No Result
View All Result
Indriya - Krithi Shetty - Brand Ambassador
English Articles

Indriya announces Krithi Shetty as Brand Ambassador for Southern Markets

by kalpa News
August 14, 2026
0

Kalpa Media House  |  Bengaluru  | Indriya, Aditya Birla Jewellery, announced actor Krithi Shetty as its Brand Ambassador, ahead of...

Read moreDetails
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
Olectra Deploys 4,000 Electric Buses in India Milestone

Olectra Creates History | First Company in India to Deploy 4,000 Electric Buses

July 31, 2026
  • Advertise With Us
  • Grievances
  • About Us
  • Contact Us
Monday, August 17, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Small Bytes

ಜಾತ್ಯತೀತ ಪದಕ್ಕೆ ಪರ್ಯಾಯ ಸಿದ್ಧಗಂಗೆಯ ಶಿವಕುಮಾರ ಶ್ರೀಗಳು

ಸದ್ದು ಗದ್ದಲವಿರದ ಸಾಧನೆಯಲ್ಲಿ ಗದ್ದುಗೆಯೇರಿದೆ

kalpa News by kalpa News
January 21, 2019
in Small Bytes, Special Articles
0
ಜಾತ್ಯತೀತ ಪದಕ್ಕೆ ಪರ್ಯಾಯ ಸಿದ್ಧಗಂಗೆಯ ಶಿವಕುಮಾರ ಶ್ರೀಗಳು
Share on FacebookShare on TwitterShare on WhatsApp

ಸದ್ದು ಗದ್ದಲವಿರದ ಸಾಧನೆಯಲ್ಲಿ ಗದ್ದುಗೆಯೇರಿದೆ||
ಕಾಯಕವೇ ಕೈಲಾಸವೆನ್ನುವ ಮಾತು ಕೃತಿಯೊಳು ಮೂಡಿದೆ||
ಕಾವಿಯುಡುಗೆಯನುಟ್ಟು ನಭವೇ ಕಿರಣ ಹಸ್ತವ ಚಾಚಿದೆ||
ಎಲ್ಲ ನನ್ನವರೆನ್ನುವ ಭಾವದ ಕರುಣೆಯೇ ಕಣ್ತೆರೆದಿದೆ||
ಎಂದು ತ್ರಿವಿಧ ದಾಸೋಹಿ, ನಡೆದಾಡುವ ದೇವರು ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರ ಕುರಿತಾಗಿ ರಾಷ್ಟಕವಿ ಜಿ.ಎಸ್. ಶಿವರುದ್ರಪ್ಪ ಹೇಳಿದ ಈ ಸಾಲುಗಳು ನಿಜಕ್ಕೂ ಶ್ರೀಗಳ ಚಿತ್ರಣವನ್ನು ನಾಲ್ಕೆ ಸಾಲುಗಳಲ್ಲಿ ತೆರೆದಿಡುತ್ತದೆ.

ಧರ್ಮಾಧಾರಿತ ರಾಜಕಾರಣದ ವೇದಿಕೆಯಾಗಿ ಕೆಲವು ಮಠಗಳು ರೂಪುಗೊಂಡಿರುವ ಈ ಕಾಲಘಟ್ಟದಲ್ಲಿ, ಸನ್ಯಾಸ ಧರ್ಮವನ್ನೇ ಅಣಕಿಸುವಂತೆ ಹೀನ ಕೃತ್ಯಗಳನ್ನು ಮಾಡುವ ಢೋಂಗಿ ಸನ್ಯಾಸಿಗಳು ಹೆಚ್ಚಾಗುತ್ತಿರುವ ಈ ದಿನಮಾನಗಳಲ್ಲಿ, ಕೆಲವು ಮಠ-ಮಂದಿರಗಳು ಮೂಲ ಉದ್ದೇಶ ಹಾಗೂ ಧ್ಯೇಯಗಳನ್ನೇ ಕಳೆದುಕೊಳ್ಳುತ್ತಿರುವ ಈ ಹಂತದಲ್ಲಿ ಆದರ್ಶ ಮಠಾಧೀಶ ಎಂದರೆ ಹೇಗಿರಬೇಕು, ಸನ್ಯಾಸಿಯ ನಿಜವಾದ ಧ್ಯೇಯ, ಗುರಿ, ಕಾರ್ಯಗಳೇನು.

