No Result
View All Result
Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp
English Articles

Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp

by ಕಲ್ಪ ನ್ಯೂಸ್
March 18, 2026
0

Kalpa Media House  |  Manipal | Manipal Institute of Technology (MIT), Manipal, a constituent unit of Manipal Academy of Higher...

Read moreDetails
Bengaluru Gets a World-Class Electronics Co-Innovation Hub as Henkel Launches Advanced Application Center

Bengaluru Gets a World-Class Electronics Co-Innovation Hub as Henkel Launches Advanced Application Center

March 17, 2026
Malnad is a Cultural ‘Gharana’ of Great Minds: Dr. Jayamala at Sahyadri Utsava

Malnad is a Cultural ‘Gharana’ of Great Minds: Dr. Jayamala at Sahyadri Utsava

March 13, 2026
ABB deepens Karnataka footprint with new investments to serve high growth emerging sectors

ABB deepens Karnataka footprint with new investments to serve high growth emerging sectors

March 12, 2026
“Rasamum Rasayanamum- Artistry meets Chemistry”

“Rasamum Rasayanamum- Artistry meets Chemistry”

March 11, 2026
  • Advertise With Us
  • Grievances
  • About Us
  • Contact Us
Sunday, March 22, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Small Bytes

ಆಪತ್ಕಾಲದ ಸ್ಥಿತಿಯಲ್ಲಿ ಧರ್ಮಶಾಸ್ತ್ರಕ್ಕನುಸಾರ ಗುರುಪೂರ್ಣಿಮೆಯನ್ನು ಆಚರಿಸುವ ಪದ್ಧತಿ

ಗುರುಕೃಪಾಯೋಗ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
July 4, 2020
in Small Bytes, Special Articles
0
ಆಪತ್ಕಾಲದ ಸ್ಥಿತಿಯಲ್ಲಿ ಧರ್ಮಶಾಸ್ತ್ರಕ್ಕನುಸಾರ ಗುರುಪೂರ್ಣಿಮೆಯನ್ನು ಆಚರಿಸುವ ಪದ್ಧತಿ
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಅರ್ಥ
ಕೃಪೆ ಶಬ್ದವು ‘ಕೃಪ್’ ಧಾತುವಿನಿಂದ ನಿರ್ಮಾಣವಾಗಿದೆ. ‘ಕೃಪ್’ ಎಂದರೆ ದಯೆ ತೋರಿಸುವುದು ಮತ್ತು ಕೃಪೆ ಎಂದರೆ ದಯೆ, ಕರುಣೆ, ಅನುಗ್ರಹ ಅಥವಾ ಪ್ರಸಾದ. ಗುರುಕೃಪೆಯ ಮಾಧ್ಯಮದಿಂದ ಜೀವವು ಶಿವನೊಂದಿಗೆ ಏಕರೂಪವಾಗುವುದಕ್ಕೆ, ಅಂದರೆ ಜೀವಕ್ಕೆ ಈಶ್ವರ ಪ್ರಾಪ್ತಿಯಾಗುವುದಕ್ಕೆ ‘ಗುರುಕೃಪಾಯೋಗ’ ಎಂದು ಹೇಳುತ್ತಾರೆ.

ಮಹತ್ವ
ಬೇರೆಬೇರೆ ಯೋಗಮಾರ್ಗಗಳಿಂದ ಸಾಧನೆ ಮಾಡುವುದರಲ್ಲಿ ಅನೇಕ ವರ್ಷಗಳನ್ನು ವ್ಯರ್ಥಗೊಳಿಸದೇ, ಅಂದರೆ ಈ ಎಲ್ಲಾ ಮಾರ್ಗಗಳನ್ನು ಬದಿಗಿರಿಸಿ, ಗುರುಕೃಪೆಯನ್ನು ಬೇಗನೇ ಹೇಗೆ ಪಡೆಯುವುದು ಎಂಬುದನ್ನು ಗುರುಕೃಪಾಯೋಗವು ಕಲಿಸುತ್ತದೆ. ಆದುದರಿಂದ ಸಹಜವಾಗಿಯೇ ಈ ಮಾರ್ಗದಿಂದ ಆಧ್ಯಾತ್ಮಿಕ ಉನ್ನತಿಯು ಶೀಘ್ರಗತಿಯಲ್ಲಿ ಆಗುತ್ತದೆ.

