ಕಲ್ಪ ಮೀಡಿಯಾ ಹೌಸ್ | ತೀರ್ಥಹಳ್ಳಿ |
ಪಟ್ಟಣದ ಬಾಳೇಬೈಲಿನಲ್ಲಿರುವ ಸರ್ಕಾರಿ ಪದವಿ ಕಾಲೇಜಿನಲ್ಲಿ ಗಣಕ ವಿಜ್ಞಾನ ವಿಭಾಗದ ಅತಿಥಿ ಉಪನ್ಯಾಸಕನಾಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀಹರ್ಷ ಶಾನ್ ಬೋಗ್(38)ಇವರು ತಮ್ಮ ಹೆಬ್ರಿ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶ್ರೀಹರ್ಷ ಸುಮಾರು 13 ವರ್ಷಕ್ಕೂ ಹೆಚ್ಚು ಕಾಲದಿಂದ ಈ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದು,
ಅತ್ಯಂತ ಉತ್ತಮ ಉಪನ್ಯಾಸಕ ಎಂದು ಹೆಸರು ಪಡೆದವರು.
ಕೊರೋನ ಸಂಕಷ್ಟ ಪರಿಸ್ಥಿತಿ ಜೀವನ ನಿರ್ವಹಣೆಯ ಕಷ್ಟ ಸಾಧ್ಯವಾಗಿದ್ದು, ಅತಿಥಿ ಉಪನ್ಯಾಸರಿಗೆ ಸರ್ಕಾರದ ಸೇವಾ ಭದ್ರತೆ ಆರ್ಥಿಕ ನೆರವು ಇಲ್ಲದಿರುವುದನ್ನು ಮನಗಂಡು ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಅವರ ಸಹೋದ್ಯೋಗಿಗಳು ಶಂಖೆ ವ್ಯಕ್ತಪಡಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post