ನೋಡಿದಷ್ಟೂ ಸಾಕು ಅನ್ನಿಸದ, ಹೊಗಳಿದಷ್ಟೂ ಮುಗಿಯದ ಸೋಗೆ ಚೆಂದ….! ಮನುಷ್ಯ ಎಷ್ಟೋಂದು ಅದ್ಭುತಗಳನ್ನು ಸೃಷ್ಠಿಸಿದ್ದಾನೆ..! ಎಲ್ಲಾ ರಂಗದಲ್ಲೂ ವಿಭಿನ್ನವಾಗಿ ಕಾಣಿಸಿಕೊಳ್ಳುವ ಬರದಲ್ಲಿ ಕಳೆದುಹೋಗಿದ್ದಾನೆ. ಇದರ ಹೊತ್ತಲ್ಲಿ ತಮ್ಮ ಗುಣವಂತಿಕೆಯಲ್ಲಿಯೇ ಒಂದು ಅದ್ದೂರಿ ದೇವಲೋಕ ಸೃಷ್ಟಿಸಿದ್ದು ಮಾತ್ರ ಸೋಜಿಗ! ಅಂತಹದ್ದೇ ಒಂದು ಉತ್ಸಹಿಮನಗಳ ಬಿಡದ ಶ್ರಮದಿಂದ ಮಕ್ಕಿಮನೆ ಕಲಾವೃಂದ 2019 ಕಾರ್ಯಕ್ರಮ ಡಾನ್ ಬಾಸ್ಕೋ ಹಾಲ್ ಮಂಗಳೂರು ಸದ್ದಿಲ್ಲದೇ ಸುದ್ದಿ ಮಾಡಿದ್ದು ಮಾತ್ರ ನಿಜ.
ಅಕ್ಷರಶಃ ಮಂತ್ರ ಮುಗ್ಧರಾಗಿ ಕುಳಿತುಕೊಳ್ಳಬೇಕು ಅನ್ನುವಷ್ಟರ ಮಟ್ಟಿಗೆ ಅದ್ದೂರಿಯಾಗಿ ನಡೆಯಿತು. ವಿಭಿನ್ನ ವೇಷಭೂಷಣ ಅದಕ್ಕೆ ಅದರದ್ದೆ ಆದ ಗೌರವದೊಂದಿಗೆ ಸದ್ದಿಲ್ಲದೇ ದೇವಲೋಕದ ದರ್ಶನ ಮಾಡಿಸಿ ಬಿಟ್ಟದ್ದು ಮಾತ್ರ ಸೋಜಿಗ.
ಹೇಯ್ ಇಷ್ಟೆನಾ, ಎನ್ನುವಷ್ಟರಲ್ಲಿ ಕಿವಿಗವಚಿ ಎಬ್ಬಿಸಿದಂತೆ ಚಿತ್ರಾಪುರ ತಂಡದವರ ಚೆಂಡೆವಾದನ ದೇವಲೋಕದ ಬಳಗಕ್ಕೆ ಮತ್ತೆ ಆಹ್ವಾನಿಸಿ ಇನ್ನೂ ಏನೋ ಇದೆ ಎನ್ನುವಷ್ಟರ ಮಟ್ಟಿಗೆ ಕಾರ್ಯ ಚಾಲನೆಯಾಯಿತು. ಅನೇಕ ವೇದಿಕೆಗಳಲ್ಲಿ ಎಲ್ಲರ ಮನಸೂರೆಗೊಳಿಸಿದ ಶ್ರೀದೇವಿ ಸ್ಯಾಕ್ಸೋಫೋನ್ ಬಳಗದವರಾದ ಜ್ಯೋತಿ ತುಳಸಿ ಸಹೋದರಿಯರ ನಾದ ಜೋಗದ ನಾಡಿನ ಸೋಗು ಮತ್ತೆ ನೆನಪಿಸಿ ಕವಿಮನವ ಕೆದಕಿದಂತೆ ಇತ್ತು.
ಇದರ ನಡುವೆ ನಂದಗೋಕುಲ ಕಲಾತಂಡ ಮಂಗಳೂರು ಶ್ವೇತಾ ರಾವ್ ಅರೆಹೊಳೆ ನೇತೃತ್ವದಲ್ಲಿ ಗಣಪತಿ ಸ್ತುತಿಯ ಭರತನಾಟ್ಯವು ಮನಸೂರೆಗೊಳಿಸಿತು. ಮಕ್ಕಿಮನೆ ಕಲಾವೃಂದ ಮಾರ್ನಾಡು ತಂಡದ ಪುಟ್ಟ ಪುಟ್ಟ ಮಕ್ಕಳು ಹೆಜ್ಜೆಗೆ ಗೆಜ್ಜೆ ಕಟ್ಟಿ ಜಾನಪದ ನೃತ್ಯವನ್ನು ಆಸಕ್ತರು ಹುಬ್ಬೆರಿಸಿ ಹೊಗಳುವಂತೆ ಪ್ರದರ್ಶನ ನೀಡಿದರು.
