ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬೆಳಂದೂರು ರೋಡ್ ಮತ್ತು ಕಾರ್ಮೆಲರಾಮ್ ನಡುವೆ ಜೋಡಿ ಮಾರ್ಗ ಕಾಮಗಾರಿ ನಿಮಿತ್ತ ಹಲವು ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದ್ದು, ಕೆಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.
ಈ ಕುರಿತಂತೆ ರೈಲ್ವೆ ಇಲಾಖೆ #IndianRailway ಮಾಹಿತಿ ನೀಡಿದ್ದು, ಕಾಮಗಾರಿ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವು ರೈಲುಗಳ ಸಂಚಾರ ರದ್ದು ಮಾಡಲಾಗಿದ್ದು, ಇನ್ನೂ ಕೆಲವು ರೈಲುಗಳ ಮಾರ್ಗ ಬದಲಾವಣೆ ಹಾಗೂ ನಿಯಂತ್ರಣವಾಗಲಿದೆ ಎಂದು ತಿಳಿಸಿದೆ.
ಈ ಎಲ್ಲಾ ರೈಲುಗಳ ರದ್ದತಿ:
1. ನವೆಂಬರ್ 25ರಂದು 66563 ಸಂಖ್ಯೆಯ ಯಶವಂತಪುರ- ಹೊಸೂರು ಮೆಮು, 66585 ಸಂಖ್ಯೆಯ ಯಶವಂತಪುರ- ಹೊಸೂರು ಮೆಮು ಮತ್ತು 06591 ಸಂಖ್ಯೆಯ ಯಶವಂತಪುರ- ಹೊಸೂರು ಮೆಮು ಸೇವೆಗಳನ್ನು ರದ್ದುಗೊಳಿಸಲಾಗುವುದು.
2. ನವೆಂಬರ್ 25ರಂದು 66564 ಸಂಖ್ಯೆಯ ಹೊಸೂರು – ಯಶವಂತಪುರ ಮೆಮು, 66586 ಸಂಖ್ಯೆಯ ಹೊಸೂರು – ಯಶವಂತಪುರ ಮೆಮು ಮತ್ತು 06592 ಸಂಖ್ಯೆಯ ಹೊಸೂರು – ಯಶವಂತಪುರ ಮೆಮು ಸೇವೆಗಳನ್ನು ರದ್ದುಗೊಳಿಸಲಾಗುವುದು.
1. ನವೆಂಬರ್ 25ರಂದು ಹೊರಡುವ 12677 ಸಂಖ್ಯೆಯ ಎಸ್’ಎಂವಿಟಿ ಬೆಂಗಳೂರು – ಎರ್ನಾಕುಲಂ ಎಕ್ಸ್’ಪ್ರೆಸ್ ರೈಲು ಎಸ್’ಎಂವಿಟಿ ಬೆಂಗಳೂರು, ಕೃಷ್ಣರಾಜಪುರಂ, ಜೋಲಾರ್ಪೇಟೈ ಎ ಕ್ಯಾಬಿನ್, ತಿರುಪತ್ತೂರು ಮತ್ತು ಸೇಲಂ ಮಾರ್ಗವಾಗಿ ಸಂಚರಿಸಲಿರುವುದರಿಂದ ಕಾರ್ಮೆಲರಾಮ್, ಹೊಸೂರು ಮತ್ತು ಧರ್ಮಪುರಿ ನಿಲ್ದಾಣಗಳ ನಿಲುಗಡೆಯು ಇರುವುದಿಲ್ಲ.
2. ನವೆಂಬರ್ 25ರಂದು ಹೊರಡುವ 16529 ಸಂಖ್ಯೆಯ ಎಸ್’ಎಂವಿಟಿ ಬೆಂಗಳೂರು – ಕಾರೈಕ್ಕಾಲ್ ಎಕ್ಸ್’ಪ್ರೆಸ್ ರೈಲು ಎಸ್’ಎಂವಿಟಿ ಬೆಂಗಳೂರು, ಕೃಷ್ಣರಾಜಪುರಂ, ಜೋಲಾರ್ಪೇಟೈ ಎ ಕ್ಯಾಬಿನ್, ತಿರುಪತ್ತೂರು ಮತ್ತು ಸೇಲಂ ಮಾರ್ಗವಾಗಿ ಸಂಚರಿಸಲಿರುವುದರಿಂದ ಬೆಳಂದೂರು ರೋಡ್, ಕಾರ್ಮೆಲರಾಮ್, ಹೀಲಲಿಗೆ, ಆನೇಕಲ್ ರೋಡ್, ಹೊಸೂರು, ಕೆಲಮಂಗಲಂ, ಪೆರಿಯನಾಗತುನೈ, ರಾಯಕ್ಕೋಟೈ, ಮಾರಂಡಹಳ್ಳಿ, ಪಾಲಕ್ಕೋಡು, ಧರ್ಮಪುರಿ, ಸಿವಾಡಿ, ಮುತ್ತಂಪಟ್ಟಿ, ತೋಪ್ಪೂರು, ಕಾರುವಳ್ಳಿ, ಸೆಮ್ಮಂದಪಟ್ಟಿ ಮತ್ತು ಓಮಲೂರ್ ನಿಲ್ದಾಣಗಳ ನಿಲುಗಡೆ ಇರುವುದಿಲ್ಲ.
