ನವದೆಹಲಿ: ಕಳೆದ ನಾಲ್ಕು ವರ್ಷಗಳಿಂದ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಭಾರತದ ಅರ್ಥಿಕತೆ ಈಗ ಮತ್ತೊಂದು ಗರಿಯನ್ನು ಪಡೆದಿದ್ದು, ವಿಶ್ವದ ಆರನೆಯ ಅರ್ಥಿಕತೆಯ ಸ್ಥಾನವನ್ನು ಪಡೆದಿದೆ.
ಈ ಕುರಿತಂತೆ 2017ನೆಯ ಸಾಲಿನ ಅಂಕಿಅಂಶಗಳನ್ನು ವಿಶ್ವಬ್ಯಾಂಕ್ ಬಿಡುಗಡೆ ಮಾಡಿದ್ದು, ಫ್ರಾನ್ಸ್ ದೇಶವನ್ನು ಏಳನೆಯ ಸ್ಥಾನಕ್ಕೆ ತಳ್ಳಿ ಆರನೆಯ ಸ್ಥಾನವನ್ನು ಭಾರತ ಪಡೆದಿದೆ.
ವಿಶ್ವಸಂಸ್ಥೆಯ ವರದಿಯಂತೆ 2017ಕ್ಕೆ ಅಂತ್ಯವಾದಂತೆ ಭಾರತದ ಜಿಡಿಪಿ 2.597 ಟ್ರಿಲಿ ಡಾಲರ್ ಆಗಿದ್ದರೆ ಫ್ರಾನ್ಸ್ ದೇಶ 2.582 ಟ್ರಲಿ ಡಾಲರ್ ದಾಖಲಿಸಿತ್ತು. ಇದರಂತೆ ಫ್ರಾನ್ಸ್ ಗಿಂತಲೂ ಭಾರತ ಒಂದು ಸ್ಥಾನ ಮುಂದಿದೆ.
ಕಳೆದ ವರ್ಷ ಉತ್ಪಾದನೆ ಮತ್ತು ಬಳಕೆದಾರರ ಖರ್ಚು ಭಾರತದ ಆರ್ಥಿಕತೆಯನ್ನು ಬಲಿಷ್ಠ ಗೊಳಿಸಿದ್ದವು. ಆದರೆ ನೋಟು ಅಮಾನ್ಯ ಮತ್ತು ಜಿಎಸ್ಟಿ ಅನುಷ್ಠಾನದಿಂದಾಗಿ ಭಾರತದ ಆರ್ಥಿಕ ಬೆಳವಣಿಗೆಯ ವೇಗ ಕುಂಠಿತಗೊಂಡಿತು ಎಂದು ವಿಶ್ವಬ್ಯಾಂಕ್ ಹೇಳಿದ್ದು, ಐಎಂಎಫ್ ಅಂದಾಜಿನ ಪ್ರಕಾರ ಭಾರತ ಈ ವರ್ಷ ಶೇ.7.4ರ ಆರ್ಥಿಕಾಭಿವೃದ್ಧಿಯನ್ನು ದಾಖಲಿಸಲಿದೆ. 2019ರಲ್ಲಿ ಇದು ಶೇ.7.8 ಆಗಲಿದೆ.
Discussion about this post