ಕಲ್ಪ ಮೀಡಿಯಾ ಹೌಸ್ | ತಿರುಪತಿ |
ಕನ್ನಡದಲ್ಲಿ ಸಿನಿ ಪಯಣ ಆರಂಭಿಸಿ, ತೆಲುಗಿಗೆ ತೆರಳಿ, ಈಗ ಬಾಲಿವುಡ್’ನಲ್ಲಿ ಚಾನ್ಸ್ ಗಿಟ್ಟಿಸಿರುವ ಕನ್ನಡತಿ, ನಟಿ, ಶ್ರೀಲೀಲಾ #Shrileela ಅವರು ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.

ಈ ಕುರಿತಂತೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಶ್ರೀಲೀಲಾಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಬಾಲಿವುಡ್’ಗೆ ಪದಾರ್ಪಣೆ ಮಾಡುತ್ತಿರುವ ಶ್ರೀಲೀಲಾ, ವರುಣ್ ಧವನ್ ಜೊತೆಯಲ್ಲಿ ಹೊಸ ಸಿನಿಮಾಗೆ ನಾಯಕಿಯಾಗಿ ಚಾನ್ಸ್ ಗಿಟ್ಟಿಸಿದ್ದಾರೆ.
ಅಲ್ಲದೇ, ಬಾಲಿವುಡ್’ನಿಂದ ಉತ್ತಮ ಅವಕಾಶಗಳು ನಟಿಗೆ ಅರಸಿ ಬರುತ್ತಿವೆ. ಹಾಗಾಗಿ ಅಮ್ಮ ಸ್ವರ್ಣ ಲತಾ ಜೊತೆ ಶ್ರೀಲೀಲಾ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ.
Also read: ಸೊರಬ | ಅಪರಿಚಿತ ವಾಹನ ಡಿಕ್ಕಿಗೆ ದನಗಳ ಭೀಕರ ಸಾವು | ಬಿಡಾಡಿ ದನಗಳ ಮಾಲೀಕರ ವಿರುದ್ಧ ಕ್ರಮಕ್ಕೆ ಆಗ್ರಹ
ಇನ್ನು, ಶ್ರೀಲೀಲಾ ನಟಿಸಲಿರುವ ಬಾಲಿವುಡ್ ಚಿತ್ರ ಪಕ್ಕಾ ಕಾಮಿಡಿ ಸಿನಿಮಾ ಆಗಿದ್ದು, ವರುಣ್ ತಂದೆ ಡೇವಿಡ್ ಧವನ್ ನಿರ್ದೇಶನ ಮಾಡಲಿದ್ದಾರೆ. ಜುಲೈ ಕೊನೆಯಲ್ಲಿ ಶೂಟಿಂಗ್ ಶುರುವಾಗಲಿದ್ದು, ಮುಂದಿನ ವರ್ಷ ಅಕ್ಟೋಬರ್’ನಲ್ಲಿ ಸಿನಿಮಾ ರಿಲೀಸ್ ಆಗಲಿದೆ ಎಂದು ಹೇಳಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news






