ವೈಶಿಷ್ಟ್ಯ
ಗುರುಕೃಪಾಯೋಗಾನುಸಾರ ಸಾಧನೆ ಮಾಡುವಾಗ ಪ್ರತಿಭಾಶಕ್ತಿಯು (ಜ್ಞಾನ ಶಕ್ತಿ) ಬೇಗನೇ ಜಾಗೃತವಾಗುವುದು, ಅಂದರೆ ಯೋಗ್ಯ ಮತ್ತು ಅಯೋಗ್ಯದ ಬಗ್ಗೆ ಈಶ್ವರನು ಮಾರ್ಗದರ್ಶನ ಮಾಡುವುದು: ಗುರುಕೃಪಾಯೋಗಾನುಸಾರ ಸಾಧನೆಯನ್ನು ಮಾಡುವಾಗ ಯೋಗ್ಯ ಮಾರ್ಗಕ್ಕನುಸಾರ ಸಾಧನೆಯು ಪ್ರಾರಂಭವಾಗುವುದರಿಂದ ಸಾಧಕನಿಗೆ ಹೊಸ ಹೊಸ ವಿಷಯಗಳು ತೋಚುತ್ತವೆ, ಅಂದರೆ ಅವನ ಪ್ರತಿಭಾಶಕ್ತಿಯು ಜಾಗೃತವಾಗಲು ಆರಂಭವಾಗುತ್ತದೆ. ಇದರಿಂದ ಈಶ್ವರನು ಅವನಿಗೆ ಯೋಗ್ಯ ಮತ್ತು ಅಯೋಗ್ಯದ ಬಗ್ಗೆ ಮಾರ್ಗದರ್ಶನ ಮಾಡುತ್ತಾನೆ. ಕರ್ಮಯೋಗ, ಧ್ಯಾನಯೋಗ, ಜ್ಞಾನಯೋಗದಂತಹ ಸಾಧನಾಮಾರ್ಗಗಳಲ್ಲಿ ತುಂಬಾ ಸಾಧನೆಯಾದ ಮೇಲೆ ಪ್ರತಿಭೆಯು ಜಾಗೃತವಾಗುತ್ತದೆ. ಗುರುಕೃಪಾಯೋಗಾನುಸಾರ ಸಾಧನೆ ಮಾಡುವಾಗ ಜಾಗೃತವಾದ ಪ್ರತಿಭೆಯನ್ನು ಶಾಶ್ವತವಾಗಿ ಉಳಿಸಿಕೊಳ್ಳುವುದು, ಗುರುಕೃಪೆ ಮತ್ತು ತನ್ನ ಸಾಧನೆಯ ಪ್ರಯತ್ನಗಳ ಮೇಲೆ ಅವಲಂಬಿಸಿರುತ್ತದೆ.

