ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಚಾಮರಾಜಪೇಟೆಯ ಪ್ರಮುಖ ರಸ್ತೆಯ ಬದಿಯಲ್ಲಿ ರಾಜರಾಜೇಶ್ವರಿ ನಗರದ ದಿ ಕಿಂಗ್ಡಮ್ ಕಾಲೇಜಿನ ವಿದ್ಯಾರ್ಥಿಗಳು ಜೋಶ್ ಅಭಿಯಾನ ನಡೆಸಿದರು.
ಜೋಶ್ ಅಭಿಯಾನದ ಅಡಿಯಲ್ಲಿ ಮೆರವಣಿಗೆಯನ್ನು ಡಿ.25ರಿಂದ 31ರವರೆಗೆ ನಗರದ ಅನೇಕ ಭಾಗಗಳಲ್ಲಿ ಹಮ್ಮಿಕೊಳ್ಳಲಾಗಿತ್ತು.
ಇಂದು ಜೋಶ್ ಅಭಿಯಾನಕ್ಕೆ ತೆರೆ ಬೀಳಲಿದ್ದು ಇಂದು ನಗರದ ನಾನಾ ಭಾಗಗಳಲ್ಲಿ ಮೆರೆವಣಿಗೆ ನಡೆಸಿ ನಾಗರೀಕರು ಉಪಯೋಗಿಸಿದ ಗೊಂಬೆ ಹಾಗೂ ಆಟದ ಸಾಮಾನುಗಳನ್ನು ಸಂಗ್ರಹಿಸುತ್ತಿದ್ದಾರೆ.
2020ರ ಸಾಲಿಗೆ ಇಂದು ವಿದಾಯ ಹೇಳಿ 2021ರ ಕ್ಯಾಲೆಂಡರ್ ಬದಲಾವಣೆಯ ದಿನಕ್ಕೆ ಸ್ವಾಗತ ಕೋರಿ ನಗರದಲ್ಲಿ ಇರುವ ಬಡಮಕ್ಕಳಿಗೆ ಅವರು 7 ದಿನಗಳಿಂದ ಸಂಗ್ರಹ ಮಾಡಿರುವ ಆಟದ ವಸ್ತುಗಳನ್ನು ಹಾಗೂ ಗೊಂಬೆಗಳನ್ನು ವಿತರಣೆ ಮಾಡಲಿದ್ದಾರೆ.
2020ಕ್ಕೆ ವಿದಾಯ 2021ಕ್ಕೆ ಸ್ವಾಗತ
ಕಾಲೇಜಿನ ಪ್ರಮುಖರಾದ ಡಾ. ದೀಪಕ್ ಶಿಂಧೆ ಅವರ ಮಾರ್ಗದರ್ಶನದಲ್ಲಿ ಹಮ್ಮಿಕೊಂಡಿರುವ 7 ದಿನಗಳ ಜೋಶ್ ಅಭಿಯಾನ-ಮಕ್ಕಳಿಗೆ ಗೊಂಬೆ ವಿತರಣೆ ಮೂಲಕ ಇಂದು ತೆರೆ ಬೀಳಲಿದೆ.
ದಿ ಕಿಂಗ್ಡಮ್ ಕಾಲೇಜು ಯಾವಾಗಲೂ ಸಮಾಜಕ್ಕೆ ಉತ್ತಮ ಕೊಡುಗೆ ಗಳನ್ನು ನೀಡುತ್ತಾ ಬಂದಿದೆ. ಕೋವಿಡ್19 ರ ಉತ್ತುಂಗದಲಿದ್ದಾಗಲೂ ನಾವು ಆರ್.ಆರ್. ನಗರ, ಚಾಮರಾಜಪೇಟೆ, ವಿಜಯನಗರ ಮತ್ತು ಬಸವನಗುಡಿ ಮುಂತಾದ ಪ್ರದೇಶಗಳಲ್ಲಿ ಜನರಿಗೆ 25 ಸಾವಿರ ಉಚಿತ ಮುಖಗವಸುಗಳನ್ನು ವಿತರಿಸಿದ್ದೇವೆ. ಆರ್.ಆರ್. ನಗರದ ಜನರಿಗೆ ಮೂಲ ಆಹಾರ ಪಡಿತರವನ್ನು ವಿತರಿಸುವ ಮೂಲಕ ಮಿಡ್ ಕೋವಿಡ್ ಸಮಯದಲ್ಲಿ ನಾವು ಮಿಷನ್ ಫುಡ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ.
