ತೀರ್ಥಹಳ್ಳಿ: ತಾಲೂಕಿನ ಗಡಿಭಾಗದ ಹುಂಚದಕಟ್ಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲಿಯ ವಾರ್ಷಿಕೋತ್ತವ, ಪ್ರತಿಭಾ ಪ್ರರಸ್ಕಾರ ಹಾಗೂ ಸನ್ಮಾನ ಸಮಾರಂಭಗಳು ಶಾಲಾ ಮೈದಾನದ ವೇದಿಕೆಯಲ್ಲಿ ವಿಜೃಂಭಣೆಯಿಂದ ಜರುಗಿತು.
ಸ್ವಾತಂತ್ರ ಪೂರ್ವದಲ್ಲಿ 1986ರಲ್ಲಿ ಮೈಸೂರು ಸಂಸ್ಥಾನದ ಮಹಾರಾಜರ ಕಾಲದಲ್ಲಿಹಳ್ಳಿಯ ಜನರಿಗೆ ವಿದ್ಯೆ ಕಲಿಸಲು ಪ್ರಾರಂಭಿಸಿದ ಈ ಶಾಲೆಗೆ ಈಗ 142 ವರ್ಷಗಳು ತುಂಬಿವೆ. ಇಷು ವರ್ಷಗಳಲ್ಲಿ ಈ ಶಾಲೆಯಲ್ಲಿ ವಿದ್ಯೆ ಕಲಿತವರು ವಿಶೇಷ ಸ್ಥಾನಮಾನ ವನ್ನು ಹೊಂದಿದವರು ಕಾಣ ಸಿಗುತ್ತಾರೆ.
ಇದೇ ಶಾಲೆಯಲ್ಲಿ ಓದಿ ಪ್ರಖ್ಯಾತ ವೈದ್ಯರಾದ, ವಿಧಾನಸಭಾ ಸದಸ್ಯರಾಗಿದ್ದ ಡಾ. ಜಿ.ಡಿ.ನಾರಾಯಣಪ್ಪ ಒಬ್ಬರು ಅವರು ಈ ದಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿ, 1946-1952ರವರೆಗೆ ನಾನು ಈ ಶಾಲಿಯಲ್ಲಿ ವಿದ್ಯಾಭ್ಯಾಸ ಮಾಡಿದ್ದೇನೆ. ಅಂದಿನ ಶಿಕ್ಷಕರುಗಳ ಉತ್ತಮ ಕಲಿಕೆಯಿಂದ ನಾನು ವೈದ್ಯನಾಗಿ, ಶಾಸಕನಾಗಿ ಸೇವೆ ಸಲ್ಲಿಸಲು ಸಾಧ್ಯವಾಗಿದೆಯೆಂದರೆ ತಪ್ಪಾಗಲಿಕ್ಕಿಲ್ಲ ಎಂದರು.
ಮುಖ್ಯ ಶಿಕ್ಷಕ ನಾಗರಾಜ್ ಸರ್ಕಾರಿ ಕೆಲಸ ದೇವರ ಕೆಲಸ ಎಂಬಂತೆ ಕರ್ತವ್ಯ ನಿರ್ವಹಿಸುತ್ತಿರುವುದು ಬೇರೆ ಎಲ್ಲಾ ಸರ್ಕಾರಿ ನೌಕರರಿಗೆ ಒಂದು ವಿಶೇಷ ಪಾಠವಾಗಿದೆ. ನನ್ನ ವೃತ್ತಿ ಬದುಕು. ಜೀವನಕ್ಕೆ ದಾರಿ ಮಾಡಿಕೊಟ್ಟ ಈ ಶಾಲಿಗೆ ಒಂದು ಕಂಪ್ಯೂಟರ್ ನೀಡುತ್ತಿದೇನೆಂದು ತಿಳಿಸಿದರು.
ಜಿಪಂ ಸದಸ್ಕೆ ಅಪೂರ್ವ ಶರಧಿ ಪೂರ್ಣೇಶ್ ಮಾತನಾಡಿ, ಈ ಶಾಲೆಯ ಮುಖ್ಯಶಿಕ್ಷಕ ಯಶಸ್ವಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಶಾಲಾ ಕಟ್ಟಡ ಅಭಿವೃದ್ದಿಗೆ 4 ಲಕ್ಷ ರೂ.ಗಳ ಅನುದಾನವನ್ನು ನೀಡುತ್ತಿದ್ದೇನೆ ಎಂದು ಹೇಳಿದರು.
