ಕಲ್ಪ ಮೀಡಿಯಾ ಹೌಸ್ | ತೀರ್ಥಹಳ್ಳಿ |
ಶ್ರೀರಾಮಮಂದಿರ ದೇವಸ್ಥಾನದಲ್ಲಿ #Ramamandira Temple ಸೆ.8ರ ರಾತ್ರಿ ದೇವಸ್ಥಾನದ ಬಾಗಿಲು ಒಡೆದು ಶ್ರೀ ರಾಮ ದೇವರ ವಿಗ್ರಹ, ದೇವರ ಕೈಯಲ್ಲಿ ಇದ್ದ ಬಿಲ್ಲು, ಕಾಣಿಕೆ ಹುಂಡಿಯಲ್ಲಿದ್ದ ಹಣವನ್ನು ಕಳ್ಳತನ ಮಾಡಲಾಗಿತ್ತು. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್, ಪೊಲೀಸ್ ಅಧಿಕ್ಷಕರು ಕಾರ್ಯಪ್ಪ, ಹೆಚ್ಚುವರಿ ಪೊಲೀಸ್ ಅಧಿಕ್ಷಕರು ರಮೇಶ್, ಪೊಲೀಸ್ ಅಧಿಕ್ಷಕರು,ಅರವಿಂದ್ ಕಲಗುಜ್ಜಿ, ಪೊಲೀಸ್ ಉಪ ಅಧಿಕ್ಷಕರು ಇಮ್ರಾನ್ ಬೇಗ್ ರವರ ಮಾರ್ಗದರ್ಶನದಲ್ಲಿ ಉಪ ನಿರೀಕ್ಷಕರು ಆಗುಂಬೆ ಠಾಣೆ ಶಿವನ ಗೌಡರವರ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಿ ಕೇವಲ ಎರಡು ಗಂಟೆಯ ಒಳಗಾಗಿ ಆರೋಪಿ ಕಳ್ಳನನ್ನು ಬಂಧಿಸಿದ್ದಾರೆ.

ಆಗುಂಬೆ ಠಾಣೆ ಸಿಬ್ಬಂದಿಗಳಾದ ಅನಿಲ್, ಸುರೇಶ್, ರಮೇಶ್, ನಾಗಾರ್ಜುನ, ಅವಿನಾಶ್, ಚೇತನ, ಆದರ್ಶ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post