ಹಾಗೆಯೇ ಡ್ರೀಮ್ ಕ್ರಶಸ್ ತಂಡ ಮಂಗಳೂರು ಇವರು ನಿನ್ನ ಪೂಜೆಗೆ ಬಂದೆ ಮಹದೇಶ್ವರ ಅಂತ ಧರೆಗಿಳಿವ ಧಾರೆಯು ನಾಚುವಂತೆ ಹಾಡಿದ್ದು ಶಿವನ ಆರ್ದ್ರಾ ಭಕ್ತಿಗೆ ಸಾಕ್ಷಿಯಾಯಿತು.
ಸ್ವಾರ್ ಕಿಡ್ಸ್ ಗುರುಪುರದ ಸಾಕ್ಷಿಗುರುಪುರ ತಂಡದ ಸಿನಿನೃತ್ಯವು ಆಗಮಿಸಿದ ನಾಯಕಿಯರು ನಾಚುವಂತೆ, ಪುಟಾಣಿಗಳ ನೃತ್ಯವು ಬಳುಕುವ ಬಳ್ಳಿಗಳಂತೆ ಸಾವಾಲಿನ ನೃತ್ಯ ನೆರೆದವರನ್ನು ಬೆರಗುಗೊಳಿಸುವ ಹಾಗಿತ್ತು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತಿ ಚಿಕ್ಕ ವಯಸ್ಸಿನಲ್ಲೇ ದಾಖಲೆ ಬರೆದಂತೆ ಮಂಗಳಮಳಿ ಮ್ಯಾಜಿಕ್ ಬಳಗ ಅಂಜನಮಳಿ, ಅಪೂರ್ವ ಮಳಿ ಇವರು ಕುಳಿತವರೆ ಬೆರಗುಗೊಳಿಸುವಂತೆ ಜಾದುಲೋಕವನ್ನು ತೋರಿಸಿದರು. ಅವರ ಕೈಚಳಕದಿಂದ ಒಂದರಗಳಿಗೆ ಸಭಿಕರು ದಂಗಾಗಿ ಮರುಳಾದರು ಅವರ ಜಾದುಮಯ ಜಗತ್ತಿಗೆ.
ಇದಲ್ಲದೆ ಕಲಾ ಮಾಯಾ ಜಾನಪದ ಕಲಾ ತಂಡ ಉಡುಪಿ ಇವರ ಪೂಜಾ ಕುಣಿತ ಭಾರತೀಯ ಸಂಸ್ಕೃತಿ ಮತ್ತು ಧಾರ್ಮಿಕತೆಯ ಪ್ರತೀಕತೆಯನ್ನು ಸಾರಿತು. ನೆರೆದವರು ಎದ್ದುನಿಂತು ಅವರ ನೃತ್ಯಕ್ಕೆ ಗೌರವಿಸಿದರು ಅಂತಹ ಅದ್ಭುತ ನೃತ್ಯವು ಸಚಿನ್ ಸಾಲ್ಯಾನ್ ಉಡುಪಿ ಅವರ ಮಾರ್ಗದರ್ಶನದಲ್ಲಿ ಮೂಡಿದ್ದು ಹೆಮ್ಮೆ ಅನಿಸಿತು.
ಇನ್ನೊಂದು ಅದ್ಭುತ ನೃತ್ಯ ಶೃತಿ ಡಿ. ದಾಸ್ ಕಾವಳಕಟ್ಟೆ ಅವರ ನಿರ್ದೇಶನದಲ್ಲಿ ನಾಟ್ಯ ಲಹರಿ ನೃತ್ಯ ತಂಡದ ಶಿವತಾಂಡವ ನೃತ್ಯವು ಕೂಡ ಅದ್ಭುತ ಎನಿಸಿತು.