ಸಮಾಜಕ್ಕೆ ಅವರ ಕೊಡುಗೆ ಏನಾಗಬೇಕು ಎಂಬುದನ್ನು ನಿರೂಪಿಸಿ ತೋರಿಸುತ್ತಿರುವ ಕೆಲವೇ ಕೆಲವು ಮಠಾಧೀಶರ ಅಗ್ರಗಣ್ಯ ಸಾಲಿನಲ್ಲಿ ನಿಲ್ಲುವವರು ತುಮಕೂರು ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರು.

ಬಸವಣ್ಣನವರ ಶ್ರೇಷ್ಠ ಸಿದ್ಧಾಂತ ಗಳನ್ನು ತಮ್ಮ ಸ್ವಾರ್ಥಕ್ಕಾಗಿ, ಬಸವಣ್ಣನವರ ಹೆಸರನ್ನು ತಮ್ಮ ಸ್ವಹಿತಾಸಕ್ತಿಗಾಗಿ ಬಳಸಿಕೊಳ್ಳುವ ಕೆಲವು ಸಮಾಜಘಾತುಕರು ಇರುವ ಇಂತಹ ಪರಿಸ್ಥಿತಿಯಲ್ಲಿ ಬಸವಕ್ರಾಂತಿ ತತ್ವ ಸಿದ್ಧಾಂತಗಳು ಹಾಗೂ ಶರಣ ಸಂಪ್ರದಾಯದ ಅಂಶಗಳನ್ನು ಸಮಾಜದ ಏಳ್ಗೆಗಾಗಿ ಅಕ್ಷರಶಃ ಅಳವಡಿಸಿಕೊಂಡ ಮಹಾನ್ ಸಂತರು ಇವರು.

1908ರ ಎಪ್ರಿಲ್ 1ರಂದು ಮಾಗಡಿ ತಾಲೂಕಿನ ವೀರಾ ಪುರದ ಹೊನ್ನೇಗೌಡ- ಗಂಗಮ್ಮ – ಗಂಗಮ್ಮ ನವರ 13ನೆಯ ಪುತ್ರರಾಗಿ ಜನಿಸಿದ ಮಗುವಿಗೆ ಶಿವಣ್ಣ ಎಂದು ಹೆಸರಿಡಲಾಗಿತ್ತು. ಮರಳಿನ ಮೇಲೆ ಅಕ್ಷರ ತಿದ್ದುವ ಮೂಲಕ ಶಿಕ್ಷಣವನ್ನು ಆರಂಭಿಸಿದ ಇವರ ಲೌಖಿಕಿ ಶಿಕ್ಷಣದಲ್ಲಿ ಮೆಟ್ರಿಕ್ಯುಲೇಶನ್ ಮುಗಿಸಿದರು. 1927ರಲ್ಲಿ ಸಿದ್ದಗಂಗಾ ಮಠದ ಅಂದಿನ ಪೀಠಾಧಿಪತಿಗಳಾಗಿದ್ದ ಉದ್ಧಾನ ಶಿವಯೋಗಿಯವರ ಒಡನಾಟಕ್ಕೆ ಬಂದರು. ಆನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಪದವಿ ವಿದ್ಯಾಭ್ಯಾಸ ನಡೆಯುತ್ತಿದ್ದರೂ ಮಠದ ಒಡನಾಟ ದಲ್ಲೆ ಇದ್ದ ಇವರನ್ನು, 1930ರಲ್ಲಿ ಉದ್ದಾನ ಶ್ರೀಗಳಿಂದ ಉತ್ತರಾಧಿಕಾರಿ ಎಂದು ಘೋಷಿತರಾಗಿ ಶಿವಕುಮಾರ ಸ್ವಾಮೀಜಿಯಾಗುತ್ತಾರೆ.

ಅಂದಿನಿಂದ ಇವರ ನಿಜವಾದ ಜೀವನ ಆರಂಭವಾಗುತ್ತದೆ. ಉದ್ಧಾನ ಶ್ರೀಗಳು ಕಾಲವಾದ ನಂತರ ಮಠದ ಉಸ್ತುವಾರಿ ವಹಿಸಿಕೊಂಡ ಶಿವಕುಮಾರ ಸ್ವಾಮೀಜಿಯವರು, ಮಠದ ಏಳ್ಗೆಗಾಗಿ ಜೀವನವನ್ನೆ ಮುಡಿಪಾಗಿಡುತ್ತಾರೆ. ಧರ್ಮ, ಶಾಸ್ತ್ರ, ಸಂಪ್ರದಾಯ ಹಾಗೂ ಆಚರಣೆಗಳಿಗೆ ಎಷ್ಟು ಮಹತ್ವ ನೀಡುತ್ತಿದ್ದರೋ, ಅಷ್ಟೆ ಮಹತ್ವವನ್ನು ಮಠದಲ್ಲಿನ ವಿದ್ಯಾರ್ಥಿಗಳ ಜೀವನ ರೂಪಿಸಲು ನೀಡಿದ್ದು ಶ್ರೀಗಳ ಮಹತ್ಕಾರ್ಯಗಳಲ್ಲಿ ಒಂದು.

