ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ಮಾರಕ ಕೊರೋನಾ ವೈರಸ್ ತಡೆಗಟ್ಟಲು ದೇಶದಲ್ಲಿ ಹೇರಲಾಗಿರುವ ಲಾಕ್ ಡೌನ್ ಎಪ್ರಿಲ್ 14ರ ನಂತರವೂ ಸಹ ಮುಂದುವರೆಯುವುದು ಬಹುತೇಕ ಖಚಿತವಾಗಿದ್ದು, ಕೇಂದ್ರದ ಈ ಚಿಂತನೆಗೆ ಪ್ರತಿಪಕ್ಷಗಳೂ ಸಹ ಸಮ್ಮತಿ ಸೂಚಿಸಿವೆ.
ಇಂದು ಸಂಜೆ ಪ್ರಧಾನಿ ಅಧ್ಯಕ್ಷತೆಯಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಸರ್ವಪಕ್ಷಗಳ ಸಭೆ ನಡೆದಿದ್ದು, ಲಾಕ್ ಡೌನ್ ಮಾಡಿದ್ದರೂ ಕೊರೋನಾ ಸೋಂಕು ಹತೋಟಿಗೆ ಬಾರದ ಹಿನ್ನೆಲೆಯಲ್ಲಿ ಲಾಕ್ ಡೌನ್ ಎಪ್ರಿಲ್ 14ರ ನಂತರವೂ ಮುಂದುವರೆಸುವ ಅಗತ್ಯವಿದೆ ಎಂದಿದ್ದಾರೆ.
ಪ್ರಸಕ್ತ ಪರಿಸ್ಥಿತಿಯಲ್ಲಿ ದೇಶದಲ್ಲಿ ಏಕಕಾಲಕ್ಕೆ ಲಾಕ್ ಡೌನ್ ತೆರವುಗೊಳಿಸುವುದು ಸೂಕ್ತ ಎನಿಸುತ್ತಿಲ್ಲ. ಹೀಗಾಗಿ, ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಯಲ್ಲಿ ಚರ್ಚಿಸಿ, ಪರಿಸ್ಥಿತಿ ಅವಲೋಕಿಸಿ ತೀರ್ಮಾನಿಸಲಾಗುವುದು ಎಂದು ಚರ್ಚೆಯಾಗಿದೆ.
ವೀಡಿಯೋ ಕಾನ್ಫರೆನ್ಸ್’ನಲ್ಲಿ ಸಮಾಜವಾದಿ ಪಕ್ಷದ ರಾಮ್ ಗೋಪಾಲ್ ಯಾದವ್, ಬಿಎಸ್ಪಿಯ ಸತೀಶ್ ಮಿಶ್ರಾ, ಲೋಕ್ ಜನಶಕ್ತಿ ಪಕ್ಷದ ಚಿರಾಗ್ ಪಾಸ್ವಾನ್, ಶಿರೋಮಣಿ ಅಕಾಲಿ ದಳದ ಸುಖ್ ಬೀರ್ ಸಿಂಗ್ ಬಾದಲ್, ಜನತಾದಳ(ಯು)ದ ರಾಜೀವ್ ರಾಜನಾಥ್ ಸಿಂಗ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
Get in Touch With Us info@kalpa.news Whatsapp: 9481252093
