ಭಾರತೀಯ ಸಂಸ್ಕೃತಿಯಲ್ಲಿ ರಾಜಸ್ಥಾನಿ ಶೈಲಿ ಕೂಡ ಒಂದು,ಅಂತಹ ನೃತ್ಯ ಪ್ರಕಾರವನ್ನು ಜಗದೀಶ್ ಬಾರಿಕೆ ನಿರ್ದೆಶನದಲ್ಲಿ ತಾಂಡವ ನೃತ್ಯಾಲಯ ಹಳೆನೆರಂಕಿ ಇವರ ನೇತೃತ್ವದಲ್ಲಿ ಸಾಂಸ್ಕೃತಿಕ ಜಗತ್ತಿನ ಅನಾವರಣ ಆಯಿತು. ಇದಾದ ನಂತರ ಮಕ್ಕಿಮನೆ ಕಲಾವೃಂದ ಸಂಗೀತ ತಂಡ ಜಯಶ್ರೀ ಡಿ ಜೈನ್ ಹೊರನಾಡು, ವಿಶ್ವಾಸ ಗುರುಪುರ, ವೈಷ್ಣವಿ ಪಿ ಭಟ್, ಸಂಧ್ಯಾ ಭಟ್ ನಾಲ್ವರ ಹಾಡಿನ ಮೋಡಿಗೆ ಅರೆಗಳಿಗೆ ಮೌನಾವರಿಸಿ ಕೇಳಿದರು.
ನಂತರ ಮಕ್ಕಿಮನೆ ಕಲಾವೃಂದ ಮಂಗಳಾದೇವಿ ತಂಡವು ವಿಭಿನ್ನ ಬಗೆಯ ನೃತ್ಯ ಪ್ರದರ್ಶನ ನೀಡಿದರು. ಇಲ್ಲಿ ಸಾಂಸ್ಕೃತಿಕ ಲೋಕವೇ ನಾಚುವಂತ ಕಲಾದೇವಿಯ ಆರಾಧನೆ ನಿಜಕ್ಕೂ ನಡೆಯುವಂತೆ ಅನಿಸುತ್ತಿತ್ತು.
ಗಂಡುಕಲೆ ಎಂದೆ ಪ್ರಸಿದ್ಧಿ ಪಡೆದ, ಕನ್ನಡದ ಪುರಾತನ ನೃತ್ಯವಾದ ಯಕ್ಷಗಾನವನ್ನು ಶ್ರೀ ಯಕ್ಷನಿಧಿ ಯಕ್ಷಗಾನ ಸಂಸ್ಥೆಯ ಶಿವಕುಮಾರ್ ಮೂಡುಬಿದಿರೆ ಅವರ ಶಿಷ್ಯ ಬಳಗ ಅಕ್ಷರಶಃ ಯಕ್ಷಲೋಕದಲ್ಲಿ ಎಲ್ಲಾ ದೇವಾನುದೇವತೆಗಳು ಬಂದು ಹರಸಿಹೊದಂತೆ ಅನಿಸಿತು ಅಂತಹ ಮಧುರ ಕ್ಷಣಕ್ಕೆ ಸಾಕ್ಷಿಯಾದರು.
ಇದರ ಜೋತೆಯಲ್ಲಿಯೇ ಕಲೆಗೆ ವಯಸ್ಸಿನ ಮಿತಿಯಿಲ್ಲ ಅನ್ನುವ ಮಾತಿದೆ ಅಂದರಂತೆ ವೇದಿಕೆ ಇಲ್ಲಿ ಅರ್ಥಪೂರ್ಣವಾಗಿತ್ತು ಪ್ರಣವ್ ಪಿ ಬೆಂಗಳೂರು (ಮಿನಿ ಕಂಪ್ಯೂಟರ್)ಮತ್ತು ತಕ್ಷಿಲ್ ಎಮ್ ದೇವಾಡಿಗ(ಮಾತುಗಾರ) ಇವರುಗಳ ಅಸಾಧಾರಣ ಪಾಂಡಿತ್ಯ ಜನಮೆಚ್ಚುಗೆ ಪಡೆಯಿತು. ಅರಳು ಹುರಿದಂತೆ ಮಾತನಾಡುವ ಪ್ರತಿಭೆಗಳು ಇವರು ಲಕ್ಷ್ಮಿ ಪಟಾಕಿ ಒಮ್ಮೆಲೇ ಸಿಡಿದಂತೆ ಭಾಸವಾಯಿತು!
