ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕುರಿಗಳು ಸಾರ್ ॥
ಸಾಗಿದ್ದೇ ಗುರಿಗಳು
ಮಂದೆಯಲ್ಲಿ ಒಂದಾಗಿ ಸ್ವಂತತೆಯೇ ಬಂದಾಗಿ
ಅದರ ಬಾಲ ಇದು ಮತ್ತೆ ಇದರ ಬಾಲ ಅದುಮೂಸಿ
ದನಿ ಕುಗ್ಗಿಸಿ ತಲೆ ತಗ್ಗಿಸಿ ಅಂಡಲೆಯುವ ನಾವು ನೀವು
ಜೋಗದ ಸಿರಿ ಬೆಳಕಿನಲ್ಲಿ ಎಂದು ನಿತ್ಯೋತ್ಸವನ್ನು ಸಾಹಿತ್ಯದ ಮೂಲಕ ಹರಸಿ ನಾಡಿನ ಮನಮನೆಗಳಲ್ಲಿ ನೆಲೆಸಿದ್ದ ನಿತ್ಯೋತ್ಸವ ಕವಿ ಡಾ. ನಿಸಾರ್ ಅಹಮದ್ ಅವರ ನಿಧನ ಕನ್ನಡ ಸಾರಸ್ವತ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಕಂಬನಿ ಮಿಡಿದಿದ್ದಾರೆ.
ನಿಸರ್ಗದ ರಮಣೀಯತೆಯನ್ನು ಸ್ವಚ್ಛ ಕನ್ನಡದಲ್ಲಿ ವರ್ಣಿಸುವ ಮೂಲಕ ಪ್ರಕೃತಿಯ ಸೌಂದರ್ಯವನ್ನು ಉಣಬಡಿಸಿದ್ದ ಸಾಹಿತ್ಯ ಶ್ರೇಷ್ಠರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಅವರ ಕುಟುಂಬಕ್ಕೂ, ಸ್ನೇಹಿತರಿಗೂ, ಸಾಹಿತ್ಯಾಸಕ್ತರಿಗೂ ನೀಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
Get in Touch With Us info@kalpa.news Whatsapp: 9481252093
Discussion about this post