ಆಪತ್ಕಾಲದ ಸ್ಥಿತಿಯಲ್ಲಿ ಧರ್ಮಶಾಸ್ತ್ರಕ್ಕನುಸಾರ ಗುರುಪೂರ್ಣಿಮೆಯನ್ನು ಆಚರಿಸುವ ಪದ್ಧತಿ 
5-7-2020ರಂದು ವ್ಯಾಸಪೂರ್ಣಿಮೆ, ಅಂದರೆ ಗುರುಪೂರ್ಣಿಮೆ ಇದೆ. ಪ್ರತಿವರ್ಷ ಅನೇಕ ಜನರು ಒಟ್ಟಾಗಿ ಅವರವರ ಸಂಪ್ರದಾಯಕ್ಕನುಸಾರ ಗುರುಪೂರ್ಣಿಮಾ ಮಹೋತ್ಸವವನ್ನು ಆಚರಿಸುತ್ತಾರೆ; ಆದರೆ ಈ ವರ್ಷ ಕೊರೋನಾದ ವಿಷಾಣು ಹರಡಿರುವುದರಿಂದ ನಾವು ಒಟ್ಟಾಗಿ ಗುರುಪೂರ್ಣಿಮೆಯನ್ನು ಆಚರಿಸಲು ಸಾಧ್ಯವಿಲ್ಲ. ಇಲ್ಲಿ ಒಂದು ಮಹತ್ವದ ವಿಷಯವೆಂದರೆ, ಹಿಂದೂ ಧರ್ಮದಲ್ಲಿ ಆಪತ್ಕಾಲದಲ್ಲಿ ಧರ್ಮಾಚರಣೆಗಾಗಿ ಕೆಲವು ಪರ್ಯಾಯಗಳನ್ನು ಹೇಳಲಾಗಿದೆ. ಇದಕ್ಕೆ ‘ಆಪತ್‌ಧರ್ಮ’ ಎಂದು ಹೇಳುತ್ತಾರೆ. ಆಪತ್‌ಧರ್ಮವೆಂದರೆ ‘ಆಪದಿ ಕರ್ತವ್ಯೊ ಧರ್ಮಃ ’ ಅಂದರೆ ಆಪತ್ತಿನಲ್ಲಿ ಆಚರಿಸುವ ಧರ್ಮ. ಸದ್ಯ ಕೊರೋನಾದ ಹರಡುವಿಕೆಯ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‌ಡೌನ್ ಇದೆ. ಈ ಕಾಲದಲ್ಲಿಯೇ ಗುರುಪೂರ್ಣಿಮೆ ಇರುವುದರಿಂದ ಸಂಪತ್ಕಾಲದಲ್ಲಿ ಹೇಳಿರುವ ಪದ್ಧತಿಯಲ್ಲಿ ಈ ವರ್ಷ ನಮಗೆ ಈ ಮಹೋತ್ಸವವನ್ನು ಆಚರಿಸಲು ಸಾಧ್ಯವಿಲ್ಲ. ಈ ದೃಷ್ಟಿಯಿಂದ ಈ ಲೇಖನದಲ್ಲಿ ಇಂದಿನ ಪರಿಸ್ಥಿತಿಯಲ್ಲಿ ಧರ್ಮಾಚರಣೆಗಾಗಿ ಏನೆಲ್ಲ ಮಾಡಬಹುದು, ಎನ್ನುವುದರ ವಿಚಾರ ಮಾಡಲಾಗಿದೆ. ಇಲ್ಲಿ ಮಹತ್ವದ ಅಂಶವೆಂದರೆ, ಹಿಂದೂ ಧರ್ಮದಲ್ಲಿ ಮಾನವನ ಬಗ್ಗೆ ಯಾವ ಹಂತದ ವರೆಗೆ ವಿಚಾರ ಮಾಡಲಾಗಿದೆಯೆಂಬುದು ಕಲಿಯಲು ಸಿಗುತ್ತದೆ. ಇದರಿಂದ ಹಿಂದೂ ಧರ್ಮದ ಏಕಮೇವಾದ್ವಿತೀಯತೆ ಎದ್ದು ಕಾಣುತ್ತದೆ.

