No Result
View All Result
Tumkur limited height subway opens at bheemasandra gate
English Articles

Tumkur Traffic Relief : New Limited Height Subway Opens At Old Bheemasandra Gate

by kalpa News
September 18, 2026
0

Kalpa Media House  |  Tumkur   | Union Minister of State for Railways and Jal Shakti V. Somanna inaugurated the newly...

Read moreDetails
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
swr mysuru division swacchata hi seva 2026 campaign

SWR : Mysuru Division Launches Swachhata Hi Seva 2026 Campaign

September 18, 2026
Teen Gang Rape Killed By 3 Minors Body Eaten By Dogs

Teen Gangraped, Killed by Minors in Delhi Body Eaten by Dogs

September 18, 2026
mysuru rss journey exhibition showcasing its history

A Century of RSS Through a Unique Exhibition

September 17, 2026
  • Advertise With Us
  • Grievances
  • About Us
  • Contact Us
Monday, September 21, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ದಾವಣಗೆರೆ

ಕೊಟ್ಟ ಮಾತಿನಂತೆ ವೈದ್ಯರಾಗಿ ಹಿಮೋಫೀಲಿಯಾ ಸೊಸೈಟಿ ಕಟ್ಟಿದ ಸಾಧಕನ ಕಥೆಯಿದು

ರಾಜ್ಯವೇ ಹೆಮ್ಮೆ ಪಡುವ ಸಾಧಕ ಡಾ.ಸುರೇಶ್ ಹನಗವಾಡಿ ಅವರಿಗೆ ಪದ್ಮಶ್ರೀ | ದಾವಣಗೆರೆಗೆ ಇತಿಹಾಸದಲ್ಲೇ ಮೊದಲು

kalpa News by kalpa News
January 28, 2026
in ದಾವಣಗೆರೆ
0
ಕೊಟ್ಟ ಮಾತಿನಂತೆ ವೈದ್ಯರಾಗಿ ಹಿಮೋಫೀಲಿಯಾ ಸೊಸೈಟಿ ಕಟ್ಟಿದ ಸಾಧಕನ ಕಥೆಯಿದು
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  |

  • ಮಧ್ಯ ಕರ್ನಾಟಕ ದಾವಣಗೆರೆಯ ನಾಗರಿಕರೊಬ್ಬರಿಗೆ ಮೊದಲ ಬಾರಿಗೆ ಪದ್ಮಶ್ರೀ ಪ್ರಶಸ್ತಿ
  • ಕಾಯಿಲೆಗೆ ಬಲಿಯಾದ ಮಾವನಿಗೆ ಕೊಟ್ಟ ಮಾತಿನಂತೆ ವೈದ್ಯರಾದ ಡಾ. ಸುರೇಶ್ ಹನಗವಾಡಿ 
  • ಮಾವನ ಸಾವಿನಿಂದ ಪ್ರೇರಿತರಾಗಿ ಸುರೇಶ್ ಅವರು ಹಿಮೋಫೀಲಿಯಾ ಸೊಸೈಟಿ ಕಟ್ಟಿದ ಕತೆ ಇದು

ಕಾಯಿಲೆಗೆ ಬಲಿಯಾದ ಮಾವನಿಗೆ ಕೊಟ್ಟ ಮಾತಿನಂತೆ ವೈದ್ಯರಾದ ಸುರೇಶ್ ಹನಗವಾಡಿ ಎಂಬ ಸಾಧಕರೊಬ್ಬರ ಪ್ರೇರಣಾದಾಯಕ ಕತೆ ಇದು.

ಹೌದು… ಅವರು ಡಾ.ಸುರೇಶ್ ಹನಗವಾಡಿ. ಮಧ್ಯ ಕರ್ನಾಟಕ ದಾವಣಗೆರೆಯ ಖ್ಯಾತ ವೈದ್ಯ. ಕೊಟ್ಟ ಒಂದು ಮಾತಿಗಾಗಿ ವೈದ್ಯರಾಗಿದ್ದು ಮಾತ್ರವಲ್ಲ ಹಿಮೋಫೀಲಿಯಾ ಸೊಸೈಟಿ ಸ್ಥಾಪಿಸಿ, ಆ ರೋಗಿಗಳಿಗೆ ನೀಡಿ ಇವರ ಸೇವೆಯನ್ನು ಗುರುತಿಸಿರುವ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ #PadmaShriAward ಘೋಷಿಸಿದೆ. ವಿಶೇಷ ಎಂದರೆ ಜಿಲ್ಲೆಗೆ ಲಭಿಸಿದ ಮೊದಲ ಪದ್ಮಶ್ರೀ ಪ್ರಶಸ್ತಿಯ ಗೌರವ ಇದಾಗಿದೆ.

