
ನಮ್ಮ ನಿಯೋಜಿತ ಕಾರ್ಯಕ್ರಮಗಳ ವಿವರ
1. ದಿನಕ್ಕೊಂದ್ ಒಳ್ಳೆ ಮಾತ್
2. ಮನ್ಸಿನ್ ಮಾತ್
3. ತಲಿಗ್ ಹುಳ ಬಿಟ್ಕಣಿ
4. Kundapurian’s got talent
5. ನೆರಳು
6. ಒಳಿತು ಮಾಡು ಮನ್ಸ
7. ಬದಲಾವಣೆ ನನ್ನಿಂದಲೆ ಶುರುವಾಗಲಿ
8. ಕುಂದಾಪ್ರ ದರ್ಶನ
9. ಹೋಯ್ ಇಲ್ಲ್ ಕೇಂಬ್ರಿಯಲಾ
10. ಬಪ್ರಿಯಲಾ ಒಂದ್ ಗಳ್ಗಿ ಮಾತಾಡ್ವಾ.
11. ಹ್ವಾಯ್ ಚಟ್ಟ್ ಗೇರ್ವಾ ಬನಿ.
12. Call in ಪಟ್ಟಂಗ
13. ಮಂಗ ಮಾಡ್ತಿ ಬನಿ
14. ನ್ಯಗ್ಯಾಡು ಯಾಪಾರ
15. ಕೊಂಗಾಟದ್ ಹೆಣ್ಣಿನ್ ಕೊಂಗಾಟದ್ ಮಾತ್
16. ನಿಮ್ಮನಿ ಹೆಣ್ಣಿನ್ ಮಾತ್
17. ನಡೆದು ಬಂದ ಹಾದಿ
18. ಮುಸ್ಸಂಜೆ ಮಾತು
ಈಗಾಗಲೆ ರೇಡಿಯೋ ಮತ್ತೆ ಟಿವಿ ಕಾರ್ಯಕ್ರಮಗಳನ್ನು ಹೋಲುವ Audio live ಮತ್ತೆ Video live ಮೂಲಕ ಕಾರ್ಯಕ್ರಮಗಳನ್ನು ಆರಂಭಿಸಿದ್ದು
1. ಚೇತನ್ ನೈಲಾಡಿಯವರ ಹ್ವಾಯ್ ಇಲ್ ಕೇಂಬ್ರಿಯಲ
2. ಭರತ್ ಶೆಟ್ಟಿ ಕರ್ಕಿಯವರ ನ್ಯಗ್ಯಾಡು ಯಾಪಾರ
3. ಶ್ರೇಯಾ ಶೆಟ್ಟಿ ಯವರ ನಿಮ್ಮನಿ ಹೆಣ್ಣಿನ್ ಮಾತ್
4. ಶ್ರೀಕಲಾ ಶೆಟ್ಟಿ ಯವರ ಕೊಂಗಾಟದ್ ಹೆಣ್ಣಿನ್ ಕೊಂಗಾಟದ್ ಮಾತ್
5. ಪ್ರದೀಪ್ ಪುತ್ರನ್ ರವರ ಮುಸ್ಸಂಜೆ ಮಾತು
6. Kundapurian’s got talent ಎನ್ನುವ ಕಾರ್ಯಕ್ರಮದ ಮೂಲಕ ನಮ್ಮೂರ ಪ್ರತಿಭೆಗಳನ್ನು ಜನರಿಗೆ ಪರಿಚಯಿಸುವ ಕಾರ್ಯಕ್ರಮ ನಮ್ಮದು
7. ನೆರಳು ಎನ್ನುವ ಕಾರ್ಯಕ್ರಮದ ಮೂಲಕ ಸಹಾಯದ ನಿರೀಕ್ಷೆಯಲ್ಲಿರುವವರಿಗೆ ನೆರಳಾಗುವ ಕನಸು ನಮ್ಮದು
8. ಒಳಿತು ಮಾಡು ಮನ್ಸ ಈ ಕಾರ್ಯಕ್ರಮದ ಮೂಲಕ ಒಳ್ಳೆಯ ಸಮಾಜಮುಖಿ ಕೆಲಸವನ್ನು ಮಾಡಿದವರ ಒಳ್ಳೆ ಕೆಲಸವನ್ನು ಜನರ ಮುಂದೆ ತಂದು ಅಂತಹ ಒಳ್ಳೆಯ ಕೆಲಸಗಳು ಜನರಿಗೆ ಮಾದರಿಯಾಗಲಿ ಅದೇ ರೀತಿಯ ಕೆಲಸಗಳನ್ನು ಉಳಿದವರು ಮಾಡಲಿ ಎನ್ನುವ ಉದ್ದೇಶ.
