ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ನಮ್ಮ ಮನೆಯ ಸದಸ್ಯನಂತಿರುವ ಕೃಷ್ಣನಿಗೆ ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ನಮ್ಮ ಕುಟುಂಬದ ಎಲ್ಲ ಸದಸ್ಯರೂ ಕೊರೋನಾ ಪರೀಕ್ಷೆ ಮಾಡಿಸಿಕೊಂಡಿದ್ದು, ಎಲ್ಲರಲ್ಲೂ ನೆಗೆಟಿವ್ ಬಂದಿದೆ. ಹೀಗಾಗಿ, ನಾನು ಸ್ವಯಂ ಕ್ವಾರಂಟೈನ್’ನಲ್ಲಿ ಇಲ್ಲ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಸ್ಪಷ್ಟನೆ ನೀಡಿದ್ದಾರೆ.
ತಮ್ಮ ನಿವಾಸದಲ್ಲಿ ಮಾತನಾಡಿರುವ ಅವರು, ನಿನ್ನೆ ರಾತ್ರಿಯೇ ನಾವೆಲ್ಲರೂ ಕೊರೋನಾ ಪರೀಕ್ಷೆಗೆ ಒಳಪಟ್ಟಿದ್ದು, ಎಲ್ಲರ ವರದಿಯೂ ಸಹ ನೆಗೆಟಿವ್ ಬಂದಿದೆ. ಹೀಗಾಗಿ, ಸ್ವಯಂ ಕ್ವಾರಂಟೈನ್’ಗೆ ಒಳಪಟ್ಟಿಲ್ಲ ಎಂದರು.
ನಾವು ಪ್ರತಿದಿನವೂ ಆರ್ಯುವೇದಿಕ್ ಔಷಧಿ ತೆಗೆದುಕೊಳ್ಳುತ್ತೇವೆ. ಹೀಗಾಗಿ ವರದಿ ನೆಗೆಟಿವ್ ಬಂದಿರಬಹುದು ಎಂದರು.
Get In Touch With Us info@kalpa.news Whatsapp: 9481252093

















