ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಿತ್ರದುರ್ಗ ಜಿಲ್ಲೆಯ ಮದಕರಿ ನಾಯಕನ ವಂಶಸ್ಥರಾದ ಬಿಚ್ಚುಗತ್ತಿ ಭರಮಣ್ಣ ನಾಯಕ ಕಟ್ಟಿಸಿರುವ ಭರಮಸಾಗರದ ಸುಮಾರು 800-900 ಎಕರೆ ದೊಡ್ಡ ಕೆರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಹೆಸರುವಾಸಿಯಾದ ಕೆರೆ, ಒಮ್ಮೆ ಪೂರ್ಣ ಪ್ರಮಾಣದಲ್ಲಿ ನೀರು ತುಂಬಿದರೆ ರೈತರು, ಜನರು ಯಾವುದೇ ರೀತಿಯ ನೀರಿನ ತೊಂದರೆ ಇಲ್ಲದೆ ಐದು ವರ್ಷ ಸುಖವಾಗಿ ಜೀವನವನ್ನು ಸಾಗಿಸಬಹುದು ಇದು ನಾವು ಕಣ್ಣಾರೆ ಕಂಡ ದೃಶ್ಯ.
ದೇಶದಲ್ಲಿ ಕಳೆದ ಮಳೆಗಾಲದಲ್ಲಿ ಸುರಿದ ಮಳೆಯಿಂದ ಕೆರೆ, ಕಟ್ಟೆ, ನದಿ, ಹಳ್ಳ ತುಂಬಿ ಹೆಚ್ಚಾದ ನೀರನ್ನು ಡ್ಯಾಮ್ ಗೇಟ್ ಮೂಲಕ ಎರಡು ಮೂರು ಸಾರಿ ಹೊರ ಬಿಡಲಾಯಿತು.
ವಿಸ್ಮಯ ಎಂದರೆ, ಭರಮಸಾಗರದಲ್ಲಿ ಮಳೆ ಇಲ್ಲದೆ ಒಂದು ಹನಿ ನೀರು ಕೆರೆಗಳಿಗೆ ಬಂದಿಲ್ಲ, ಇಲ್ಲಿನ ಜನರಿಗೆ ನಮ್ಮ ಊರಿನಲ್ಲಿ ಕೆರೆ ಇತ್ತು ಎಂಬುವುದು ಮರೆತು ಹೋದಂತೆ ಆಗಿದೆ ಮತ್ತು ಕೆರೆಯ ಬದುವಿನಲ್ಲಿ ಈಗಾಗಲೇ ನಿವೇಶನ ಆಗುತ್ತಿರುತ್ತದೆ.
ಇಷ್ಟು ದಿನ ಬಿಜೆಪಿ, ಕಾಂಗ್ರೆಸ್ ಜೆಡಿಎಸ್ ಪಕ್ಷದ ಒಳ ಜಗಳ, ಗದ್ದಲದ ನಡುವೆ ಕೆರೆಗೆ ಸೂಳೆಕೆರೆಯಿಂದ ನೀರು ತರುವ ಯೋಜನೆ ಮೇಲೆ ಕೋಟ್ಯಾಂತರ ಹಣ ಖರ್ಚು ಮಾಡಿ ಪೈಪ್ ಲೈನ್ ಮಾಡಲಾಗಿದೆ ಆದರೆ ಪ್ರಯೋಜನವಾಗಿಲ್ಲ.
ಕರ್ನಾಟಕ ನೀರಾವರಿ ಇಲಾಖೆ ಈಗ ಸುಮಾರು ತಿಂಗಳ ಹಿಂದೆ ಕೆರೆಗಳನ್ನು ತುಂಬಿಸುವ ಯೋಜನೆಯ ಅಡಿಯಲ್ಲಿ ಸೂಳೆ ಕೆರೆಯಿಂದ ಪೈಪ್ ಲೈನ್ ಹಾಕಿದ್ದು, ಕುಡಿಯುವ ನೀರು ಬರುತ್ತಿದೆ. ಅದರೆ ಭದ್ರ ಮೇಲ್ದಂಡೆ ಯೋಜನೆಯಲ್ಲಿ ಕೆರೆಗಳನ್ನು ತುಂಬಿಸುವ ಕಾರ್ಯ ಒಂದು ಬಾರಿ 30 ನಿಮಿಷಗಳ ಕಾಲ ನೀರು ಬಿಡಲಾಯಿತು. ನಂತರ ಈವರೆಗೂ ನೀರು ಬಿಟ್ಟಿರುವುದಿಲ್ಲ.