ಮಾದರಿ ಮಠಾಧೀಶರು
ಪ್ರತಿದಿನವೂ 3 ಗಂಟೆಗೇ ನಿದ್ದೆಯಿಂದೇಳುವ ಸ್ವಾಮೀಜಿ, ಒಂದು ಗಂಟೆಗೂ ಅಧಿಕ ಕಾಲ ಪೂಜೆ ನೆರವೇರಿಸಿ, ಆನಂತರ ಮುಂಜಾನೆ ಆರೂವರೆ ಗಂಟೆಗೆ ಒಂದು ಅಕ್ಕಿ-ಇಡ್ಲಿ, ಸ್ವಲ್ಪ ಹೆಸರು ಬೇಳೆ-ತೊವೆ, ಸಿಹಿ ಹಾಗೂ ಖಾರ ಚಟ್ನಿ, ಎರಡು ತುಂಡು ಸೇಬು, ಬೇವಿನ-ಚಕ್ಕೆ ಕಷಾಯ ಸೇವನೆ ಮಾಡುತ್ತಾರೆ.
ಬದಲಾದ ಇಂದಿನ ಕಾಲಮಾನ ದಲ್ಲಿ ಯುವಕರಲ್ಲಿ ಉತ್ಸಾಹಗಳ ಕಡಿಮೆಯಾಗಿ ಜೀವನ ಶೈಲಿಯನ್ನೆ ಬದಲಾವಣೆ ಮಾಡಿಕೊಂಡು ಆನಂತರ ದೈಹಿಕ ಹಾಗೂ ಮಾನಸಿಕ ಅನಾರೋಗ್ಯಕ್ಕೆ ಸ್ವತಃ ಕಾರಣರಾ ಗುವವರೇ ಹೆಚ್ಚು. ಇಂತಹ ವರ್ಗದ ಯುವಕರಿಗೆ 110 ವರ್ಷದ ಸ್ವಾಮೀಜಿಯವರ ಈ ದೈನಂದಿನ ಶಿಸ್ತು ನಿಜಕ್ಕೂ ಆದರ್ಶಪ್ರಾಯ.


ಸಿದ್ಧಗಂಗಾ ಶ್ರೀಗಳ ಮಹತ್ಕಾರ್ಯ ಗಳಲ್ಲಿ ಅತ್ಯಂತ ಪ್ರಮುಖವಾ ದುದು ವಿದ್ಯಾದಾನ. ಯಾವುದೇ ರೀತಿಯ ಜಾತಿ, ಧರ್ಮದ ಬೇಧಬಾವವಿಲ್ಲದೇ ಎಲ್ಲ ವರ್ಗದ ಬಡ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ನೀಡುತ್ತಿರುವ ಶ್ರೀಗಳ ನಿಜಕ್ಕೂ ಇಡಿಯ ಜಗತ್ತಿಗೇ ಮಾದರಿ. ತಾವು ಅಳವಡಿಸಿ ಕೊಂಡಿರುವ ಶಿಸ್ತನ್ನು ತಮ್ಮಲ್ಲಿ ಕಲಿಯುವ ಮಕ್ಕಳಿಗೂ ಶ್ರೀಗಳು ಕಲಿಸುತ್ತಿದ್ದಾರೆ. ಮುಂಜಾನೆ ಮತ್ತು ಸಂಜೆ ಮಠದ ಆವರಣದಲ್ಲಿ ಮಕ್ಕಳಿಂದ ನಡೆಯುವ ಪ್ರಾರ್ಥನೆಯಲ್ಲಿ ಶ್ರೀಗಳು ಪಾಲ್ಗೊಳ್ಳುತ್ತಾರೆ, ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಂದ ಹಿಡಿದು ಪದವಿ ಅಭ್ಯಾಸದಲ್ಲಿರುವ ತರುಣರವರೆಗೂ ಸಾವಿರಾರು ಮಂದಿ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳು ವುದನ್ನು ನೋಡುವುದೇ ಸಂತಸ. ಮಠದ ಆವರಣದಲ್ಲಿರುವ ವಿದ್ಯಾರ್ಥಿ ನಿಲಯದ ಮುಂದಿರುವ ವಿಶಾಲವಾದ ಬಯಲಿನಲ್ಲಿ ಸಾವಿರಾರು ಜನ ಒಟ್ಟಿಗೆ ಪ್ರಾರ್ಥನೆ ಮಾಡುವುದನ್ನು ನೋಡುವುದೂ ಇಲ್ಲಿನ ಒಂದು ಪ್ರಮುಖ ಆಕರ್ಷಣೆ.

