ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕನ್ನಡ ಸಿನಿರಂಗಕ್ಕೆ ಮತ್ತೊಂದು ಹಾಸ್ಯಮಯ ಚಿತ್ರ ಸೇರ್ಪಡೆಯಾಗುತ್ತಿದೆ. ಅರಸಯ್ಯನ ಪ್ರೇಮ ಪ್ರಸಂಗ ಎಂಬ ಚಿತ್ರದ ಟ್ರೈಲರ್ ಇಂದು ಬಿಡುಗಡೆಯಾಗಿ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿದೆ.
ಯುವರಾಜ್ ಕುಮಾರ್ ಅವರು ಟೀಸರ್ ಲಾಂಚ್ ಮಾಡಿ ‘ಈ ಚಿತ್ರವು ನಗುವಿನ ಮಾಯಾಲೋಕ ಸೃಷ್ಟಿಸುತ್ತದೆ’. ನಗುನಗುತಾ ನಲಿ, ನಲಿ ಏನೇ ಆಗಲಿ ಅಂತ ಅಣ್ಣಾವ್ರು ಹಾಡಿದ್ದಾರೆ. ಮನೆ ಮಂದಿಯೆಲ್ಲ ಕುಳಿತು ನಗೋಣ ಬನ್ನಿ ಎಂದು ಸಂತೋಷ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ನಟಿ ಕಾರುಣ್ಯರಾಮ ಜೊತೆಗೆ ನಿರ್ದೇಶಕರಾದ ಗ್ರಾಮಾಯಾಣ ಚಂದ್ರು, ಅಲೆಮಾರಿ ಸಂತು, ಜಡೇಶ್ ಕುಮಾರ್ ಎಂಪಿ, ಹಾಗೂ ಸುಕೇಶ್ ಶೆಟ್ಟಿ ಉಪಸ್ಥಿತರಿದ್ದರು.
ಜಿ.ವಿ.ಆರ್. ದೀಪು ನಿರ್ದೇಶನದ ಈ ಚಿತ್ರವನ್ನು ಶ್ರೀಮತಿ ಮೇಘಾಶ್ರೀ ರಾಜೇಶ್ ಅವರ ರಾಜ್ ಕಮಲ ಪಿಚ್ಚರ್ಸ್ ನಿರ್ಮಾಣ ಮಾಡಿದೆ.
ಚಿತ್ರದ ಪ್ರಮುಖ ಪಾತ್ರಗಳಲ್ಲಿ ಪ್ರೆಂಚ್ ಬಿರಿಯಾನಿ ಖ್ಯಾತಿಯ ಮಹಾಂತೇಶ್ ಹಿರೇಮಠ (ಅರಸಯ್ಯ), ರಶ್ಮಿತಾ ಗೌಡ (ಕುಮಾರಿ), ಪಿ.ಡಿ. ಸತೀಶ್ (ಬಸವಲಿಂಗ), ರಘು ರಾಮನಕೊಪ್ಪ (ಸುಬ್ಬಯ್ಯ ಶಾಸ್ತ್ರಿ), ವಿಜಯ್ ಚೆಂಡೂರು (ಫೋಟೋಗ್ರಾಫರ್), ಸುಜಿತ್ (ವಿಘ್ನೇಶ್), ಜಹಾಂಗೀರ್ (ಮದುವೆ ಬ್ರೋಕರ್), ಚಿಲ್ಲರ್ ಮಂಜು (ಶಿವ) ಮತ್ತು ಆನಂದ್ ನೀನಾಸಂ (ದುಂಡೇಗೌಡ) ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ತಾಂತ್ರಿಕ ತಂಡದಲ್ಲಿ ಗುರುಪ್ರಸಾದ್ ನರ್ನಾಡ್ (ಛಾಯಾಗ್ರಹಣ), ಪ್ರದೀಪ್ ಬಿ.ವಿ. ಮತ್ತು ಪ್ರವೀಣ್ ಬಿ.ವಿ. (ಸಂಗೀತ), ಸುನಿಲ್ ಕಶ್ಯಪ್ ಎಚ್.ಎನ್. (ಎಡಿಟರ್), ರಾಕೇಶ್ ಆಚಾರ್ಯ (ಹಿನ್ನಲೆ ಸಂಗೀತ) ಹಾಗೂ ರಾಜೇಶ್ ಗೌಡ (ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್) ಕಾರ್ಯ ನಿರ್ವಹಿಸಿದ್ದಾರೆ.
ಹಾಸ್ಯ ಪ್ರಧಾನ ಕಥಾಹಂದರ ಹೊಂದಿರುವ ಅರಸಯ್ಯನ ಪ್ರೇಮ ಪ್ರಸಂಗ ಸೆಪ್ಟೆಂಬರ್ 19ರಂದು ರಾಜ್ಯಾದ್ಯಂತ ತೆರೆಕಾಣಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post