ಶಾಸಕ ಶ್ರೀ ಚಂದ್ರಪ್ಪನವರು ತತಕ್ಷಣ ಈ ಕಾರ್ಯಕ್ಕೆ ಕೈ ಹಾಕಿ ಸಿರಿಗೆರೆ ಮಠದ ಜಗದ್ಗುರುಗಳಾದ, ಡಾ.ಶ್ರೀಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಮತ್ತು ಜಗಳೂರು, ಭರಮಸಾಗರ ಮತ್ತು ಸುತ್ತಮುತ್ತಲಿನ ರೈತರ ಹೋರಾಟಕ್ಕೆ ಫಲವಾಗಿ ಮಾನ್ಯ ಮುಖ್ಯಮಂತ್ರಿಗಳು ತಾವು ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದ ತಕ್ಷಣ ಸೂಳೆಕೆರೆ ಏತನೀರಾವರಿ ಯೋಜನೆಗೆ ಸುಮಾರು 550 ಕೋಟಿ ಅನುಮೋದನೆ ನೀಡಿ ಅನುಮತಿ ನೀಡಿದ್ದಾರೆ.
ಈ ಹಂತದಲ್ಲಿ ಹೊಳಲ್ಕೆರೆ ಶಾಸಕರಾದ ಚಂದ್ರಪ್ಪನವರು ಮತ್ತು ಜಗದ್ಗುರುಗಳ ಮತ್ತು ಮುಖಂಡರುಗಳು ತುಂಬಾ ಹರಸಾಹಸದಿಂದ ಈ ಕಾರ್ಯ ಮಾಡಿರುವುದು ಸಂತೋಷದ ವಿಷಯವಾಗಿದೆ.
ಈ ಹಿನ್ನೆಲೆಯಲ್ಲಿ ಜಗಳೂರು ತಾಲೂಕಿನ 57 ಹಾಗೂ ಭರಮಸಾಗರ ಮತ್ತು ಸಿರಿಗೆರೆಯ ಭಾಗದ 43 ಕೆರೆಗಳ ಏತ ನೀರಾವರಿ ಯೋಜನೆಗೆ ಪೂರ್ವಭಾವಿಯಾಗಿ ಮಾಡಬೇಕಾದ ಕೆಲಸಗಳನ್ನು ಮರೆಯಬಾರದು.
1) ಭರಮಸಾಗರ ಮತ್ತು ಇನ್ನಿತರ ಎಲ್ಲಾ ಕೆರೆಗಳನ್ನು ಅಳತೆ ಮಾಡಿಸಬೇಕು, ಒತ್ತುವರಿಯಾದ ಜಾಗಗಳನ್ನು ಕೆರೆಯ ಭಾಗಕ್ಕೆ ವಾಪಾಸು ಪಡೆದು ಅವರಿಗೆ ಬೇರೆ ವ್ಯವಸ್ಥೆ ಮಾಡಬೇಕು
2) ಕೆರೆಯಲ್ಲಿ ಬೆಳೆದಿರುವ ಮುಳ್ಳಿನ ಗಿಡಗಳನ್ನು ತೆಗೆಯಬೇಕು
3) ರಾಜಕೀಯ ವ್ಯಕ್ತಿಗಳ ಮತ್ತು ಸ್ವಾಮಿಗಳ ಮುಖಂಡತ್ವದಲ್ಲಿ ಸಮಿತಿ ರಚಿಸಬೇಕು. ಇದರಲ್ಲಿ ಮಹಿಳೆಯರಿಗೆ ಅವಕಾಶ ಇರಬೇಕು
4) ಕೆರೆಯ ಏರಿಗಳು ಮತ್ತು ತೂಬುಗಳು ಮತ್ತು ಕೋಡಿಗಳನ್ನು ರಿಪೇರಿ ಮಾಡಿದ ನಂತರ ಪೈಪ್ ಲೈನ್ ಅಥವಾ ಹಳ್ಳದ ವ್ಯವಸ್ಥೆ ಮಾಡಬೇಕು