1. ಗುರುಪೂರ್ಣಿಮೆಯಂದು ಎಲ್ಲರೂ ತಮ್ಮತಮ್ಮ ಮನೆಗಳಲ್ಲಿಯೆ ಭಕ್ತಿಭಾವದಿಂದ ಗುರುಪೂಜೆ ಅಥವಾ ಮಾನಸಪೂಜೆ ಮಾಡಿದರೂ ಒಂದು ಸಾವಿರ ಪಟ್ಟು ಗುರುತತ್ತ್ವದ ಲಾಭವಾಗುವುದು : ಗುರುಪೂರ್ಣಿಮೆಯಂದು ಹೆಚ್ಚಿನ ಜನರು ತಮ್ಮ ಶ್ರೀ ಗುರುಗಳ ಬಳಿ ಹೋಗಿ ಅವರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾರೆ. ಪ್ರತಿಯೊಬ್ಬರ ಶ್ರದ್ಧೆಗನುಸಾರ ಕೆಲವರು ಶ್ರೀಗುರುಗಳಿಗೆ, ಕೆಲವರು ಮಾತೃ-ಪಿತೃಗಳಿಗೆ, ಕೆಲವರು ವಿದ್ಯಾಗುರುಗಳಿಗೆ (ನಮಗೆ ಜ್ಞಾನ ನೀಡಿದವರಿಗೆ ಅಂದರೆ ಶಿಕ್ಷಕರಿಗೆ), ಕೆಲವರು ಆಚಾರ್ಯಗುರುಗಳಿಗೆ (ತಮ್ಮಲ್ಲಿ ಪರಂಪರೆಗನುಸಾರ ಪೂಜೆಗೆ ಬರುವ ಗುರೂಜಿಗಳು), ಇನ್ನು ಕೆಲವರು ಮೋಕ್ಷಗುರು (ನಮಗೆ ಸಾಧನೆಯ ದೃಷ್ಟಿಕೋನವನ್ನು ನೀಡಿ ಮೋಕ್ಷದ ಮಾರ್ಗವನ್ನು ತೋರಿಸಿದ ಗುರುಗಳು)ಗಳಲ್ಲಿಗೆ ಹೋಗಿ ಅವರ ಚರಣಗಳಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಾರೆ. ಈ ವರ್ಷ ಕೊರೋನಾದ ಮಹಾಮಾರಿಯ ಹಿನ್ನೆಲೆಯಲ್ಲಿ ನಾವು ಮನೆಯಲ್ಲಿಯೆ ಇದ್ದು ಭಕ್ತಿಭಾವದಿಂದ ಶ್ರೀ ಗುರುಗಳ ಛಾವಚಿತ್ರವನ್ನಿಟ್ಟು ಪೂಜೆ ಅಥವಾ ಮಾನಸಪೂಜೆಯನ್ನು ಭಾವಪೂರ್ಣವಾಗಿ ಮಾಡುವುದರಿಂದ ನಮಗೆ ಒಂದು ಸಾವಿರ ಪಟ್ಟು ಗುರುತತ್ತ್ವದ ಲಾಭವಾಗುತ್ತದೆ. ಪ್ರತಿಯೊಬ್ಬರ ಶ್ರದ್ಧೆಗನುಸಾರ ಉಪಾಸ್ಯದೇವತೆ, ಸಂತರು ಅಥವಾ ಶ್ರೀಗುರುಗಳು ಬೇರೆ ಬೇರೆ ಆಗಿದ್ದರೂ, ಗುರುತತ್ತ್ವವು ಒಂದೇ ಆಗಿರುತ್ತದೆ.

2. ಎಲ್ಲ ಭಕ್ತರು ಒಂದೇ ಸಮಯದಲ್ಲಿ ಪೂಜೆ ಮಾಡಿದರೆ ಸಂಘಟಿತಶಕ್ತಿಯ ಲಾಭವಾಗುತ್ತದೆ : ಸಂಪ್ರದಾಯಗಳಲ್ಲಿನ ಎಲ್ಲ ಭಕ್ತರು ಸಾಧ್ಯವಾದರೆ ಒಂದೇ ಸಮಯವನ್ನು ನಿರ್ಧರಿಸಿ ಅದೇ ಸಮಯದಲ್ಲಿ ತಮ್ಮ ತಮ್ಮ ಮನೆಗಳಲ್ಲಿ ಪೂಜೆ ಮಾಡಬೇಕು. ‘ಒಂದೇ ಸಮಯದಲ್ಲಿ ಪೂಜೆ ಮಾಡಿದರೆ ಹೆಚ್ಚು ಸಂಘಟಿತಶಕ್ತಿಯ ಲಾಭವಾಗುತ್ತದೆ. ಆದ್ದರಿಂದ ಸಾಧ್ಯವಿದ್ದರೆ ಎಲ್ಲರೂ ಒಂದು ಸಮಯವನ್ನು ನಿರ್ಧರಿಸಿ ಅದೇ ಸಮಯದಲ್ಲಿ ಪೂಜೆ ಮಾಡಬೇಕು.

ಅ. ಬೆಳಗ್ಗಿನ ಸಮಯ ಪೂಜೆಗೆ ಉತ್ತಮವೆಂದು ಹೇಳಲಾಗುತ್ತದೆ. ಬೆಳಗ್ಗೆ ಪೂಜೆ ಮಾಡಲು ಸಮಯವಿರುವವರು ಬೆಳಗ್ಗಿನ ಸಮಯವನ್ನು ನಿರ್ಧರಿಸಿ ಪೂಜೆ ಮಾಡಬಹುದು.