ಮಕ್ಕಿಮನೆ ಕಲಾವೃಂದ ಮತ್ತು ಎಂ.ಜೆ. ಇಂಪ್ರೇಷನ್ ಮೂಡುಬಿದಿರೆ ಈ ಕಲಾ ಬಳಗವು ತಂದೆ ತಾಯಿ ಇವರುಗಳ ಬಗ್ಗೆ ಅರಿವು ಮೂಡಿಸುವ ನೃತ್ಯ ಪ್ರದರ್ಶನ ಮಾಡಿದರು. ಜೊತೆಗೆ ಆರಾಧನ ನೃತ್ಯ ಕೇಂದ್ರ ಮೂಡುಬಿದಿರೆ ಈ ಒಂದು ನೃತ್ಯವು ಕೂಡ ಕಾತರದಿ ಕಾಯುತ್ತಾ ಕುಳಿತ ಮನಸುಗಳಿಗೆ ತುಸು ಮುನಿಸು ಮರೆಸಿ ಬೆರಳುಗಳು ಮೂಗತುದಿಯಲ್ಲಿಡುವಂತೆ ಭರತನಾಟ್ಯ ಪ್ರದರ್ಶನ ಮಾಡಿದರು. ಮುಖ್ಯವಾಗಿ ಪಂಚಮಿ ಮರೂರು ಇವರ ಬಗ್ಗೆ ಹೇಳುವುದಕ್ಕೆ ಪದಗಳಿಲ್ಲ ಅಂತಹ ಮಹಾನ್ ಚೇತನ ಇವರು.
ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದ ಅದೇಷ್ಟೋ ಲೆಕ್ಕವಿಲ್ಲದಷ್ಟು ಪ್ರಶಸ್ತಿ ಬಾಚಿಕೊಂಡ ಹೆಗ್ಗಳಿಕೆ ಇವರದು, ಕೀರ್ತನಾ ಕಲಾ ತಂಡಗಳ ಮುಂಡಾಜೆ ಇವರ ಹಾಸ್ಯಭರಿತ ಮಿಮಿಕ್ರಿ ಕುಳಿತವರೆಲ್ಲಾ ಯಕ್ಷಲೋಕದ ಭಾಗವತರ ಧ್ವನಿಯಲ್ಲಿ ಒಮ್ಮೆಲೇ ಕೇಳುತ್ತಾ, ಒಂದರಗಳಿಗೆ ತುಸು ಅವರ ಧ್ವನಿಗೆ ಸಾಟಿ ಇಲ್ಲ ಎನ್ನುತ್ತಿದ್ದರು!
ತದನಂತರ ಆಧುನಿಕತೆಯ ಬರದ ಬೆಳವಣಿಗೆ ಇಂದು ಪರಿಸರ ನೆಲಗಚ್ಚಿ ನರಳುತ್ತಿರುವ ಹೊತ್ತಿಗೆ ಜನರಲ್ಲಿ ಅರಿವು ಮೂಡಿಸುವ ಒಂದು ರೋಮಾಂಚನ ನೃತ್ಯವನ್ನು ಅಮೃತೇಶ್ವರ ನಾಟ್ಯಾಲಯ ವಾಮಂಜೂರು ಚಿತ್ರಾಕ್ಷಿ ಸುರತ್ಕಲ್ ಅವರ ನೇತೃತ್ವದಲ್ಲಿ ಅದ್ಭುತವಾದ ಸಂದೇಶ ತಿಳಿಸಿಕೊಟ್ಟರು. ಜೋತೆಗೆ ವಿ ರೋಕ್ಸ ಡಾನ್ಸ್ ಕಂಪನಿ ಉಡುಪಿ ಇಲ್ಲಿಯ ಕಲಾಬಳಗವು ಹೆಜ್ಜೆಗೂಡಿಸಿ ಪಿಲಿನಲಿಕೆ ಮಾಡಿ ಕುಳಿತವರು ಕೂಡ ಒಂದೆರಡೂ ಹೆಜ್ಜೆ ಹಾಕಿಬಿಡುವ ಅನ್ನುವಷ್ಟರ ಮಟ್ಟಿಗೆ ನೃತ್ಯ ಪ್ರದರ್ಶನ ಮಾಡಿದರು. ನಿಜವಾಗಲು ಗಂಡು ಮಕ್ಕಳು ನಾಚುವಂತೆ ಹೆಣ್ಣುಹುಲಿಗಳ ಆರ್ಭಟ ಮಾಡುತ್ತಾ ಹುಡುಗಿಯರು ಪಿಲಿನಲಿಕೆಯಲ್ಲಿ ಕಡಿಮೆಯಿಲ್ಲ ಎನ್ನುವುದನ್ನು ತೋರಿಸಿಕೊಟ್ಟರು.
ನಮ್ಮ ದೇಶ ಎಂದರೆ, ನೆನಪಾಗುವುದು ಗಡಿಯಲ್ಲಿನ ಸೈನಿಕರು ಮತ್ತೆ ಗುಡಿಯಲ್ಲಿನ ದೇವರು. ಇಷ್ಟೆ!