5) ಕೆರೆಯಲ್ಲಿ ಹೂಳು ತೆಗೆಸಬೇಕು ಮತ್ತು ಕೆರೆಯ ಮುಂದಿನ ಭಾಗದಲ್ಲಿ ಜನರು ಹೆಚ್ಚಾಗಿ ಒಡಾಡುವ ಸ್ಥಳಕ್ಕೆ ಸುರಕ್ಷಿತೆಗೆ ಹೆಚ್ವು ಗಮನ ಹರಿಸಬೇಕು
6) ಕೆರೆಯಲ್ಲಿ ನೀರು ಬಂದು ನಿಂತ ಮೇಲೆ ಏನನ್ನು ಮಾಡಲು ಆಗುವುದಿಲ್ಲ ಕಾರಣ ಮುಂಚಿತವಾಗಿ ಸರಿಯಾದ ಇಂಜಿನಿಯರ್ ಮೂಲಕ ಯೋಜನೆಯನ್ನು ರೂಪಿಸಿ ನಂತರ ಕೆಲಸ ಪ್ರಾರಂಭಿಸಬೇಕು
7) ಕೊನೆಯದಾಗಿ ಗುತ್ತುಗೆ ಕೆಲಸವನ್ನು ನುರಿತ, ಅನುಭವಿದಾರರಿಗೆ ಕೋಡಬೇಕು ಮತ್ತು ಅವರ ಮೇಲೆ ಊರಿನ ಜನರ ಹಿಡಿತ ಇರಬೇಕು
8) ಕೆಲಸ ಮಾಡುವಾಗ ಕಳಪೆ ಸಾಮಾಗ್ರಿಗಳನ್ನು ಹಾಕಿ ಕೆಲಸ ಮಾಡಿಸಿದರೆ ತಕ್ಷಣ ನಿಲ್ಲಿಸಲು ಯುವಕರು, ಮಹಿಳೆಯರು, ರೈತರು ಮುಂದೆ ಬರಬೇಕು
ಇವುಗಳು ನಮ್ಮ ಸಲಹೆ ನಮ್ಮ ಊರಿನ ಕೆರೆ ಸಾಗರವಾಗಿ ಇರಲಿ ಎಂಬ ಬಯಕೆ ನಮ್ಮದಾಗಿದೆ. ಯೋಚಿಸಿ, ಈ ಭಾಗದ ಜನಪ್ರತಿನಿಧಿಗಳು ನೀರಾವರಿ ನಿಗಮದ ಪ್ರಧಾನ ಕಾರ್ಯದರ್ಶಿಗಳು, ಮುಖ್ಯ ಅಭಿಯಂತರರು, ನೀರಾವರಿ ನಿಗಮದ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಪಾಲ್ಗೊಳ್ಳುವ ನಿರೀಕ್ಷೆ ಇರುತ್ತದೆ. ಆದ್ದರಿಂದ ಈ ಭಾಗದ ಸಮಸ್ತ ರೈತ ಭಾಂದವರು ಸಭೆಗೆ ಆಗಮಿಸಬೇಕು ಮತ್ತು ತಮ್ಮ ತಮ್ಮ ಸಲಹೆಯನ್ನು ಯಾರಿಗೂ ಹೆದರದೆ ನೀಡಿ ಊರಿನ ಅಭಿವೃದ್ದಿಗೆ ಮುಂದಾಗಿ..
ವರದಿ: ಮುರುಳಿಧರ್ ನಾಡಿಗೇರ್, ಹೊಸಪೇಟೆ
Get in Touch With Us info@kalpa.news Whatsapp: 9481252093
Discussion about this post