ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ದೆಹಲಿಯ ನಿಜಾಮುದ್ದೀನ್ ನಲ್ಲಿ ತಬ್ಲೀಘ್ ಜಮಾತ್ ನ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಲು ಕರ್ನಾಟಕದಿಂದ 1300ಕ್ಕೂ ಹೆಚ್ಚು ಜನರು ತೆರಳಿದ್ದು, ಅವರೆಲ್ಲರ ಮಾಹಿತಿಯನ್ನು ಸಂಗ್ರಹಿಸಲಾಗಿದೆ.
ಅವರಲ್ಲಿ ಬೆಂಗಳೂರಿನಲ್ಲಿ 276 ಹಾಗೂ ಇತರ ಜಿಲ್ಲೆಗಳಲ್ಲಿ 482 ಕಾರ್ಯಕರ್ತರನ್ನು ಗುರುತಿಸಿ, ಕ್ವಾರಂಟೈನ್ ನಲ್ಲಿರಿಸಲಾಗಿದೆ. ಇತರ ರಾಜ್ಯಗಳಿಗೆ ತೆರಳಿದವರ ಕುರಿತೂ ಸಹ ಮಾಹಿತಿ ಸಂಗ್ರಹಿಸಿ, ಆಯಾ ರಾಜ್ಯಗಳಿಗೆ ಮಾಹಿತಿ ನೀಡಲಾಗಿದೆ.
ಭಾರತೀಯರನ್ನು ಹೊರತು ಪಡಿಸಿ ಬೇರೆ ಬೇರೆ ರಾಷ್ಟ್ರೀಯತೆಯ 57 ತಬ್ಲೀಘ್ ಜಮಾತ್ ಕಾರ್ಯಕರ್ತರನ್ನು ಕರ್ನಾಟಕದ ಬೀದರ್ (8), ಬೆಳಗಾವಿ (10), ತುಮಕೂರು (8) ಹಾಗೂ ಬೆಂಗಳೂರು (31) ಜಿಲ್ಲೆಗಳಲ್ಲಿ ಗುರುತಿಸಿ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ. ಭಾರತಕ್ಕೆ ಬರಲು ನೀಡುವ ವೀಸಾ ಪ್ರಕ್ರಿಯೆಯಲ್ಲಿ ಇವರನ್ನು ಕಪ್ಪುಪಟ್ಟಿಗೆ ಸೇರಿಸುವ ಸೂಚನೆಯೊಂದಿಗೆ 57 ಎಫ್‌ಐಆರ್ ಗಳನ್ನು ದಾಖಲಿಸಲಾಗಿದೆ. ಅವರ ಪೈಕಿ 20 ಇಂಡೋನೇಷ್ಯಾ, 1 ಯುನೈಟೆಡ್ ಕಿಂಗ್ ಡಮ್, 4 ದಕ್ಷಿಣ ಆಫ್ರಿಕಾ, 3 ಗ್ಯಾಂಬಿಯಾ, 19 ಕಿರ್ಗಿಸ್ತಾನ್, 1 ಯುಎಸ್ ಎ, 1 ಫ್ರಾನ್ಸ್, 1 ಕೀನ್ಯಾ ಮತ್ತು ಏಳು ಮಂದಿ ಬಾಂಗ್ಲಾದೇಶದವರು ಎಂದು ತಿಳಿದುಬಂದಿದೆ.
ನಿರ್ಣಾಯಕ ಅವಧಿಯಲ್ಲಿ ಹಾಟ್ ಸ್ಪಾಟ್ ನ ಸಮೀಪದಲ್ಲಿದ್ದ 276 ತಬ್ಲೀಘ್ ಜಮಾತ್ ಕಾರ್ಯಕರ್ತರನ್ನು ಬೆಂಗಳೂರಿನಲ್ಲಿ ಗುರುತಿಸಲಾಗಿದ್ದು, ಕ್ವಾರಂಟೈನ್’ನಲ್ಲಿರಿಸಲಾಗಿದೆ.
ಇದೇ ರೀತಿಯ ಹಿನ್ನೆಲೆ ಹೊಂದಿರುವ 482 ತಬ್ಲೀಘ್ ಜಮಾತ್ ಕಾರ್ಯಕರ್ತರನ್ನು ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಗುರುತಿಸಲಾಗಿದೆ. ಆದ್ದರಿಂದ ಕರ್ನಾಟಕದಲ್ಲಿ 808 ತಬ್ಲೀಘ್ ಜಮಾತ್ ಕಾರ್ಯಕರ್ತರನ್ನು ಕರ್ನಾಟಕದಲ್ಲಿ ಕಡ್ಡಾಯವಾಗಿ ಕ್ವಾರಂಟೈನ್’ನಲ್ಲಿರಿಸಿ ಪರೀಕ್ಷಿಸಲಾಗಿದೆ.
ಇತರ ರಾಜ್ಯಗಳಲ್ಲಿ ಪ್ರವಾಸ ಮಾಡುತ್ತಿರುವ ತಬ್ಲೀಘ್ ಜಮಾತ್ ಗೆ ಸೇರಿದ 581 ಕಾರ್ಯಕರ್ತರ ಹೆಸರುಗಳಿವೆ. ನಾವು ಸಂಬಂಧಪಟ್ಟ ಎಲ್ಲ ರಾಜ್ಯಗಳಿಗೂ ಮಾಹಿತಿ ರವಾನಿಸಿದ್ದೇವೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ಸರ್ಕಾರ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ತಿಳಿಸಿದೆ.
(ವರದಿ: ಡಿ.ಎಲ್. ಹರೀಶ್, ಬೆಂಗಳೂರು)
Get in Touch With Us info@kalpa.news Whatsapp: 9481252093
Discussion about this post