ತಾಯಿ -ತಂದೆ, ಮಡದಿ, ಮಕ್ಕಳು, ಸಂಸಾರ ಯಾವ ಲೆಕ್ಕವನ್ನು ಎಣಿಸದೇ ದೇಶದ ರಕ್ಷಕರಾಗಿ ನಮಗೆ ಆಸರಾದ ದೇವರುಗಳಿಗೆ ನಾಟ್ಯ ಕಲಾಂಜಲಿ ತಂಡ ಬಜ್ಪೆ ಇವರ ನೇತೃತ್ವದಲ್ಲಿ ವೀರಸೈನಿಕರಿಗೆ ನಮನ ಎನ್ನುವ ನೃತ್ಯ ನೆರೆದವರ ಕಣ್ಣಾಲಿಗಳಲ್ಲಿ ಕಂಬನಿ ಮಿಡಿಯುವಂತೆ ಇತ್ತು, ನಮ್ಮ ಹೆಮ್ಮೆಯೊ ಅಥವಾ ದೈವ ಕೃಪೆಯೋ ಈ ನೃತ್ಯವನ್ನು ಮಾಜಿ ಸೈನಿಕರು ಎದುರು ಕುಳಿತು ವೀಕ್ಷಿಸುತ್ತಿದ್ದರು. ಕಾರ್ಗಿಲ್ ಕದನವಾದ ಸಂದರ್ಭದಲ್ಲಿ ಇವರು ಪರೋಕ್ಷ ಕಾರಣೀಭೂತರಾಗಿದ್ದರು ಎಂದಾಗ ಹೆಮ್ಮೆ ಅನಿಸಿತು. ಕಣ್ಣಾಲಿಗಳು ತೇವವಾಗಿ ಒರೆಸುವಾ ಹೊತ್ತಿಗಾಗಲೆ ಮಕ್ಕಿಮನೆ ಕಲಾವೃಂದ ಇವರಿಂದ ಒಂದು ರಾಂಪ್ ವಾಕ್ ಇದು ಅಂತಿಮ ಕಾರ್ಯಕ್ರಮ ಆದರು ಕೂಡ ಒಂಚೂರು ಬೇಸರಿಸದೆ ಚಪ್ಪಾಳೆ ಮಹಾಪೂರ, ಶಿಳ್ಳೆ, ಕಿರುಚಾಟ ಎಲ್ಲಾ ಸಮ್ಮಿಲನವಾಗಿತ್ತು.
ಕಲಾವೃಂದ ಇಷ್ಟೊಂದು ಅದ್ಬುತವಾಗಿದೇಯಾ ಅನಿಸುವಷ್ಟು ಸುಂದರವಾಗಿ ಹೆಜ್ಜೆ ಹಾಕುತ್ತಾ ವಿವಿಧ ರಾಜ್ಯದ ಶೈಲಿಯ ವೇಷಭೂಷಣ ಸ್ಪರ್ಧೆ ನಡೆಯಿತು. ಜೊತೆಗೆ ಭಾಗವಹಿಸಿದ ಎಲ್ಲ ಮಕ್ಕಳು ಕೂಡ ಅನೇಕ ರಿಯಾಲಿಟಿ ಶೋ, ಚಲನಚಿತ್ರಗಳಲ್ಲಿ ಮತ್ತೆ ನಾನಾ ಕ್ಷೇತ್ರಗಳಲ್ಲಿ ಹೆಸರುಗಳಿಸಿದವರು ಆಗಿದ್ದೂ, ಸೂಮಾರು 25 ಕ್ಷೇತ್ರದಲ್ಲಿ ಗುರುತಿಸಿಕೊಂಡ ಮಕ್ಕಳು ಭಾಗವಹಿಸಿದ್ದು, ಈ ವೇದಿಕೆಗೆ ಸಂದ ಗೌರವ ಇದಾಗಿತ್ತು. ಇವರೊಂದಿಗೆ ಸಪ್ತಾ ಪಾವೂರ್ ಕೂಡ ಹೆಜ್ಜೆ ಹಾಕಿ ನಮ್ಮ ಬಳಗದ ಮೆರುಗಿಗೆ ಎಲ್ಲರೂ ರಂಗು ತುಂಬಿದರು. ರಮಿಜ್ ಮಂಗಳೂರು ಇವರು ಒಂದು ದಿನದಲ್ಲಿ ಹೆಜ್ಜೆ ಹಾಕುವ ಬಗೆಯನ್ನು ತೋರಿಸಿದ್ದು ಕೂಡ ಪ್ರತಿಭೆಗಳನ್ನು ಬೆಳೆಸುವಲ್ಲಿ ಪಾತ್ರರಾದರು..