9. ನಡೆದು ಬಂದ ಹಾದಿ ಈ ಕಾರ್ಯಕ್ರಮ ನಮ್ಮೂರಿನಲ್ಲಿ ಸಾಧನೆ ಮಾಡಿರುವ ಸಾಧಕರು ನಡೆದು ಬಂದ ಹಾದಿ ಅವರ ಅನುಭವಗಳನ್ನು ಜನರ ಮುಂದಿಡುವ ಕಾರ್ಯಕ್ರಮ.
ಅದೇ ರೀತಿ ಆಗಸ್ಟ್’ನಲ್ಲಿ ಪ್ರಾರಂಭಗೊಂಡ ಮುದ್ದು ಕೃಷ್ಣ ಸ್ಪರ್ಧೆ-2018 ಮಕ್ಕಳ ಮುದ್ದಾದ ಕೃಷ್ಣನ ಭಾವಚಿತ್ರ ಸ್ಪರ್ಧೆಗೆ ಜನರಿಂದ ಯತ್ತಮ ಪ್ರತಿಕ್ರಿಯೆ ದೊರೆತಿದೆ.
ನಮ್ಮ ಪೇಜ್ ಆರಂಭಗೊಂಡ ಮೊದಲ ಎರಡು ತಿಂಗಳುಗಳಲ್ಲೇ ಸುಮಾರು 5 ಸಾವಿರಕ್ಕೂ ಹೆಚ್ಚು ಮೆಚ್ಚುಗೆಯನ್ನು ಪಡೆದಿರುವುದು ನಮಗೆ ಸಂತೋಷವನ್ನು ತಂದಿರುವುದಲ್ಲದೇ ಇನ್ನು ಅನೇಕ ಉತ್ತಮ ಕಾರ್ಯಗಳನ್ನು ನೀಡಲು ಪ್ರೇರಣೆಯಾಗಿದೆ.
ಅದೇ ರೀತಿ ನಮ್ಮ ಈ ತಂಡದಲ್ಲಿ ನಮ್ಮೊಂದಿಗೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸದಾ ನಮ್ಮ ಫೇಸ್’ಬುಕ್ ಪೇಜ್’ನ ಏಳಿಗೆಗಾಗಿ ಸಂತೋಷದಿಂದ ಕೆಲಸ ಮಾಡುವ ನಮ್ಮ ಪೇಜ್’ನ ಮುಖ್ಯಸ್ಥರು ಭರತ್ ಶೆಟ್ಟಿ ಕರ್ಕಿ, ಉಮೇಶ್ ಶೆಟ್ಟಿ ಅರೆಶಿರೂರ್, ಅಶ್ವಿತ್ ಶೆಟ್ಟಿ ಕೊಡ್ಲಾಡಿ, ಶ್ರೇಯಾ ಶೆಟ್ಟಿ, ಶ್ರೀಕಲಾ ಶೆಟ್ಟಿ, ಪ್ರದೀಪ್ ಪುತ್ರನ್, ಚೇತನ್ ನೈಲಾಡಿ, ಪ್ರಮೋದ್ ಪುತ್ರನ್, ವಿಖ್ಯಾತ್ ಜಿ.ಕೆ. ರಾಮ ಶೆಟ್ಟಿ ಅತ್ತಿಕಾರ್, ಕಾರ್ತಿಕ್, ರಾಘವೇಂದ್ರ ಶೆಟ್ಟಿ ಹಾಗೂ ಎಲ್ಲ ನಮ್ಮ ಕುಟುಂಬದ ಸದಸ್ಯರು.
ಸದಾ ನಿಮ್ಮ ಪ್ರೀತಿ, ಸಹಕಾರ, ಪ್ರೋತ್ಸಾಹದ ನಿರೀಕ್ಷೆಯಲ್ಲಿ
ಧನ್ಯವಾದಗಳು
ಕುಂದಾಪ್ರ ಕುಟುಂಬ ತಂಡ
Discussion about this post