ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಮಂಗಳೂರು: ಯುವ ಚಿತ್ರ ನಿರ್ದೇಶಕ ಗಣಿ ದೇವ್ ಕಾರ್ಕಳ ಅವರ ಎರಡನೆಯ ಚಿತ್ರ ಹಾಗೂ ಅವರು ನಾಯಕನಾಗಿ ಅಭಿನಯಿಸಿರುವ ಮೊದಲ ಚಿತ್ರ ‘ಜಿಷ್ಣು’ ಟೀಸರ್ ಫೆ.2ರಂದು ಬಿಡುಗಡೆಯಾಗಲಿದೆ.
5 ಭಾಷೆಯಲ್ಲಿ ಬಿಡುಗಡೆಗೊಳ್ಳಲಿರುವ ಈ ಚಿತ್ರವನ್ನು ಕನಿಕ ಕವಿತಾ ಪೂಜಾರಿ ಅವರು ತಮ್ಮ ಸವ್ಯಸಾಚಿ ಕ್ರಿಯೇಷನ್ ಬ್ಯಾನರ್’ನಲ್ಲಿ ನಿರ್ಮಿಸುತ್ತಿದ್ದು, ಗಣಿ ದೇವ್ ಕಾರ್ಕಳ ನಿರ್ದೇಶನದ ಜೊತೆಗೆ ಸಂಗೀತದ ಜವಾಬ್ದಾರಿ ಹೊತ್ತಿದಾರೆ.
ಸುಮಿತ್ರ ರಮೇಶ್ ಗೌಡ ನಿಕಿತಾ ದೇವಾಡಿಗ ಯಾಮಿನಿ ತಿವಾರಿ ನಾಯಕಿಯರಾಗಿದ್ದು, ಸಂದೀಪ್ ಮಲಾನಿ ಹಾಗೂ ಮೀನಾ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಅತ್ಯಂತ ವಿಭಿನ್ನ ಚಿತ್ರವಾದ ಜಿಷ್ಣು ತನ್ನ ಮೊದಲ ಹಂತದ ಚಿತ್ರೀಕರಣ ಕಾರ್ಕಳ ಪರಿಸರದಲ್ಲಿ ಮುಗಿಸಿದ್ದು ಮೊದಲ ಟೀಸರ್ ಫೆಬ್ರವರಿ 2 ಕ್ಕೆ ಬಿಡುಗಡೆಗೊಳಿಸಿದೆ.
ಗಣಿ ದೇವ್ ಅವರು ಈ ಚಿತ್ರದಲ್ಲಿ 5 ವಿಭಿನ್ನ ರೂಪದಲ್ಲಿ ಕಾಣಿಸಲಿದ್ದು, ಮೊದಲ ಟೀಸರ್’ನಲ್ಲಿ ಎರಡು ಲುಕ್ ರಿವೀಲ್ ಆಗಲಿದೆ.
ಈ ಕುರಿತಂತೆ ಕಲ್ಪ ನ್ಯೂಸ್ ಜೊತೆಯಲ್ಲಿ ಮಾತನಾಡಿದ ಗಣಿ ದೇವ್, ಈ ಪಾತ್ರಕ್ಕಾಗಿ ತುಂಬಾ ಕಷ್ಟ ಪಟ್ಟಿದ್ದೇನೆ. ದೇಹ ಭಾರ ಹೆಚ್ಚಿಸಿದ್ದೇನೆ. ಈಗ ಮುಂದಿನ ಚಿತ್ರೀಕರಣಕ್ಕೆ ಪುನಃ ದೇಹ ದಂಡನೆ ಮಾಡಲಿದ್ದೇನೆ. ಜನರಲ್ಲಿ ನಿರೀಕ್ಷೆ ಇದೆ. ಅವರಿಗೆ ನಿರಾಸೆ ಮಾಡಲ್ಲ. ನನ್ನ ಶೇ.100ರಷ್ಟು ನಟನೆ ಹಾಗೂ ಶ್ರಮ ನೀಡುತ್ತೇನೆ ಎಂದು ತಮ್ಮ ಮನದಾಳದ ಮಾತು ಹಂಚಿಕೊಂಡರು.
ಬಹುತೇಕ ನವ ಪ್ರತಿಭೆಗಳೇ ಒಟ್ಟಾಗಿ ಸೇರಿಕೊಂಡು ಸ್ಯಾಂಡಲ್’ವುಡ್’ನಲ್ಲಿ ಹೊಸ ಕೊಡುಗೆ ನೀಡುವ ತವಕದಲ್ಲಿದ್ದು, ಇವರ ಪ್ರಯತ್ನ ಯಶಸ್ವಿಯಾಗಲಿ ಎಂದು ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ತಂಡ ಹಾರೈಸುತ್ತದೆ.
Get in Touch With Us info@kalpa.news Whatsapp: 9481252093
Discussion about this post