ಆ. ಕೆಲವು ಅನಿವಾರ್ಯ ಕಾರಣಗಳಿಂದ ಬೆಳಗ್ಗೆ ಪೂಜೆ ಮಾಡಲು ಸಾಧ್ಯವಿಲ್ಲದವರು ಸಾಯಂಕಾಲ ಒಂದು ಸಮಯವನ್ನು ನಿಶ್ಚಯಿಸಿ ಆ ಸಮಯದಲ್ಲಿ ಆದರೆ ಸೂರ್ಯಾಸ್ತದ ಮೊದಲು ಅಂದರೆ ಸಂಜೆ 7 ಗಂಟೆ ಒಳಗೆ ಪೂಜೆ ಮಾಡಬಹುದು.

ಇ. ನಿರ್ಧರಿತ ಸಮಯದಲ್ಲಿ ಪೂಜೆ ಮಾಡಲು ಸಾಧ್ಯವಿಲ್ಲದವರು ತಮ್ಮತಮ್ಮ ಸಮಯಕ್ಕನುಸಾರ ಸೂರ್ಯಾಸ್ತದ ಮೊದಲು ಪೂಜೆ ಮಾಡಬಹುದು.

ಈ. ಪ್ರತಿಯೊಬ್ಬರೂ ತಮ್ಮ ತಮ್ಮ ಸಂಪ್ರದಾಯಕ್ಕನುಸಾರ ಶ್ರೀ ಗುರುಗಳು ಅಥವಾ ಉಪಾಸ್ಯದೇವತೆಯ ಚಿತ್ರ, ಮೂರ್ತಿ ಅಥವಾ ಪಾದುಕೆಗಳನ್ನಿಟ್ಟು ಮನೆಯಲ್ಲಿ ಪೂಜೆ ಮಾಡಬೇಕು.

ಉ. ಚಿತ್ರ, ಮೂರ್ತಿ ಅಥವಾ ಪಾದುಕೆಗಳಿಗೆ ಗಂಧವನ್ನು ಹಚ್ಚಿ ಪುಷ್ಪವನ್ನು ಅರ್ಪಿಸಬೇಕು. ಧೂಪ, ದೀಪ ಮತ್ತು ನೈವೇದ್ಯವನ್ನು ತೋರಿಸಿ ಪಂಚೋಪಚಾರ ಪೂಜೆ ಮಾಡಬೇಕು. ನಂತರ ಶ್ರೀಗುರುಗಳ ಆರತಿ ಮಾಡಬೇಕು.

ಊ. ಸಾಮಗ್ರಿಗಳ ಅಭಾವದಿಂದಾಗಿ ಪ್ರತ್ಯಕ್ಷ ಪೂಜೆ ಮಾಡಲು ಸಾಧ್ಯವಿಲ್ಲದಿರುವವರು ಶ್ರೀಗುರುಗಳ ಅಥವಾ ಉಪಾಸ್ಯದೇವತೆಯ ಮಾನಸಪೂಜೆ ಮಾಡಬೇಕು.

ಎ. ನಂತರ ಶ್ರೀ ಗುರುಗಳು ನೀಡಿರುವ ಮಂತ್ರವನ್ನು ಜಪಿಸಬೇಕು. ಶ್ರೀ ಗುರುಗಳು ನಮ್ಮ ಜೀವನದಲ್ಲಿ ಬಂದ ನಂತರದ ನಮ್ಮ ಅನುಭೂತಿಗಳನ್ನು ಸ್ಮರಣೆ ಮಾಡಿ ಅವರಿಗೆ ಕೃತಜ್ಞತೆಯನ್ನು ಸಲ್ಲಿಸಬೇಕು.

