ಬೆಂಗಳೂರು: ಅತೃಪ್ತ ಶಾಸಕರು ನಮ್ಮನ್ನೇ ಬಿಟ್ಟಿಲ್ಲ. ಇನ್ನು ಯಡಿಯೂರಪ್ಪ ಅವರನ್ನು ಬಿಡುತ್ತಾರಾ? ಅವರನ್ನು ನಂಬಿರುವ ಯಡಿಯೂರಪ್ಪ ಅವರ ಕತೆ ಗೋವಿಂದಾ ಗೋವಿಂದ..
ಇದು, ಜೆಡಿಎಸ್-ಕಾಂಗ್ರೆಸ್ ಸರ್ಕಾರ ಪತನಗೊಂಡ ಬೆನ್ನಲ್ಲೇ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಆಡಿರುವ ಮಾತುಗಳು.
ರಾಜೀನಾಮೆ ಕೊಟ್ಟು ಹೋಗಿರುವ ಶಾಸಕರಿಗೆ ಸಚಿವ ಸ್ಥಾನ ಸಿಗದಿದ್ದರೆ ಯಡಿಯೂರಪ್ಪನವರ ಕಥೆ ಗೋವಿಂದಾ. 30-40 ವರ್ಷಗಳ ಕಾಲ ಸಾಕಿ ಸಲಹಿಸಿ ಇಷ್ಟು ದೊಡ್ಡಮಟ್ಟಕ್ಕೆ ಬೆಳೆಸಿದ ನಮ್ಮನ್ನು ಕಾರ್ಯಕರ್ತರನ್ನೇ ಅತೃಪ್ತರು ಬಿಡಲಿಲ್ಲ. ಇನ್ನು ಬಿಜೆಪಿ ಸರ್ಕಾರದಲ್ಲಿ ಅವರಿಗೆ ಸಚಿವ ಸ್ಥಾನ ಸಿಗದಿದ್ದರೆ ಬಿಡ್ತಾರಾ? ಯಡಿಯೂರಪ್ಪನವರನ್ನು ಹರಿದು ನುಂಗ್ತಾರೆ ಎಂದು ಹಾಸ್ಯದ ಮಾತಿನಿಂದಲೇ ಎಚ್ಚರಿಕೆ ನೀಡಿದರು.
ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಅತೃಪ್ತರಿಗೆ ಸಚಿವ ಸ್ಥಾನ ಸಿಗದೇ ಇದ್ದರೆ ಸುಮ್ಮನೆ ಬಿಡುತ್ತಾರಾ? ಶರ್ಟು-ಪ್ಯಾಂಟು ಹರಿದು ಕೈಗೆ ಕೊಡ್ತಾರೆ, ಇರೋದರಲ್ಲಿ ಮಹೇಶ್ ಕುಮಟಳ್ಳಿ ಮಾತ್ರ ಸೆಲೆಂಟ್ ಆಗಿ ಇರುತ್ತಾರೆ. ಉಳಿದವರು ಅಸಾಧ್ಯ ಕಣ್ರಿ ಎಂದು ಎಚ್ಚರಿಕೆ ನೀಡಿದ್ದಾರೆ.
ಇವರನ್ನೆಲ್ಲಾ ಬಿಜೆಪಿ ಹೈಕಮಾಂಡ್ ಕಂಟ್ರೋಲ್ ಮಾಡುತ್ತೋ ಬಿಡುತ್ತೋ ಗೊತ್ತಿಲ್ಲ. ಆದರೆ ನಮ್ಮ ಸ್ನೇಹಿತರ ಪರಿಸ್ಥಿತಿ ಏನಾಗುತ್ತೆ ಅಂತಾ ಗೊತ್ತು. ಅಷ್ಟು ಮಾತ್ರ ಹೇಳ್ತೀನಿ. ಯಡಿಯೂರಪ್ಪನವರು ತಮ್ಮ ಜತೆ ಇವರನ್ನು ಪ್ರಮಾಣವಚನ ಮಾಡಿಕೊಂಡರೆ ಅವರು ಬಚಾವಾಗ್ತಾರೆ. ಇಲ್ಲಂದ್ರೆ ಯಡಿಯೂರಪ್ಪ ಗೋವಿಂದಾ.. ಗೋವಿಂದ ಎಂದು ಕುಹಕವಾಡುತ್ತಲೇ ಎಚ್ಚರಿಕೆ ನೀಡಿದ್ದಾರೆ.
Discussion about this post