ಕಲ್ಪ ಮೀಡಿಯಾ ಹೌಸ್ | ತೀರ್ಥಹಳ್ಳಿ |
ಆಗುಂಬೆ ಘಾಟಿಯ Agumbe ghat 7ನೆಯ ತಿರುವಿನಲ್ಲಿ ಮಹಮದ್ ಪಾಷಾ ಎನ್ನುವ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಬಿದ್ದಿದ್ದು, ತುರ್ತು ಕಾರ್ಯಾಚರಣೆ ನಡೆಸಿದ ಹಿಂದೂ ಕಾರ್ಯಕರ್ತರು ಅವರನ್ನು ರಕ್ಷಣೆ ಮಾಡಿದ್ದಾರೆ.
ಗುಜರಿ ಫ್ಯಾಕ್ಟರಿಯ ಮಾಲೀಕರಾದ ಮಹಮದ್ ಪಾಷ ಎನ್ನುವವರು ಆಗುಂಬೆ ಘಾಟಿಯ 7ನೆಯ ತಿರುವಿನಲ್ಲಿ ಆಕಸ್ಮಿಕವಾಗಿ 30 ಅಡಿ ಪ್ರಪಾತಕ್ಕೆ ಬಿದ್ದರು.
ಸ್ಕ್ರಾಪ್ ಗಾಡಿಯನ್ನು ಟ್ರ್ಯಾಕ್ಟರ್ ಟೋಯಿಂಗ್ ಮಾಡುತ್ತಿದ್ದ ವೇಳೆ ಗಾಡಿ ಬ್ರೇಕ್ ವಿಫಲವಾದ ಹಿನ್ನೆಲೆಯಲ್ಲಿ ರಸ್ತೆ ಬದಿಯಲ್ಲಿ ನಿಂತಿದ್ದ ಮಹಮ್ಮದ್ ಪಾಷಾ ಅವರಿಗೆ ಗುದ್ದಿದ ವೇಳೆ ಪ್ರಪಾತಕ್ಕೆ ಬಿದ್ದಿದ್ದಾರೆ.
Also read: ಪತ್ರಿಕೋದ್ಯಮ, ಸಂವಿಧಾನದ ಆಶಯಗಳ ರಕ್ಷಣೆಗೆ ಸಿಎಂ ಸಿದ್ದರಾಮಯ್ಯ ಸದಾ ಸಿದ್ದ: ಕೆ.ವಿ. ಪ್ರಭಾಕರ್
ಇನ್ನು ಆಗುಂಬೆ ಘಾಟ್ ನಿಂದ 25 ರಿಂದ 30 ಅಡಿ ಕೆಳಗಡೆ ಬಿದ್ದ ಪಾಷಾಗೆ ಗಂಭೀರ ಗಾಯವಾಗಿದ್ದು ಮೇಲಿನಿಂದ ಬಿದ್ದ ರಭಸಕ್ಕೆ ಪಾಷಾ ಅವರ ಸೊಂಟ ಮತ್ತು ತಲೆಗೆ ಪೆಟ್ಟು ಬಿದ್ದಿದೆ.
ಕೂಡಲೇ ಸ್ಥಳದಲ್ಲಿದ್ದ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಪಾಷಾ ಅವರನ್ನು ಪ್ರಾಣದ ಹಂಗು ತೊರೆದು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