ನಾದ ಸರಸ್ವತಿ ಸಾಂಸ್ಕೃತಿಕ ಕಲಾತಂಡ ಸಿರಸಿ ಸ್ನೇಹಶ್ರೀ ಹೆಗಡೆ ಸಿರಸಿ ಇವರ ಬೆಂಕಿಯ ನೃತ್ಯ ನೆರೆದ ಸಭಿಕರ ಮೈ ರೋಮಗಳು ನವಿರಾಗಿ ಎದ್ದು ನಿಲ್ಲುವಂತೆ ಅನಿಸಿತು ಎರಡು ಕೈಗಳಲ್ಲು ಬೆಂಕಿಯ ಕುಂಡ ಜೊತೆಗೆ ಶಿರದ ಮೇಲೆ ಸೊಂಟದಲ್ಲಿ ರಿಂಗ್ ಅಚ್ಚರಿ ಎನಿಸುತ್ತದೆ ಆದರೂ ನಿಜ! ಎಲುಬಿಲ್ಲದ ದೇಹ ಎಂದರೂ ತಪ್ಪಾಗಲಾರದು ಜೊತೆಯಲ್ಲಿಯೇ ಅಪೇಕ್ಷಾ ಮಂಗಳೂರು ಇವರು ಕೂಡ ಈ ನೃತ್ಯಕ್ಕೆ ಭಾಗಿಯಾಗಿ ಮಾಡಿದ್ದು ಹರ್ಷನೀಯ. ನೋಡುಗರ ಮನಸ್ಸು ಎಲ್ಲಿ ನೋಡುವುದು, ಯಾವುದರ ಸವಿಯನ್ನು ಸವಿಯುವುದು ಎಂದು ಒಂದರಗಳಿಗೆ ತಾವು ಮರುಳಾಗಿದ್ದರು. ಹೌದು ಅಕ್ಷರಶಃ ಒಂದೆ ವೇದಿಕೆಯಲ್ಲಿ 2 ಅಥವಾ 3 ಕಾರ್ಯ ನಡೆಯುತ್ತಿರುತ್ತಿತ್ತು. ಯಾವುದಕ್ಕೆ ಗಮನ ಕೊಡಬೇಕು ಅನ್ನುವಷ್ಟರಲ್ಲಿ ಮುಗಿಯುತ್ತಿತ್ತು.
ಮರಳಿನ ಮಾಯೆಯೊಳು ಮನುಜನ ಕೈ ಚಳಕ ಪರಿಸರ ನಾಶದ ಕುರಿತು ಅದ್ಭುತ ಕಲಾಶೈಲಿಯು ಮೂಡಿಬಂತು. ಹರೀಶ್ ಆಚಾರ್ಯ ಮಂಗಳೂರು, ಪ್ರಸಾದ್ ಮೌಲ್ಯ ಸುರತ್ಕಲ್ ಇವರ ಪ್ರತಿಭೆ ಅಸಾಧಾರಣ ಎನಿಸಿತು ಅವ್ವನ ಅಳಲು, ಅವಳ ಪ್ರೀತಿ ಪ್ರಕೃತಿಯ ಪ್ರೇಮವನ್ನು ಜನತೆಗೆ ಸಾರುವ ವಿಷಯದಲ್ಲಿ ಎಲ್ಲರಿಗೂ ಹತ್ತಿರವಾದರು. ಜೊತೆಯಲ್ಲಿ ಆರ್ಟ್ ಗ್ಯಾಲರಿಯಲ್ಲಿ ವಿವಿಧ ಬಗೆಯ ಸುಂದರ ಪಟಗಳನ್ನು ಮೂಡಿಸಿ ಕಲಾವೃಂದದ ಮೆರುಗು ಹೆಚ್ಚಿಸಿದಂತೆ ಇತ್ತು, ಕಲಾಕಾರನ ಕೈಯಲ್ಲಿ ಕಲ್ಲು ಕರಗುತ್ತದೆ ಎನ್ನುವ ಮಾತಿದೆ. ಹೌದು ಬಾಹ್ಯವಾಗಿ ನೃತ್ಯ ಪ್ರದರ್ಶನವಾದರೆ, ಆ ನೃತ್ಯದ ಅಂತರಾಳವ ಕೆದಕಿ ಜನರನ್ನು ಮೋಡಿ ಮಾಡುವ ಕಲೆಯು ಪ್ರದೀಶ್ ಕೆ ಭಟ್ ಉಡುಪಿ ಕೂಡ ಒಬ್ಬರಾಗಿದ್ದರು ಇವರ ಬಗ್ಗೆ ಹೇಳಲು ಪದಗಳಿಲ್ಲ, ಅಂತಾರಾಷ್ಟೀಯ ಮಟ್ಟದಲ್ಲಿ ಕಲಾಜಗತ್ತಿನ ಹೂ ಎನಿಸಿಕೊಂಡವರು, ಗಿನ್ನಿಸ್ ಬುಕ್’ನಲ್ಲಿ ತಮ್ಮ ಸಹಿಯನ್ನು ಒತ್ತಿದವರು.
ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರ ಮುಖಪುಟ ಎದುರಲ್ಲಿ ಬಿಡಿಸಿ ಸೈ ಎನಿಸಿದರು. ಜೊತೆಗೆ ವೃಂದ ಕೊನ್ನಾರ್ ಇವರ ಕೈಯಲ್ಲಿ ಮೂಡಿದ ಗಣಪನ ಚಿತ್ರ ಈ ಕಾರ್ಯದಲ್ಲಿ ವಿಘ್ನಗಳಿದ್ದರೆ ದೂರಾದರು ಅಚ್ಚರಿಯಿಲ್ಲ, ಜೊತೆಗೆ ಈ ಸುಂದರ ಮುಖಪುಟದಲ್ಲಿ ಮುನ್ನ ಪೇಜಾವರ ಅವರ ಕೈಯಲ್ಲಿ ಮೂಡಿದ ಶಿವನ ಚಿತ್ರ, ಒಮ್ಮೆ ಶಿವಾಲಯಕ್ಕೆ ಹೋಗಿ ದರ್ಶಿಸಿದಂತೆ ಅನಿಸಿತು. ಈ ಮೂವರ ಬಿಡುವಿಲ್ಲದ ಗೀಚುವ ಬಗೆಗೆ ಅದೇಷ್ಟೂ ಜನ ಮರುಳಾದರೋ ಅರಿಯೆ. ಯಾವುದನ್ನು ಸಾಧಿಸಲು ಅಸಾಧ್ಯವೋ ಅದನ್ನು ಮಾಡಿ ತೋರಿಸುವುದು ಮಹಾನ್ ಸಾಧನೆ. ಮಾಜಿ ಸೈನಿಕರು, ರಾಜಕೀಯ ಮುತ್ಸದ್ದಿಗಳು, ಸಮಾಜ ಸೇವಕರು, ಕ್ರೀಡೆ, ಸಾಹಿತ್ಯ, ಸಾಂಸ್ಕೃತಿಕ ಎಲ್ಲಾ ರಂಗವನ್ನು ಗುರುತಿಸಿ ಅದರಲ್ಲಿ ಆಯ್ಕೆಗೊಂಡ 216 ಜನರನ್ನು ಪುರಸ್ಕರಿಸಿದ ಹೆಮ್ಮೆ ಬಳಗಕ್ಕೆ ಸಲ್ಲಬೇಕು.
ಇದೆಲ್ಲವನ್ನೂ ಕೂಡ ವಿ.ಜೆ. ಗುರುಪ್ರಸಾದ್ ಕೊಟ್ಯಾನ್ ರವೀಶ್ ಜೈನ್, ಶ್ರೇಯಾ ಜೈನ್, ಶ್ರೇಯಾದಾಸ್ ಅದೆಷ್ಟು ಅಚ್ಚುಕಟ್ಟಾಗಿ ಸ್ವಚ್ಚವಾದ ನುಡಿಯೊಂದಿಗೆ ಹಾಸ್ಯಬರಿತ ಮಾತು, ನಗೆಯ ರಸ, ದೇವಲೋಕದ ಕಿನ್ನರರಂತೆ ಬಿಡುವಿಲ್ಲದ ಸಮಯದಲೂ ಸರಳವಾಗಿ, ಜನರಿಗೆ ಬೇಸರಿಸದೆ, ನಗುವಿನ ಲೋಕದಲ್ಲಿ ಮಿಂದೇಳಿಸಿದ ಜನಮನಮುಟ್ಟುವಂತೆ ನಿರೂಪಿಸಿದ ಬಗೆ, ಬೇಸರಕ್ಕೂ ಹತ್ತಿರ ಸುಳಿಯದಿರು ಎನ್ನುವಂತೆ ಅನಿಸಿತು.
