ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಅಂದೇಕೋ ವರುಣ ದೇವ ಕೋಪಿಸಿಕೊಂಡಗಿತ್ತು. ಅಷ್ಟೊಂದು ಗುಡುಗು, ಸಿಡಿಲು, ಗಾಳಿ ಅಬ್ಬರ ಅಪ್ಪಾ… ನಾನೆಂದು ಇಂತಹ ದೃಶ್ಯ ನೋಡೇ ಇರಲಿಲ್ಲ.
ಅಂದಿನ ದಿನ ನೆನಪಾದರೆ ಸಾಕು ಈಗಲೂ ಮೈ ನಡುಗುತ್ತೆ. ಮಲೆನಾಡಿನಲ್ಲೇ ಬೆಳೆದರೂ ನನಗೆಂದು ಈ ರೀತಿಯ ಅನುಭವ ಆಗೇ ಇರಲಿಲ್ಲ. ಅಂದು ಯಾವುದೋ ಕೆಲಸ ನಿಮಿತ್ತ ಸಾಗರಕ್ಕೆ ಹೋಗಿದ್ದೆ. ಅಂದು ಧರೆಗುರುಳಿತ್ತಿದ್ದ ಮಳೆ, ಗುಡುಗು, ಸಿಡಿಲು, ಗಾಳಿ ಅಬ್ಬರಕ್ಕೆ ಎಲ್ಲಿ ಆಕಾಶನೆ ಕಳಚಿ ಬಿಳತ್ತೋ ಎನ್ನಿಸುತ್ತಿತ್ತು.
ಮಳೆರಾಯನ ಅಬ್ಬರಕ್ಕೆ ಸಣ್ಣ ವಾಹನಗಳು ತೆಲುತ್ತಿದ್ದು ನೋಡಿ, ನಾನು ಇವತ್ತು ಮನೆ ಸೇರುತ್ತೇನಾ ಎಂಬ ಅನುಮಾನ ನನ್ನ ಆವರಿಸಿಕೊಂಡಿತ್ತು. ಸಾಗರಕ್ಕೆ ಹೊರಟಾಗಲೇ ಅಮ್ಮ ಮಳೆ ಬರಬಹುದು ಬೇಗ ಬಂದು ಮನೆ ಸೇರಿಕೋ ಎಂದು ಎಚ್ಚರಿಕೆ ಗಂಟೆ ಬಾರಿಸಿದ್ದರೂ, ಆ ಸದ್ದು ಕಿವಿಯಲ್ಲಿ ಗುಂಯ್… ಗುಟ್ಟುತ್ತಿತ್ತು.
ನಂತರ ನನ್ನ ಗೆಳೆಯ ತನ್ನ ಜೊತೆಯಲ್ಲಿದ್ದರು ನಾನು ಒಂಟಿ ಎಂಬ ಭಾವನೆ ಕಾಡತೊಡಗಿತ್ತು. ಅವನು ತಡವಾದರೆ ಎಲ್ಲಿ ನನ್ನಮ್ಮ ಬೈದು ಬಿಡುವಳೋ ಎಂಬ ಕಾರಣಕ್ಕೆ ಮೊಣಕಾಲು ತನಕ ಹರಿಯುತ್ತಿದ್ದ ನೀರಿನಲ್ಲಿ ಸ್ಕೂಟಿಯಲ್ಲಿ ಕೂರಿಸಿಕೊಂಡು ಹೇಗೊ ಹರಸಾಹಸದ ನಡುವೆ ನನ್ನನೂ ಬಸ್ಟ್ಯಾಂಡ್’ಗೆ ಕರೆತಂದ. ನಂತರ ನಮ್ಮೂರಿನತ ಸಾಗಬೇಕಾಗಿತ್ತು.
