ಕರ್ನಾಟಕ ಕೇವಲ ಒಂದು ರಾಜ್ಯವಲ್ಲ. ಇದು ಅನೇಕ ಮಹಾನ್ ಸಾಧಕರ ನೆಲೆಬೀಡು. ಸಾಧನೆ ಮಾಡಲು ವಯಸ್ಸು ಎಂಬುದು ಯಾವುದೇ ಕಾರಣಕ್ಕೂ ತಡೆಗೋಡೆ ಆಗಲು ಸಾಧ್ಯವಿಲ್ಲ. ಹೀಗಾಗಿ ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರ ತನಕ ಸಾಧಕರನ್ನು ಈ ಮಣ್ಣಿನಲ್ಲಿ ಕಾಣಬಹುದು. ಇಂತಹ ಸಾಧಕರ ಪಟ್ಟಿಗೆ ಇನ್ನೊಂದು ಹೆಸರು ಸೇರ್ಪಡೆ ಆಗಿದೆ ಎಂದರೂ ತಪ್ಪಾಗಲಾರದು. ಆ ಹೆಸರೇ ಪುಟಾಣಿ ಸಾಧಕಿ, ಕುಣಿಯುವ ಜಿಂಕೆಮರಿ ಖ್ಯಾತಿಯ ಅಪೇಕ್ಷ.
ಹೌದು… ಕೇವಲ ಐದನೆಯ ತರಗತಿಯಲ್ಲಿ ಓದುತ್ತಿರುವ ಈ ಬಾಲೆ ನೃತ್ಯ ಲೋಕದೊಳಗೆ ತನ್ನದೇ ಆದ ಒಂದು ಹೆಜ್ಜೆ ಗುರುತು ಮೂಡಿಸುವ ನಿಟ್ಟಿನಲ್ಲಿ ಸಾಧನೆ ಮಾಡುತ್ತಿದ್ದಾಳೆ. ಪ್ರತಿ ವ್ಯಕ್ತಿಯ ಬದುಕಿನಲ್ಲಿ ಮೊದಲ ಗುರುವಿನ ಸ್ಥಾನ ತುಂಬುವುದು ತಾಯಿ. ಹಾಗೆ ಈಕೆಯ ಬದುಕಿನಲ್ಲಿ ಕೂಡಾ ತಾಯಿ ಪ್ರಮುಖ ಪಾತ್ರ ನಿರ್ವಹಿಸಿದರು. ಟಿವಿಯಲ್ಲಿ ಬರುತ್ತಿದ್ದ ನೃತ್ಯ ಕಾರ್ಯಕ್ರಮ ನೋಡಿ ತಮ್ಮ ಮಗಳು ಕೂಡ ಸಾಧನೆ ಮಾಡಬೇಕೆಂದು ತಾಯಿ ಬಯಸಿದರು. ಆ ಬಯಕೆಯನ್ನು ಅಪೇಕ್ಷ ಪೂರ್ಣ ಮಾಡಿದ್ದಾರೆ ಎನ್ನಬಹುದು.
ಗುರುಗಳ ಪ್ರೋತ್ಸಾಹ
ಕೇವಲ ನಾಲ್ಕನೆಯ ವಯಸ್ಸಿನ, ಈತರ ಚಿಣ್ಣರ ಜೊತೆಗೆ ಆಡಿಕೊಂಡಿರಬೇಕಾದ ಮಗು ನೃತ್ಯ ಅಭ್ಯಾಸ ಆರಂಭ ಮಾಡಿದಳು. ಕೆನರಾ ಊರ್ವ ಶಾಲೆಯಲ್ಲಿ ಪ್ರಸ್ತುತ ಐದನೆಯ ತರಗತಿಯಲ್ಲಿ ಈ ಬಾಲೆ ಓದುತಿದ್ದಾಳೆ. ಇವಳ ಕಲೆಗೆ ಶಾಲೆಯ ಎಲ್ಲ ಗುರುಗಳ ಪ್ರೋತ್ಸಾಹ ಇದೆ. ಇದು ಕೂಡ ಆಕೆಯ ಬೆಳವಣಿಗೆಗೆ ಸಹಾಯಕ ಎನ್ನಬಹುದು.