ಕೊನೆಯದಾಗಿ ಪ್ರತಿಭೆಗಳ ಹುಟ್ಟಿಗೆ ಕಾರಣರಾದ ಸುದೇಶ್ ಜೈನ್ ಮಕ್ಕಿಮನೆ ಇವರಿಗೆ ಸಲ್ಲಿಸಿದ ಗೌರವ ನಿಜಕ್ಕೂ ಸಭೆಯೇ ನಾಚುಂತೆಯಿತ್ತು. ಸರಳ ಸಜ್ಜನಿಕೆಯ ಮೇರು ವ್ಯಕ್ತಿತ್ವ, ಆತ್ಮೀಯತೆಗೆ ಸಂದ ಗೌರವ ಎನಿಸುತ್ತದೆ, ಇಷ್ಟೂ ಶಿಷ್ಯ ಬಳಗ ಹೊಂದಬೇಕು ಅನ್ನುವಷ್ಟರ ಮಟ್ಟಿಗೆ ಸಭೆಯೂ ಸಾಕ್ಷಿಯಾಯಿತು! ಅವರ ಕಣ್ಣಂಚಿನಲ್ಲಿ ಕಂಬನಿ ಅವರ ಶ್ರಮವನ್ನು ಒತ್ತಿ ಹೇಳುವಂತೆ ಇತ್ತು. ಹೆತ್ತವರು ಒಮ್ಮೆಲೆ ಭಾವುಕರಾದ ಕ್ಷಣ, ಮಕ್ಕಳ ಆರ್ದ್ರತೆ, ಇದರ ನಡುವೆ ಜಿಲ್ಲೆಯ ಯಾವುದೋ ಮೂಲೆ-ಮೂಲೆಯ ಪ್ರತಿಭೆಗಳನ್ನು ಅನಾವರಣಗೊಳಿಸಿ ಪ್ರೋತ್ಸಾಹಿಸುವ ಮೌನದೇಹಿಮನ ಇವರದು. ಏನನ್ನು ಸ್ವೀಕರಿಸದೆ ಗುಣವಂತಿಕೆಯ ಶಿಖರ ಎನಿಸಿದವರಿಗೆ ನೆರೆದ ಗಣ್ಯತಿಗಣ್ಯರು ಸೇರಿ ಗೌರವಿಸಿದ ಕ್ಷಣ ರೋಮಾಂಚನವೆನಿಸಿತು.
ಅಯ್ಯೋ ಕೊನೆಯಲ್ಲಿ ಮುಗಿದೇ ಬಿಟ್ಟಿತು ಎನ್ನುವ ಕೊಂಚ ಹೊಟ್ಟೆಕಿಚ್ಚು ಹಾಗೇ ಉಳಿಯಿತು. ಮತ್ತೆ ಸೇರುತ್ತೇವೆ ಎಂಬ ನಂಬಿಕೆಯಿಂದ ಮನ ಸುಮ್ಮನಾಯಿತು. ದಿನ ಅರ್ಥಪೂರ್ಣವೆನಿಸಿತು.
ನಾವು ಮಾಡುವ ಕೆಲಸದಲ್ಲಿ ಸೋಲು ಗೆಲುವುಗಳು ಪ್ರಯೋಗದಲ್ಲಿನ ಪ್ರತಿಕ್ರಿಯೆಗಳಷ್ಟೆ! ನಾವು ಮಾಡಿದ ಕಾರ್ಯಗಳೇ ಅಂತಿಮವಲ್ಲ, ಸೋತೆನೆಂದು ನಿಂತವನು ಹೇಡಿಯಷ್ಟೆ. ಈ ಸೋಲು ಎನ್ನುವುದು ಮತ್ತೆ ತೀವ್ರವಾಗಿ ಕೃಷಿ ಮಾಡುವಂತೆ ಮಾಡುವ ಅವಕಾಶ ಮಾತ್ರವೇ ಎಂದುಕೊಂಡು ಮತ್ತೆ ಪ್ರಯತ್ನಿಸುವವನೇ ಧೈರ್ಯಶಾಲಿ ಅಷ್ಟೇ ಅನಿಸುತ್ತದೆ. ಪರಿಸರ ಪ್ರೇಮ, ಅಳಿವಿನ ಅರಿವು ಮೂಡಿಸುವ ಸಲುವಾಗಿ ಅನ್ನಪೂರ್ಣ ನರ್ಸರಿ ಸೇತುವೆ ಉಡುಪಿ ಇವರು 250ಕ್ಕೂ ಅಧಿಕ ಸಸಿಗಳನ್ನು ಎಲ್ಲ ಗೌರವಾನ್ವಿತ ಪ್ರತಿಭೆಗಳಿಗೆ ಮತ್ತು ಗಣ್ಯರಿಗೆ ನೀಡಿರುವುದು ಚಿಗುರು ಪ್ರತಿಭೆಗಳೆಲ್ಲಾ ಮರವಾಗಿ ಬೆಳೆಯಲಿ ಎನ್ನುವಾ ಇವರ ಆಶಯ ನಿಜಕ್ಕೂ ಶ್ಲಾಘನೀಯ.
ಲೇಖನ: ಸುಜಾತ ಗಜೇಂದ್ರ ಜೈನ್ ಸಾಗರ
Discussion about this post