ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಯುಗಾದಿ ಹಬ್ಬ ಆಚರಿಸುವ ಭರದಲ್ಲಿ ಜನರು ಬೀದಿಗಳಿದ ಹಿನ್ನೆಲೆಯಲ್ಲಿ ಇಂದು 10 ಹೊಸ ಕೊರೋನಾ ಸೋಂಕಿತರ ಪ್ರಕರಣ ದೃಢಪಟ್ಟಿದ್ದು, ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 51ಕ್ಕೆ ಏರಿದೆ.
ಈ ಕುರಿತಂತೆ ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಟ್ವೀಟ್ ಮಾಡಿದ್ದು, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 51ಕ್ಕೇರಿದ್ದು, ಇದರಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ, ಬೆಳಗ್ಗೆ 11.00 ಗಂಟೆವರೆಗೆ 10 ಹೊಸ #ಕೊರೊನಾ ಸೋಂಕು ಪ್ರಕರಣಗಳು ದೃಢಪಡುವುದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 51ಕ್ಕೇರಿದೆ. ಈ ಪೈಕಿ ಒಬ್ಬ ಸೋಂಕಿತ ಮೃತ ಪಟ್ಟಿದ್ದು, ಎಲ್ಲ ಸೋಂಕಿತರ ಚಿಕಿತ್ಸೆ ಹಾಗೂ ಸೋಂಕಿತರ ಸಂಪರ್ಕದಲ್ಲಿದ್ದವರ ಪತ್ತೆ, ಪ್ರತ್ಯೇಕಿಸುವಿಕೆ ಮುಂದುವರೆದಿದೆ. #Covid_19 #Covidpendmic @BSYBJP pic.twitter.com/rWQJxFpUZw
— CM of Karnataka (@CMofKarnataka) March 25, 2020
ಇನ್ನು, ಎಲ್ಲ ಸೋಂಕಿತರ ಚಿಕಿತ್ಸೆ ಹಾಗೂ ಸೋಂಕಿತರ ಸಂಪರ್ಕದಲ್ಲಿದ್ದವರ ಪತ್ತೆ, ಪತ್ಯೇಕಿಸುವ ಕೆಲಸ ಮುಂದುವರೆದಿದೆ ಎಂದಿದ್ದಾರೆ.
Get in Touch With Us info@kalpa.news Whatsapp: 9481252093
Discussion about this post