ಐ. ಆ ಸಮಯದಲ್ಲಿ ‘ವರ್ಷವಿಡೀ ನಾವು ಸಾಧನೆ ಮಾಡುವಾಗ ಎಲ್ಲಿ ಹಿಂದೆ ಉಳಿದೆವು ? ನಾವು ಶ್ರೀ ಗುರುಗಳ ಬೋಧನೆಯನ್ನು ಎಷ್ಟು ಪ್ರಮಾಣದಲ್ಲಿ ಆಚರಣೆ ಮಾಡಿದ್ದೇವೆ ?’, ಎಂಬುದರ ಸಿಂಹಾವಲೋಕನ ಮಾಡಿ ಅದರ ಬಗ್ಗೆ ಚಿಂತನೆ ಮಾಡಬೇಕು.’

ಆಧಾರ: ಸನಾತನ ನಿರ್ಮಿಸಿದ ‘ಗುರುಕೃಪಾಯೋಗಾನುಸಾರ ಸಾಧನೆ’ ಗ್ರಂಥ
ಸೌಜನ್ಯ: ಸನಾತನ ಸಂಸ್ಥೆ

Get In Touch With Us info@kalpa.news Whatsapp: 9481252093

Tags: Guru PoornimaGuru Poornima ArticleKannada News WebsiteLatest News Kannadaಗುರುಪೂರ್ಣಿಮೆಸನಾತನ ಸಂಸ್ಥೆ
Share246Tweet123Send
Previous Post

ನಾಳೆಯಿಂದ ನಾಲ್ಕು ಭಾನುವಾರ ಹುಲಿ ಸಿಂಹಧಾಮ ಬಂದ್

Next Post

ಶಿವಮೊಗ್ಗದಲ್ಲಿಂದು ಬರೋಬ್ಬರಿ 31 ಕೊರೋನಾ ಪಾಸಿಟಿವ್‌ ಪತ್ತೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
Kalpa Breaking: ಭದ್ರಾವತಿ-ಇಂದು ರಾತ್ರಿ ಹಿಂದೂ ಫೈರ್ ಬ್ರಾಂಡ್ ಪ್ರಮೋದ್ ಮುತಾಲಿಕ್ ಭಾಷಣ!

ಶಿವಮೊಗ್ಗದಲ್ಲಿಂದು ಬರೋಬ್ಬರಿ 31 ಕೊರೋನಾ ಪಾಸಿಟಿವ್‌ ಪತ್ತೆ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಛಾಯಾಗ್ರಹಣ ಕ್ಷೇತ್ರದ ವಿಶ್ವಾಸಾರ್ಹ ಹೆಸರು ಕರಾವಳಿಯ ಉದಯ್‌ ಶಂಕರ್ ಪಡಿಯಾರ್

ಛಾಯಾಗ್ರಹಣ ಕ್ಷೇತ್ರದ ವಿಶ್ವಾಸಾರ್ಹ ಹೆಸರು ಕರಾವಳಿಯ ಉದಯ್‌ ಶಂಕರ್ ಪಡಿಯಾರ್

March 19, 2026
National Safety Week 2026 Observed at Carriage Repair Workshop, Hubballi

National Safety Week 2026 Observed at Carriage Repair Workshop, Hubballi

March 18, 2026
7 ತಿಂಗಳಲ್ಲಿ 355 ವಿಶೇಷ ರೈಲುಗಳ ಸಂಚಾರದಿಂದ ನೈಋತ್ಯ ರೈಲ್ವೆ ಗಳಿಸಿದ್ದು ಎಷ್ಟು ಕೋಟಿ ಆದಾಯ?

ಹುಬ್ಬಳ್ಳಿ | ರೈಲ್ವೆ ಇಲಾಖೆ ಪರೀಕ್ಷೆ ಮುಂದೂಡಿಕೆ

March 18, 2026
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

ಯುಗಾದಿ ಹಬ್ಬ ಹಿನ್ನೆಲೆ: ಯಶವಂತಪುರ ಮತ್ತು ಹೊಸಪೇಟೆ ನಡುವೆ ವಿಶೇಷ ರೈಲು ಸೇವೆ

March 18, 2026
ನವೋದಯ ಪ್ರವೇಶ ಪರೀಕ್ಷೆ | ಅಪೂರ್ವಗೆ ಉತ್ತಮ ಅಂಕ

ನವೋದಯ ಪ್ರವೇಶ ಪರೀಕ್ಷೆ | ಅಪೂರ್ವಗೆ ಉತ್ತಮ ಅಂಕ

March 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL