ಕಲ್ಪ ಮೀಡಿಯಾ ಹೌಸ್ | ತೀರ್ಥಹಳ್ಳಿ |
ಶ್ರೀ ರಾಮೇಶ್ವರ ಉತ್ಸವ ಉತ್ಸವ ಹಾಡಿನ ಧ್ವನಿಸುರುಳಿಯು ಜ.3ರ ನಾಳೆ ಬೆಳಗ್ಗೆ 11 ಗಂಟೆಗೆ ಬಿಡುಗಡೆಯಾಗಲಿದೆ.
ಅನಂತ ಕಲ್ಲಾಪುರ ತೀರ್ಥಹಳ್ಳಿ ಅವರ ಸಾಹಿತ್ಯದಲ್ಲಿ ಮೂಡಿಬರಲಿರುವ, ಮಲೆನಾಡ ಕೋಗಿಲೆ ಗರ್ತಿಕೆರೆ ರಾಘಣ್ಣ ಇವರ ರಾಗ ಸಂಯೋಜನೆಯಲ್ಲಿ ರಾಘವೇಂದ್ರ ಡಿ.ಜಿ.ಮತ್ತು ತಂಡ ತೀರ್ಥಹಳ್ಳಿ ಇವರ ಗಾಯನದಲ್ಲಿ ಕುಂದಾಪುರದ ಎಸ್.ಯು ಮ್ಯೂಸಿಕ್ ಸಂಗೀತ ಸಂಯೋಜನೆ ಈ ಧ್ವನಿಸುರುಳಿಗಿದೆ.
ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರು ಧ್ವನಿಸುರುಳಿಯನ್ನು ಬಿಡುಗಡೆ ಮಾಡುಲಿದ್ದು, ಈ ಕಾರ್ಯಕ್ರಮದಲ್ಲಿ ಜಾತ್ರಾ ಸಮಿತಿ ಮತ್ತು ಪಟ್ಟಣ ಪಂಚಾಯತ್ ಸದಸ್ಯರಾದ ರಾಘವೇಂದ್ರ ಸೊಪ್ಪು ಗುಡ್ಡೆ, ತೀರ್ಥಹಳ್ಳಿ ಕ್ಷೇತ್ರದ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಕೆಸ್ತೂರು ಮಂಜುನಾಥ್, ತೀರ್ಥಹಳ್ಳಿ ಭಾಜಪ ಅಧ್ಯಕ್ಷರಾದ ರಾಘವೇಂದ್ರ ನಾಯಕ್, ರಂಗಾಯಣ ನಿರ್ದೇಶಕರು ಮತ್ತು ಪಟ್ಟಣ ಪಂಚಾಯತ್ ಸದಸ್ಯರಾದ ಸಂದೇಶ್ ಜವಳಿ, ವಿಶ್ವ ಹಿಂದು ಪರಿಷತ್ ಕಾರ್ಯದರ್ಶಿ ಗಣೇಶ್ ಪ್ರಸಾದ್ ಮತ್ತು ತೀರ್ಥಹಳ್ಳಿ ಭಾಜಪ ಯುವ ಮೋರ್ಚಾದ ಅಧ್ಯಕ್ಷರಾದ ಸಂತೋಷ್ ದೇವಾಡಿಗ ಉಪಸ್ಥಿತರಿರುವರು.
(ವರದಿ: ಅನಂತ ಕಲ್ಲಾಪುರ ತೀರ್ಥಹಳ್ಳಿ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post