ಒಬ್ಬ ಆದರ್ಶ ಮಠಾಧೀಶ ಹೇಗಿರಬೇಕು ಎಂದು ಜಗತ್ತಿಗೆ ಸಾರುತ್ತಿರುವ ದೇಶದ ಕೆಲವೇ ಕೆಲವು ಮಠಾಧೀಶರಲ್ಲಿ ಒಬ್ಬರಾದ ಸಿದ್ದಗಂಗಾ ಶ್ರೀಗಳು ಧರ್ಮದ ಹಾದಿಯಲ್ಲಿ ನಡೆಯುತ್ತಾ, ಸತ್ಯ ವನ್ನು ಎತ್ತಿ ಹಿಡಿಯುತ್ತಾ, ಸಮಾಜದ ಏಳ್ಗೆಯನ್ನೆ ಉಸಿರಾಗಿಸಿಕೊಂಡು, ಅನ್ನದಾನ-ವಿದ್ಯಾದಾನಗಳೇ ಸರ್ವ ಶ್ರೇಷ್ಠ ಎಂದು ನುಡಿದು, ಜೀವನದ ಸಂದೇಶವನ್ನು ಸಾರುತ್ತಾ, ಇವೆಲ್ಲದರೊಂದಿಗೆ ದೇಶಭಕ್ತಿಯನ್ನೂ ಬೆಳೆಸುತ್ತಾ ದಣಿವರಿದೇ ದುಡಿಯುತ್ತಿರುವ ಇವರ ವ್ಯಕ್ತಿತ್ವ ಇಡಿಯ ಜಗತ್ತಿಗೆ ಪ್ರೇರಕ ಶಕ್ತಿ ಎನ್ನುವುದರಲ್ಲಿ ಎರಡು ಮಾತಿಲ್ಲ.


ಮುಂಜಾನೆಯಿಂದ ತಡರಾತ್ರಿಯವರೆಗೂ ವಿವಿಧ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಶ್ರೀಗಳು ಚೈತನ್ಯದ ಚಿಲುಮೆ ಎಂದರೆ ಅತಿಶಯೋಕ್ತಿಯಲ್ಲ. ದಣಿವರಿಯದೆ ಕಾರ್ಯನಿರತರಾಗಿರುವ ಸ್ವಾಮಿಗಳು, ಪ್ರತಿನಿತ್ಯ ಪತ್ರಿಕೆಗಳನ್ನು ಓದುವುದು, ಭಕ್ತರಿಗೆ ದರ್ಶನ ನೀಡುವುದು, ಗಣ್ಯರ ಭೇಟಿ, ಮಾಡುವ ಜೊತೆಯಲ್ಲಿ ಮಠದ ಆಡಳಿತಕ್ಕೆ ಸಂಬಂಧಿಸಿದ ಕಡತಗಳನ್ನು ಸ್ವತಃ ಪರಿಶೀಲನೆ ನಡೆಸುವುದರ ಜೊತೆಯಲ್ಲಿ ಮಠಕ್ಕೆ ಸಂಬಂಧಿಸಿದ ಪ್ರತಿಯೊಂದು ಕೆಲಸದಲ್ಲೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ತೊಡಗಿಸಿಕೊಳ್ಳುವುದು ನಿಜಕ್ಕೂ
ಅದ್ಭುತ ಎನಿಸುತ್ತದೆ.

