ಕಲ್ಪ ಮೀಡಿಯಾ ಹೌಸ್ | ತೀರ್ಥಹಳ್ಳಿ |
ಮಾನವನ ಸ್ವಾರ್ಥಪರಾಕಾಷ್ಟೆ ಎಷ್ಟರ ಮಟ್ಟಿಗೆ ಜಾಗೃತಗೊಂಡಿದೆ ಎಂದರೆ ಉಳಿದೆಲ್ಲ ಜೀವಿಗಳನ್ನು ನಾಶ ಮಾಡಿಯಾದರೂ ತಾನು ಬದುಕಬೇಕು ಎಂಬ ಹುಂಬತನ ಮೇಲಿಂದ ಮೇಲೆ ಪ್ರಕಟವಾಗುತ್ತಲೆ ಇದೆ. ತನ್ನ ಬದುಕಿಗೆ ಪೂರಕವಾದ ಜೀವನಾಶಕ್ಕೆ ಮುಂದಾಗುವ ಮೂಲಕ ತನ್ನ ವಿನಾಶಕ್ಕೆ ತಾನೇ ಕಾರಣೀಕರ್ತನಾಗಿದ್ದಾನೆ. ಸಾವಿರಾರು ಇಂತಹ ನಿದರ್ಶನಗಳಲ್ಲಿ ತೀರ್ಥಹಳ್ಳಿ ತಾಲ್ಲೂಕಿನ ಚಿಬ್ಬಲಗುಡ್ಡೆಯೂ ಒಂದಾಗಿದೆ.
ತುಂಗಾನದಿ ತೀರದ ಪುರಾಣ ಪ್ರಸಿದ್ಧ ಚಿಬ್ಬಲಗುಡ್ಡೆ ಸಿದ್ಧಿ ವಿನಾಯಕ ಚಿಬ್ಬಲು ನಿವಾರಣೆಗೆ ಹರಕೆಯ ಕೇಂದ್ರ. ಹುಟ್ಟುಗಲ್ಲಿನ ವಿನಾಯಕನ ಮೂರ್ತಿಯೆ ಇಲ್ಲಿ ಆರಾಧ್ಯದೈವ. ಭಕ್ತಾದಿಗಳಿಂದ ತಕ್ಕಮಟ್ಟಿನ ದೇವಾಲಯ ನಿರ್ಮಾಣಗೊಂಡಿದ್ದು ಸಣ್ಣಪುಟ್ಟ ಧಾರ್ಮಿಕ ಹೋಮಹವನ ಸದಾ ನಡೆಯುತ್ತವೆ. ಈ ದೇಗುಲದ ಹಿಂದೆ ತುಂಗಾನದಿ ಹರಿಯುತ್ತಿದ್ದು ವಿಶೇಷವಾಗಿ ಯಥೇಚ್ಛ ಮೀನುಗಳು ನೋಡುಗರ ಗಮನ ಸೆಳೆಯುತ್ತವೆ. ಶೃಂಗೇರಿ ಬಿಟ್ಟರೆ ನಂತರ ಇಲ್ಲಿ ಮಾತ್ರ ಈ ದೃಶ್ಯ ಕಾಣಸಿಗಲು ಸಾಧ್ಯ. ಒಟ್ಟಾರೆ ವಿಶೇಷ ಮತ್ಸ್ಯಧಾಮವಾಗಿ ಕಂಗೊಳಿಸುವ ಎಲ್ಲಾ ಲಕ್ಷಣಗಳನ್ನು ಹೊಂದಿರುವ ಇಲ್ಲಿಗೆ ಈಗ ಜಲ ಹಗಲು ದರೋಡೆ ಮಾರಕವಾಗಿ ಪರಿಣಮಿಸಿದೆ.
Also read: ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ನಾಮಪತ್ರ ಸಲ್ಲಿಕೆ

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post