ಸ್ಫೂರ್ತಿಯ ಸೆಲೆ ಈಕೆ
ಈ ಬಾಲೆಯ ಊರು ಹಾಸನವಾದರೂ ಮಂಗಳೂರಿನಲ್ಲಿ ನೆಲೆಸಿದ್ದಾಳೆ. ಇನ್ನೂ ಈಕೆ ನೃತ್ಯದ ಜೊತೆಗೆ ಭರತನಾಟ್ಯ ಕೂಡಾ ಅಭ್ಯಾಸ ಮಾಡುತ್ತಿದ್ದಾಳೆ. ಆಡಿಕೊಂಡಿರಬೇಕಾದ ವಯಸ್ಸಿನಲ್ಲಿ ಪುಟಾಣಿ ಸರಿಸುಮಾರು 400 ಹೆಚ್ಚಿನ ನೃತ್ಯ ಪ್ರದರ್ಶನ ನೀಡಿ ತನ್ನ ವಯಸ್ಸಿನ ಮಕ್ಕಳಿಗೆ ಸ್ಪೂರ್ತಿಯ ಸೆಲೆಯಾಗಿದ್ದಾಳೆ.
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗಾದೆಯನ್ನು ಈಕೆಗಾಗಿಯೆ ಮಾಡಿರಬೇಕು. ಏಕೆಂದರೆ ಈಕೆ ಬಾಚಿಕೊಂಡ ಪ್ರಶಸ್ತಿಗಳು ಒಂದೆರಡಲ್ಲ. ಕರ್ನಾಟಕ ಪ್ರತಿಭಾ ರತ್ನಡಾನ್ಸ್ ಕಾ ಸೂಪರ್ ಸ್ಟಾರ್ 28ನೆಯ ಕರಾವಳಿ ಲಿಟಲ್ ಸ್ಟಾರ್ ಚಾಂಪಿಯನ್ ಶಿಪ್ತುಮಕೂರು ಜಿಲ್ಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ನೃತ್ಯ ನೃತ್ಯ ಸ್ಪರ್ಧೆಯಲ್ಲಿ ಸತತ ಎರಡು ವರ್ಷಗಳ ಕಾಲ ಚಾಂಪಿಯನ್ ಆಗಿದ್ದು ಈಕೆಯ ಪ್ರತಿಭೆಯ ಧ್ಯೋತಕವಾಗಿದೆ. ಮೊದಲಾದ ಪ್ರಶಸ್ತಿಗೆ ಮುತ್ತಿಕಿದ್ದಾಳೆ. ಅಲ್ಲದೇ ಕೃಷ್ಣ ವೇಷರಾಧಾಕೃಷ್ಣ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದಾಳೆ.
ಕುಣಿಯುವ ಜಿಂಕೆಮರಿ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಮಾತ್ರವಲ್ಲ ರಾಜ್ಯ ವ್ಯಾಪಿ ದೊಡ್ಡ ದೊಡ್ಡ ವೇದಿಕೆಯಲ್ಲಿ ಕುಣಿಯುವ ಮೂಲಕ ತನ್ನ ಪ್ರತಿಭೆಯನ್ನು ಪರಿಚಯಿಸಿದ್ದಾಳೆ. ಈಕೆಯ ನೃತ್ಯ ಕಲೆಯನ್ನು ಮೆಚ್ಚಿ ಈಕೆಗೆ ಕುಣಿಯುವ ಜಿಂಕೆಮರಿ ಎಂಬ ಅಭಿನಾಮ ಕೂಡ ನೀಡಲಾಗಿದೆ. ತನಗೆ ನೃತ್ಯ ತರಬೇತಿ ನೀಡಿದ ಗುರುಗಳು ಮತ್ತು ತನ್ನ ಪ್ರತಿಭೆ ಗುರುತಿಸಿ ಸ್ಪೂರ್ತಿ ಮತ್ತು ಸಹಕಾರ ನೀಡಿದ ಪ್ರತಿಯೊಬ್ಬ ವ್ಯಕ್ತಿಯನ್ನು ಈಕೆ ನೆನೆಯುತ್ತಾಳೆ. ಇಂತಹ ಸಹೃದಯಿ ಕಲಾ ಸರಸ್ವತಿಯ ಪುತ್ರಿ ತನ್ನ ರಂಗದಲ್ಲಿ ಇನ್ನಷ್ಟು ಸಾಧನೆ ಮಾಡಲಿ ಉಜ್ವಲ ಭವಿಷ್ಯ ಈಕೆಯದಾಗಲಿ ಕಲಾ ಸರಸ್ವತಿಯ ಆಶೀರ್ವಾದ ಈಕೆಯ ಮೇಲಿರಲಿ ಎಂದು ಬೇಡುತ್ತೇವೆ.
ಲೇಖನ ಮತ್ತು ಚಿತ್ರಕೃಪೆ: ಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ
ಸಹಕಾರ: ರೋಹನ್ ಪಿಂಟೊ ಗೇರುಸೊಪ್ಪ
Discussion about this post