3. ನವೆಂಬರ್ 25ರಂದು ಹೊರಡುವ 20642 ಸಂಖ್ಯೆಯ ಕೊಯಮತ್ತೂರು- ಬೆಂಗಳೂರು ಕಂಟೋನ್ಮೆಂಟ್ ವಂದೇಭಾರತ್ ಎಕ್ಸ್’ಪ್ರೆಸ್ ರೈಲು ಸೇಲಂ, ತಿರುಪತ್ತೂರು, ಜೋಲಾರಪೇಟೈ ಎ ಕ್ಯಾಬಿನ್, ಬಂಗಾರಪೇಟೆ, ಕೃಷ್ಣರಾಜಪುರಂ, ಮಾರ್ಗವಾಗಿ ಸಂಚರಿಸಲಿದ್ದು ಧರ್ಮಪುರಿ ಮತ್ತು ಹೊಸೂರು ನಿಲ್ದಾಣಗಳ ನಿಲುಗಡೆ ಇರುವುದಿಲ್ಲ.
4. ನವೆಂಬರ್ 25ರಂದು ಹೊರಡುವ 20641 ಸಂಖ್ಯೆಯ ರೈಲು ಬೆಂಗಳೂರು ಕಂಟೋನ್ಮೆಂಟ್ – ಕೊಯಮತ್ತೂರು ವಂದೇ ಭಾರತ್ ಎಕ್ಸ್’ಪ್ರೆಸ್ ರೈಲು ಕೃಷ್ಣರಾಜಪುರಂ, ಬಂಗಾರಪೇಟೆ, ತಿರುಪತ್ತೂರು, ಸೇಲಂ ಮಾರ್ಗವಾಗಿ ಸಂಚರಿಸಲಿದ್ದು ಹೊಸೂರು ಮತ್ತು ಧರ್ಮಪುರಿ ನಿಲ್ದಾಣಗಳ ನಿಲುಗಡೆ ಇರುವುದಿಲ್ಲ.
6. ನವೆಂಬರ್ 25ರಂದು ಹೊರಡುವ 16211 ಸಂಖ್ಯೆಯ ಯಶವಂತಪುರ – ಸೇಲಂ ಎಕ್ಸ್’ಪ್ರೆಸ್ ರೈಲು ಹೆಬ್ಬಾಳ, ಬಾಣಸವಾಡಿ, ಎಸ್’ಎಂವಿಟಿ ಬೆಂಗಳೂರು, ಕೃಷ್ಣರಾಜಪುರಂ, ಜೋಲಾರಪೇಟೈ ಎ ಕ್ಯಾಬಿನ್, ಸೇಲಂ ಮಾರ್ಗವಾಗಿ ಸಂಚರಿಸಲಿರುವುದರಿಂದ ಬೆಳಂದೂರು ರೋಡ್, ಕಾರ್ಮೆಲರಾಂ, ಹೀಲಲಿಗೆ ಆನೇಕಲ್ ರೋಡ್, ಹೊಸೂರು, ಕೆಲಮಂಗಲಂ, ಪೆರಿಯನಾಗತುನೈ, ರಾಯಕ್ಕೋಟೈ, ಮಾರಂಡಹಳ್ಳಿ, ಪಾಲಕ್ಕೋಡು, ಧರ್ಮಪುರಿ, ಸಿವಾಡಿ, ಮುತ್ತಂಪಟ್ಟಿ, ತೋಪ್ಪೂರು, ಕಾರುವಳ್ಳಿ, ಸೆಮ್ಮಂದಪಟ್ಟಿ ಮತ್ತು ಓಮಲೂರ್ ನಿಲ್ದಾಣಗಳ ನಿಲುಗಡೆ ಇರುವುದಿಲ್ಲ.
7. ನವೆಂಬರ್ 25ರಂದು ಹೊರಡುವ 16212 ಸಂಖ್ಯೆಯ ಸೇಲಂ – ಯಶವಂತಪುರ ಎಕ್ಸ್’ಪ್ರೆಸ್ ರೈಲು ಸೇಲಂ, ಜೋಲಾರಪೇಟೈ ಎ ಕ್ಯಾಬಿನ್, ಕೃಷ್ಣರಾಜಪುರಂ, ಎಸ್’ಎಂವಿಟಿ ಬೆಂಗಳೂರು, ಬಾಣಸವಾಡಿ, ಹೆಬ್ಬಾಳ ಮತ್ತು ಯಶವಂತಪುರ ಮಾರ್ಗವಾಗಿ ಸಂಚರಿಸಲಿರುವುದರಿಂದ ಓಮಲೂರು, ಸೆಮ್ಮಂದಪಟ್ಟಿ, ಕಾರುವಳ್ಳಿ, ತೋಪ್ಫೂರು, ಮುತ್ತಂಪಟ್ಟಿ, ಸಿವಾಡಿ, ಧರ್ಮಪುರಿ, ಪಾಲಕ್ಕೋಡು, ಮಾರಂಡಹಳ್ಳಿ, ರಾಯಕ್ಕೋಟೈ, ಪೆರಿಯನಾಗತುನೈ, ಕೆಲಮಂಗಲಂ, ಹೊಸೂರು, ಆನೇಕಲ್ ರೋಡ್, ಹೀಲಲಿಗೆ, ಕಾರ್ಮೆಲರಾಂ ಮತ್ತು ಬೆಳಂದೂರು ರೋಡ್ ನಿಲ್ದಾಣಗಳ ನಿಲುಗಡೆ ಇರುವುದಿಲ್ಲ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post