ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಪ್ರತಿಷ್ಠಿತ ಯೂನಿಲೆಟ್ ಶೋ ರೂಂ ಫೆ.10ರಂದು ನಗರದ ಬಿ.ಎಚ್. ರಸ್ತೆಯಲ್ಲಿ ಆರಂಭಗೊಳ್ಳಲಿದೆ ಎಂದು ಸಂಸ್ಥೆಯ ಅಧಿಕಾರಿ ಕೆ.ಟಿ. ಮುರಳಿ ಹೇಳಿದರು.
ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಎಲೆಕ್ಟ್ರಾನಿಕ್ಸ್ ಹಾಗೂ ಗೃಹೋಪಯೋಗಿ ಸಾಧನೆಗಳ ರೀಟೈಲ್ ಚೈನ್ ಸ್ಟೋರ್, ಸೂಪರ ಶಾಪಿಂಗ್ ಮಳಿಗೆ ಇದಾಗಿದೆ ಎಂದರು.
2004 ರಲ್ಲಿ ಒಂದೇ ಮಳಿಗೆಯಲ್ಲಿ ಯುನಿಲೆಟ್ ಪ್ರಾರಂಭವಾಗಿದ್ದು ಅತ್ಯುತ್ತಮ ಬ್ರಾಂಡ್’ಗಳೊಂದಿಗೆ ಸಮರ್ಥ ಮತ್ತು ಪರಿಣಾಮಕಾರಿ ಗ್ರಾಹಕರ ಸ್ಪಂದನೆ ಮೂಲಕ ಸಂತೃಪ್ತಿಗೂ ಮೀರಿದ ಒನ್ ಸ್ಟಾಪ್ ಆಗುವ ಗುರಿಯನ್ನ ಹೊಂದಿದೆ ಎಂದರು.
ಸಂಸ್ಥೆಯ 55ನೆಯ ಮಳಿಗೆ ಶಿವಮೊಗ್ಗದಲ್ಲಿ ಆರಂಭವಾಗಲಿದ್ದು, ಅಂದು ಸಚಿವ ಕೆ.ಎಸ್. ಈಶ್ವರಪ್ಪನವರು ಲೋಕಾರ್ಪಣೆಗೊಳಿಸಲಿದ್ದಾರೆ. 2500 ರೂ. ನಿಂದ 5 ಲಕ್ಷ ರೂ. ವರೆಗಿನ ಎಲ್ಲಾ ತರಹದ ಎಲೆಕ್ಟ್ರಾನಿಕ್ಸ್ ಗೂಡ್ಸ್’ಗಳು ದೊರೆಯುತ್ತದೆ. ಸೇಲ್ಸ್ ಜೊತೆಗೆ ಸರ್ವಿಸ್ ಸಹ ನಮ್ಮಲ್ಲೇ ದೊರೆಯುತ್ತದೆ. ಕೆಲ ಶಾಪ್’ಗಳಲ್ಲಿ ಸೇಲ್ಸ್ ಇರುತ್ತದೆ ಆದರೆ ಸರ್ವಿಸ್ಸ ಮಸ್ಯೆ ಇರುತ್ತದೆ. ಆದರೆ ನಮ್ಮಲ್ಲಿ ಆ ಕೊರತೆಯನ್ನು ನೀಗಿಸಲಾಗಿದೆ ಎಂದರು.
10 ಸಾವಿರ ವಸ್ತುಗಳನ್ನು ಖರೀದಿಸಿದರೆ ಸ್ಕ್ರಾಚ್ ಕಾರ್ಡ್ ದೊರೆಯಲಿದೆ. ಫೈನಾನ್ಸ್ ಸೌಲಭ್ಯಗಳು ಲಭ್ಯವಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news









Discussion about this post