ಜೋರಾಗಿ ಗಾಳಿ ಸಿಡಿಲು ಗುಡುಗಿನ ಮಳೆ ಆ ವರುಣನ ಆರ್ಭಟಕ್ಕೆ ಎಲ್ಲಿ ಬಸ್ಸೇ ನೆಲಕ್ಕೂರುಲುವುದೋ ಅನ್ನುವ ಅನುಭವ ಒಂದು ಕಡೆ, ಈ ರೀತಿಯ ವಾತಾವರಣ ಕಂಡ ಡ್ರೈವರ್ ಬಸ್ ಮುಂದೆ ಸಾಗಲು ಆಗುತ್ತಿಲ್ಲವೆಂದು ಮಂದಗತಿಯಲ್ಲಿ ಚಲಿಸುತ್ತಿತ್ತು. ಅಲ್ಲಲ್ಲಿ ರಸ್ತೆಯುದಕ್ಕೂ ಬಿದಿರುನ ಮಟ್ಟಿ, ಮರಗಳು ಬಿಳುತ್ತಿದ್ದು ಸಂಚಾರಕ್ಕೆ ಅಡ್ಡಿ ಓಡುತ್ತಿದ್ದು ಅದನ್ನು ಸರಿಪಡಿಸಿ ಸಂಚಾರಕ್ಕೆ ಸಾರಗ ಮಾಡಿಕೊಂಡು ಬರುತ್ತಿದ್ದೆ. ಮಾತ್ತೊಂದು ಮರಬಿದ್ದಿದೆ ಎಂಬ ಸುದ್ದಿ. ಇದನ್ನು ಅರಿತ ಡ್ರೈವರ್ ಊರು ಸೇರುವುದು ಅನುಮಾನ ಅಂಥ ಹೇಳಿದಾಗ ನನ್ನ ಕಣ್ಣುಗಳಿಂದ ಧಳಧಳನೇ ನೀರುಳುತ್ತಿತ್ತು… ಏನೇನೋ ನೆನಪುಗಳು…
ಇನ್ನು 20 ದಿನಗಳು ಕಳೆದರೆ ನನ್ನಕ್ಕನ ಮದುವೆ, ಮದುವೆ ಸಿದ್ದತೆಗಳು ನಡೆಯುತ್ತಿವೆ, ಅದರ ಬಗ್ಗೆ ಆತಂಕ. ಏನಾದರೂ ಆದರೆ ಇಡೀ ನಮ್ಮ ಕುಟುಂಬದ ಶಾಂತಿ ಕದಡಿದಂತಾಗುತ್ತದೆ. ಮಲೆನಾಡಿನ ಹಸಿರಿನ ಮಡಿಲಿನಲಿ ಚಿತ್ತರದ ರಸ್ತೆಗಳ ನಡುವೆ ನನ್ನ ಊರಿಗೆ ಬಂದು ತಲುಪಿದೆ. ಬಸ್ಸಿನಿಂದ ಇಳಿಯುವವರೆಗೂ ನನ್ನ ಮನಸ್ಸು ಪ್ರಾಣ ನನ್ನ ದೇಹ ತೊರೆದು ಹೋಗಿದೆ ಅನಿಸುತ್ತಿತ್ತು.
ನಮ್ಮ ಮನೆ ಹತ್ತಿರ ಒಂದು ದೊಡ್ಡದಾದ ಆಲದ ಮರ ನೆಲಕ್ಕೆ ಉರುಳಿತು. ಶಿವಮೊಗ್ಗದಿಂದ ಸಾಗರಕ್ಕೆ-ಸಾಗರದಿಂದ ಶಿವಮೊಗ್ಗಕ್ಕೆ ಸಂಚಾರ ಸ್ಥಗಿತವಾಗಿತ್ತು. ಈ ಟ್ರಾಫಿಕ್ ಬೆಂಗಳೂರಿಗೆ ಹೋಲಿಸುವಂತಿತ್ತು. ಬಸ್ಸು, ಕಾರು, ಬೈಕಿನಲ್ಲಿ ಇರುವ ಜನರು 3ರಿಂದ 5, 6 ಗಂಟೆಗಳ ಕಾಲ ನೀರು ಆಹಾರ ಇಲ್ಲದೆ ಒದ್ದಾಡಿದ್ದು ನೋಡಿ ಈ ಸಂಗತಿ ಮನದಲಿ ಘಾಸಿಯುಂಟು ಮಾಡಿತ್ತು. ಇನ್ನೂ ಯಾವತ್ತೂ ಇಂತಹ ಮಳೆ ಬರಬಾರದು ಅಂದುಕೊಂಡೆ ಅಬ್ಬಾ……. ಇದೆಂತ ಮಳೆ…
Get in Touch With Us info@kalpa.news Whatsapp: 9481252093
Discussion about this post