ಜಾತ್ಯತೀತ ಸಿದ್ಧಾಂತಕ್ಕಿಲ್ಲಿ ನಿಜವಾದ ಅರ್ಥವಿದೆ
ಪ್ರಪಂಚದ ಧಾರ್ಮಿಕ ಕ್ಷೇತ್ರದಲ್ಲಿ ಭಾರತ ಹಾಗೂ ಹಿಂದೂ ಧರ್ಮಕ್ಕೆ ಅದರದ್ದೇ ಆದ ವಿಶೇಷ ಗೌರವವಿದೆ. ಇಂತಹ ಲೋಕದಲ್ಲಿ ಅನನ್ಯವಾಗಿ ಮಿನುಗುತ್ತಿರುವ ಸಿದ್ದಗಂಗಾ ಮಠ ಹಾಗೂ ಶಿವಕುಮಾರ ಸ್ವಾಮಿಗಳು ದೇಶದಲ್ಲಿ ಜಾತ್ಯತೀತ ಸಿದ್ಧಾಂತಕ್ಕೆ ನಿಜವಾದ ಅರ್ಥ ಕಲ್ಪಿಸಿದ್ದಾರೆ.
ವಿದ್ಯೆಯೇ ಜೀವನ ಎಂಬುದನ್ನು ಸಾರಿ ಹೇಳುತ್ತಿರುವ ಶ್ರೀಗಳು, ಯಾವುದೇ ರೀತಿಯ ಜಾತಿ, ಧರ್ಮದ ಬೇಧ ಮಾಡದೆ ತಮ್ಮನ್ನು ಅರಸಿ ಬರುವ ಎಲ್ಲ ಸಮುದಾಯದ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ವಸತಿಯೂ ನೀಡಿ ಜಾತ್ಯತೀತ ಪದಕ್ಕೆ ಒಂದು ಅರ್ಥ ಬರುವಂತೆ ಮಾಡಿದ್ದಾರೆ. ಇದರೊಂದಿಗೆ ದಿನನಿತ್ಯ ಸಾವಿರಾರು ಭಕ್ತರು ಹಾಗೂ ದರ್ಶನಾರ್ಥಿಗಳಿಗೆ ಮೂರು ಹೊತ್ತು ಅನ್ನದಾನ ಮಾಡುವ ಮೂಲಕ ತ್ರಿವಿಧ ದಾಸೋಹಿ ಎನಿಸಿಕೊಂಡಿದ್ದರು.

Tags: Dr. Shivakumar SwamijiHindu religionKannada ArticleKannada NewsSiddaganga MuttSiddaganga SwamijiTumkurಜಿ.ಎಸ್. ಶಿವರುದ್ರಪ್ಪಡಾ. ಶಿವಕುಮಾರ ಶ್ರೀಡಾ. ಶಿವಕುಮಾರ ಸ್ವಾಮೀಜಿತ್ರಿವಿಧ ದಾಸೋಹಿಸಿದ್ಧಗಂಗಾ ಮಠಹಿಂದೂ ಧರ್ಮ
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ನಾಳೆ ಸರ್ಕಾರಿ ರಜೆ ಘೋಷಣೆ, ಮೂರು ದಿನ ರಾಜ್ಯದಲ್ಲಿ ಶೋಕಾಚರಣೆ

Next Post

ಸಿದ್ಧಗಂಗಾ ಶ್ರೀ ಲಿಂಗೈಕ್ಯ: ಪ್ರಧಾನಿ ಮೋದಿ ಸಂತಾಪ

kalpa News

kalpa News

Next Post
ಸಿದ್ಧಗಂಗಾ ಶ್ರೀ ಲಿಂಗೈಕ್ಯ: ಪ್ರಧಾನಿ ಮೋದಿ ಸಂತಾಪ

ಸಿದ್ಧಗಂಗಾ ಶ್ರೀ ಲಿಂಗೈಕ್ಯ: ಪ್ರಧಾನಿ ಮೋದಿ ಸಂತಾಪ

Leave a Reply Cancel reply

Your email address will not be published. Required fields are marked *

No Result
View All Result
Indriya - Krithi Shetty - Brand Ambassador
English Articles

Indriya announces Krithi Shetty as Brand Ambassador for Southern Markets

by kalpa News
August 14, 2026
0

Kalpa Media House  |  Bengaluru  | Indriya, Aditya Birla Jewellery, announced actor Krithi Shetty as its Brand Ambassador, ahead of...

Read moreDetails
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
Olectra Deploys 4,000 Electric Buses in India Milestone

Olectra Creates History | First Company in India to Deploy 4,000 Electric Buses

July 31, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL