ಕಲ್ಪ ಮೀಡಿಯಾ ಹೌಸ್ | ತಿರುವನಂತಪುರಂ |
ತನ್ನ ಒಳಉಡುಪಿನಲ್ಲಿ ಸುಮಾರು 1 ಕೋಟಿ ರೂ. ಮೌಲ್ಯದ ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಕಾಸರಗೋಡು ಮೂಲದ ಶಹಲಾ ಎಂಬ ಯುವತಿಯನ್ನು ಬಂಧಿಸಿರುವ ಘಟನೆ ಕೋಯಿಕ್ಕೋಡ್ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಖಚಿತ ಮಾಹಿತಿಯನ್ನು ಆಧರಿಸಿದ ಮಲಪ್ಪುರಂ ಪೊಲೀಸ್ ವರಿಷ್ಠಾಧಿಕಾರಿ ಸುಚಿತ್ ದಾಸ್ ಮತ್ತು ಅವರ ತಂಡವು ಭಾನುವಾರ ತಡರಾತ್ರಿ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಮೂಲಕ ಪಡೆದ ನಂತರ, ಹುಡುಗಿಯನ್ನು ವಿಮಾನ ನಿಲ್ದಾಣದ ಹೊರಗೆ ಪೊಲೀಸರು ವಶಕ್ಕೆ ತೆಗೆದುಕೊಂಡರು.
ಆನಂತರ ಆಕೆಯನ್ನು ವಿಚಾರಣೆಗೆ ಒಳಪಡಿಸಿದಾಗ ಎಲ್ಲ ಪ್ರಶ್ನೆಗಳಿಗೆ ಆಕೆ ವಿರೋಧ ವ್ಯಕ್ತಪಡಿಸಿದ್ದು, ತನ್ನನ್ನು ಬಿಟ್ಟುಬಿಡುವಂತೆ ಕೋರಿದ್ದಾಳೆ. ಆದರೆ, ಆಕೆಯನ್ನು ಕೂಲಂಕಶವಾಗಿ ಪರೀಕ್ಷೆ ನಡೆಸಿದಾಗ, ಆಕೆಯ ಒಳ ಉಡುಪುಗಳಿಗೆ ಜೋಡಿಸಲಾಗಿದ್ದ ಮೂರು ಪ್ಯಾಕೆಟ್’ಗಳಲ್ಲಿ ಒಂದು ಕೋಟಿ ರೂ. ಮೌಲ್ಯದ 1,884 ಗ್ರಾಂ ಚಿನ್ನವನ್ನು ಬಚ್ಚಿಟ್ಟಿರುವುದು ಪತ್ತೆಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post