ತಾಸಂ ಸದಸ್ಯೆ ಲಕ್ಷ್ಮೀ ಉಮೇಶ್ ಮಾತನಾಡಿ, ಈ ಶಾಲೆಯಲ್ಲ್ಲಿ 70 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿರುವುದು ಈ ಭಾಗದ ಜನರಿಗೆ ಸರ್ಕಾರಿ ಶಾಲೆಗಳ ಮೇಲೆ ಇರುವ ಕಾಳಜಿ ತೋರುತ್ತದೆ. ಇಂತಹ ಶಾಲೆಗೆ ತಾಪಂ ಅನುದಾನದಲ್ಲಿ ಕಟ್ಟಡ ಅಭಿವೃದ್ದಿಗೆ ಸಹಕಾರ ನೀಡುತ್ತೇನೆ ಎಂದು ತಿಳಿಸಿದರು.
ಹುಂಚದಕಟ್ಟೆ ಗ್ರಾಪಂ ಉಪಾಧ್ಯಕ್ಷ ಹಾಗೂ ಶಾಲೆಯ ಮಹಾಪೋಷಕರಾದ ಕೆ.ಎಸ್. ಮಹೇಶ್ ಮಾತನಾಡಿ, ಸರ್ಕಾರಿ ಶಾಲೆಯೆಂದರೆ ದೂರ ಸರಿಯುವ ಈ ಕಾಲಘಟ್ಟದಲ್ಲಿ ಹುಂಚದಕಟ್ಟೆ ಶಾಲೆ ಉತ್ತಮ ವಿದ್ಯಾಮಂದಿರವಾಗಿ ಹೊರಹೊಮ್ಮಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಚಾರ ಎಂದರು.
ಜಿಲ್ಲಾ ಪ್ರಸಸ್ತಿ ಪುರಸ್ಕೃತ ಶಿಕ್ಷಕ ನಾಗರಾಜ್, ಬೆಂಗಳೂರಿನ ಸಂವರ್ಧನ ಟ್ರಸ್ಟ್ನ ಶರಣಬಸಪ್ಪ, ಹಿಂದೂ ಸೇವಾ ಪ್ರತಿಷ್ಠಾನದ ರೇಣುಕಾ, ದೈಹಿಕ ಶಿಕ್ಷಕಿ ಮಂಜುಳಾ, ಬಿಸಿಯೂಟ ಅಡುಗೆಯ ಲತಾ, ಭಾವನ ಶಾಲೆಯಲ್ಲಿ ಉತ್ತಮ ಸೇವಾ ಕಾರ್ಯದ ವಿದ್ಯಾರ್ಥಿಗಳಾದ ದೀಕ್ಷಿತಾ, ನಂದಿತಾ, ರಚನಾ, ಸಿಂಚನಾ, ವಿಶೇಷ ಪ್ರತಿಭೆಯ ರುಜಿನಾ, ನಿತೃಶ್ರೀ ಇವರೆಲ್ಲರನ್ನೂ ವೇದಿಕೆಯಲ್ಲಿ ಗಣ್ಯರು ಸನ್ಮಾನಿಸಿದರು.
ಸಭಾ ವೇದಿಕೆಯ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಆರ್. ಗುರುರಾಜ್ ಭಗತ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಪಂ ಅಧ್ಯಕ್ಷೆ ನವಮಣಿ, ಹುಂಚದಕಟ್ಟೆ ಗ್ರಾ.ಪಂ. ಅಧ್ಯಕ್ಷೆ ಗೌರಮ್ಮ ದೇವರಾಜ್, ಸದಸ್ಯರುಗಳಾದ ಹೆಚ್.ಆರ್. ರಾಘವೇಂದ್ರ, ಪ್ರಕಾಶ್, ಚೇತನ್, ಆಶಾ ಪ್ರಕಾಶ್, ನರಸಮ್ಮ ಸುಬ್ಬಣ್ಣ, ಚಂದ್ರಮಣಿ ಸುರೇಶ್, ಶೈಲಜಾ ವೆಂಕಟಾಚಲ ಇನ್ನಿತರರಿದ್ದರು.
ಸಭಾ ಕಾರ್ಯಕ್ರಮದ ನಂತರ ಅಂಗನವಾಡಿ ಹಾಗೂ ಶಾಲಾ ಮಕ್ಕಳಿಂದ ಸಾಹಿತ್ಯಿಕ ಕಾರ್ಯಕ್ರಮ ಜರುಗಿತು. ಗೀತಾ ಪ್ರಾರ್ಥಿಸಿ, ಶಿಕ್ಷಕ ಬಿ. ನಾಗರಾಜ್ ಸ್ವಾಗತಿಸಿ, ಶಿಕ್ಷಕಿ ವಾಸುಕಿ ನಿರೂಪಿಸಿ, ಅನ್ನಪೂರ್ಣ ವಂದಿಸಿದರು. ಶಿಕ್ಷಕಿ ಅನ್ನಪೂರ್ಣ ವಾರ್ಷಿಕ ವರದಿ ವಾಚಿಸಿದರು.
(ವರದಿ: ಡಾ.ಸುಧೀಂದ್ರ)
Discussion about this post