-ಆಯುಷ್ ಕೆ. ಜೈನ್
ಬಿಬಿಎ ಅಂತಿಮ ವರ್ಷದ ವಿದ್ಯಾರ್ಥಿ
ಇಂದು 2020 ಕ್ಕೆ ಕೃತಜ್ಞತೆಯಿಂದ ವಿದಾಯ ಹೇಳಿ 2021 ರ ಹೊಸ ವರ್ಷಕ್ಕೆ (ಕ್ಯಾಲೆಂಡರ್ ಬದಲಾವಣೆ ದಿನಕ್ಕೆ) ಸ್ವಾಗತ ಕೋರಿ ಸಿಲಿಕಾನ್ ಸಿಟಿಯಲ್ಲಿ ಅವರ ವ್ಯಾಪ್ತಿಯಲ್ಲಿ ಬರುವ ನಿರ್ಗತಿಕ ಮತ್ತು ಬಡ ಮಕ್ಕಳಿಗೆ ಆಟಿಕೆಗಳ ವಿತರಣೆಯನ್ನು ಮಾಡಲಿದ್ದಾರೆ.

ಜೋಶ್ ಎಂದು ಕರೆಯಲ್ಪಡುವ ಈವೆಂಟ್. ಸಂತೋಷ, ನಗುಗಳನ್ನು ಹರಡಲು ಮತ್ತು 2021 ಕ್ಕೆ ಜನರನ್ನು ಸಾಕಷ್ಟು ಜೋಶ್‌ನೊಂದಿಗೆ ಸ್ವಾಗತ ಕೋರುತ್ತಾ 2021 ಎಲ್ಲರಿಗೂ ಶುಭ ತರಲಿ ಹಾಗೂ ಭಾರತ ಮತ್ತು ವಿಶ್ವ ಕೋವಿಡ್ 19 ಎಂಬ ಪೆಡಂಭೂತದಿಂದ ಮುಕ್ತವಾಗಲಿ ಎಂಬುದು ಅಭಿಯಾನದ ಉದ್ದೇಶ.
ಸಂತೋಷವನ್ನು ಹರಡುವುದು ಮತ್ತು ಮಕ್ಕಳನ್ನು ಆಕರ್ಷಿಸುವುದಾಗಿದೆ. ಕಿಂಗ್ಡಮ್ ಕಾಲೇಜಿಗೆ ಯಾವುದೇ ನಿರ್ದಿಷ್ಟ ಧರ್ಮವನ್ನು ಉತ್ತೇಜಿಸುವ ಉದ್ದೇಶವಿಲ್ಲ. ಈ ಕೃತ್ಯದ ಯಾವುದೇ ತಪ್ಪು ಕಲ್ಪನೆಗೆ ನಾವು ಯಾವುದೇ ಜವಾಬ್ದಾರಿಯನ್ನು ಹೊಂದಿಲ್ಲ. ಇದು ಕೇವಲ ಸಾಮಾಜಿಕ ಕಾರಣಕ್ಕಾಗಿ ಎನ್ನುತ್ತಾರೆ ಕಾಲೇಜಿನ ವಿದ್ಯಾರ್ಥಿ ಆಯುಷ್ ಕೆ. ಜೈನ್.
(ವರದಿ: ತೀರ್ಥಹಳ್ಳಿ ಅನಂತ ಕಲ್ಲಾಪುರ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news








Discussion about this post