ಭದ್ರಾವತಿ: ಅಲ್ಪಸಂಖ್ಯಾತರರಿಗೆ ಸರಕಾರ ಮತ್ತಿತರೆ ಸಂಘ ಸಂಸ್ಥೆಗಳ ಮೂಲಕ ದೊರೆಯುವ ಸೌಲಭ್ಯಗಳನ್ನು ಸಾಮಾಜಿಕ ಕಳಕಳಿಹೊತ್ತು ಪ್ರಾಮಾಣಿಕವಾಗಿ ಅರ್ಹ ಫಲಾನುಭವಿಗಳಿಗೆ ದೊರಕಿಸಲು ಭದ್ರಾವತಿ ತಾಲೂಕು ಮುಸ್ಲಿಂ ಸಮಾಜದ ಸಂಘವನ್ನು ಸ್ಥಾಪಿಸಲಾಗಿದೆ ಎಂದು ಸಮಾಜದ ಅಧ್ಯಕ್ಷ ಅಮೀರ್ ಜಾನ್ ಹೇಳಿದರು.
ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಸಂಘದ ವತಿಯಿಂದ ಶಾಲೆಗಳ, ಕಲ್ಯಾಣ ಮಂದಿರಗಳ ಸ್ಥಾಪನೆ, ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ಸಲುವಾಗಿ ವಿದ್ಯಾರ್ಥಿ ವೇತನ ಮುಂತಾದ ಹತ್ತು ಹಲವಾರು ಕಾರ್ಯಕ್ರಮಗಳ ಯೋಜನೆ ರೂಪಿಸಲಾಗಿದೆ. ಕಾಲೇಜು ವಿದ್ಯಾರ್ಥಿಗಳಾದಿಯಾಗಿ ಯುವ ಪೀಳಿಗೆ ಇಂದು ಮಾದಕ ವಸ್ತುಗಳಾದ ಗಾಂಜ, ಅಫೀಮು, ಮದ್ಯ ಸೇವೆನೆಗಳಿಗೆ ದಾಸರಾಗಿದ್ದಾರೆ. ಇವರಿಗೆ ಅರಿವು ಮೂಡಿಸುವುದು ಸಮಾಜದ ಕರ್ತವ್ಯವಾಗಿದೆ. ಪ್ರಾಯೋಗಿಕವಾಗಿ ತಾಲೂಕಿನ ಎಲ್ಲಾ ಮಸೀದಿಗಳಿಗೆ ತೆರಳಿ ಮೌಲಾನಗಳ ಮೂಲಕ ಯುವಕರಿಗೆ ಅರಿವು ಮೂಡಿಸುವ ಗುರಿ ಹೊಂದಲಾಗಿದೆ. ಹಾದಿ ತಪ್ಪುತ್ತಿರುವ ಯುವ ಜನಾಂಗಕ್ಕೆ ಅರಿವು ಮೂಡಿಸಲು ಮುಂದಾಗಿರುವ ಸಮಾಜಕ್ಕೆ ಪೋಷಕರ ಸಹಕಾರ ಅಗತ್ಯವಿದೆ ಎಂದರು.
ಸಂಘದ ಸಹ ಕಾರ್ಯದರ್ಶಿ ಎ. ಮಸ್ತಾನ್ ಮಾತನಾಡಿ ಸಮಾಜದ ಅಭಿವೃದ್ದಿಗಾಗಿ ರಚಿಸಿರುವ ಸಂಘಕ್ಕೆ ಎಲ್ಲರ ಸಹಕಾರ ಅಗತ್ಯ. ಸಮಾಜದ ಹಿತದೃಷ್ಟಿಯಿಂದ ಸಂಘಕ್ಕಾಗಿ ಶ್ರಮಿಸುವವರವನ್ನು ಆಹ್ವಾನಿಸುತ್ತದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಮುಖಂಡರಾದ ಜಾವೀದ್ ಖಾನ್, ಅಬ್ದುಲ್ ಖದೀರ್, ಬಾಬಾಜಾನ್, ಸಹೀದ್ ಖಾದರ್, ಮುನೀರ್ ಭಾಷ, ಫೀರ್ ಷರೀಫ್, ಜೆಬಿಟಿ ಬಾಬು, ಮುರ್ತುಜಾಖಾನ್ ಮುಂತಾದವರಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post