ಕಾಯಿಲೆಗೆ ಬಲಿಯಾದ ತಮ್ಮ ಮಾವನ ಸಾವಿನಿಂದ ಪ್ರೇರಿತರಾಗಿ ಸುರೇಶ್ ಅವರು ವೈದ್ಯರಾಗಿ ಕರ್ನಾಟಕ ಹಿಮೋಫೀಲಿಯಾ ಸೊಸೈಟಿಯನ್ನು #KarnatakaHemophiliaSociety ಸ್ಥಾಪಿಸಿ ಸಾವಿರಾರು ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಿದ್ದಾರೆ.
ಹಿಮೋಫೀಲಿಯಾ ಎಂಬ ರೋಗದ ಬಗ್ಗೆ ಅರಿವಿರಲಿ, ಅದರ ಪರಿಚಯವೇ ಇಲ್ಲದ ಸಮಯ. ಒಂದು ಮಗ್ಗುಲಲ್ಲಿ ರಕ್ತಸ್ರಾವ ರೋಗದಿಂದ ಬಳಲುತ್ತಿದ್ದವರು ತಮಗೆ ಯಾವ ಸಮಸ್ಯೆ ಇದೆ ಎಂಬ ಅರಿವಿಲ್ಲದೆಯೇ ಸಾವಿನ ಹಾದಿ ತುಳಿಯುತ್ತಿದ್ದರು. ಇಂಥ ಪರಿಸ್ಥಿತಿಯಲ್ಲಿ ರೋಗಿಗಳ ಆರೈಕೆಗಾಗಿ ದಾವಣಗೆರೆ ನಗರದಲ್ಲಿ 1990 ರಲ್ಲಿ ಜನ್ಮ ತಳೆದದ್ದೇ ಕರ್ನಾಟಕ ಹಿಮೋಫೀಲಿಯಾ ಸೊಸೈಟಿ.

ಇಂತಹ ಸಂಸ್ಥೆಯು ಮೂರು ದಶಕಗಳಿಂದ ಹಿಮೋಫೀಲಿಯಾ ರೋಗಿಗಳ ಸೇವೆಯಲ್ಲಿ ತೊಡಗಿ ಕೊಂಡಿದೆ. ನಿಸ್ವಾರ್ಥ ಸೇವೆ ಗುರುತಿಸಿ ರಾಜ್ಯ, ಅಂತಾರಾಜ್ಯ, ವಿದೇಶಗಳ ಹಲವು ಪ್ರಶಸ್ತಿಗೆ ಈ ಸಂಸ್ಥೆ ಭಾಜನವಾಗಿದೆ.

ವಿಶೇಷ ಎಂದರೆ ಈ ಸಂಸ್ಥೆಯು ನಗರ ಮಾತ್ರವಲ್ಲದೆ ಮಧ್ಯ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿರುವ #NorthKarnataka ಹಿಮೋಫೀಲಿಯಾ ರೋಗಿಗಳನ್ನು ಗುರುತಿಸಿ, ಅವರಿಗೆ ಉಚಿತ ಚಿಕಿತ್ಸೆ ನೀಡುತ್ತಿದೆ. ಪ್ರಮುಖವಾಗಿ ಆರ್ಥಿಕವಾಗಿ ಹಿಂದುಳಿದಿರುವ ರೋಗಿಗಳಿಗೆ ಪುನರ್ವಸತಿ ಸೌಲಭ್ಯ ಕಲ್ಪಿಸುತ್ತಿದೆ.

ನಗರದ ರಿಂಗ್ ರಸ್ತೆಯಲ್ಲಿನ ನಿಜಲಿಂಗಪ್ಪ ಬಡಾವಣೆಯಲ್ಲಿ ಸುಸಜ್ಜಿತ ಕಟ್ಟಡವನ್ನು ಹೊಂದಿರುವ ಸಂಸ್ಥೆ ಇದುವರೆಗೆ ಸಾವಿರಾರು ರೋಗಿಗಳಿಗೆ ನಾನಾ ಹಂತಗಳಲ್ಲಿ ಉಚಿತ ಚಿಕಿತ್ಸೆಸೌಲಭ್ಯ ಕಲ್ಪಿಸಿದೆ.

ಮಾವನ ಸಾವು ಕಾಡಿತ್ತು!
ಹಿಮೋಫೀಲಿಯಾ #Hemophilia ಒಂದು ವಂಶವಾಹಿ ಅನಾರೋಗ್ಯ ಸಮಸ್ಯೆ. ಡಾ.ಸುರೇಶ್ ಹನಗವಾಡಿ ಅವರ ಸೋದರ ಮಾವ ಈ ಸಮಸ್ಯೆಯಿಂದ ಬಳಲುತ್ತಿದ್ದರು. ಸುರೇಶ್ ಅವರು ಬಾಲ್ಯದಲ್ಲೇ ಹಿಮೋಫೀಲಿಯಾಗೆ ತುತ್ತಾಗಿದ್ದರು. ವಿಪರ್ಯಾಸವೆಂದರೆ, ಡಾ.ಸುರೇಶ್ ಅವರ ಸೋದರ ಮಾವ ಚಿಕಿತ್ಸೆ ಸಿಗದೆ ಅವರ ಕಣ್ಣೆದುರೇ ಕಣ್ಣು ಮುಚ್ಚಿದ್ದರು.
ಸುರೇಶ ನೀನು ಡಾಕ್ಟರ್ ಆಗಬೇಕು
ಸಾವಿಗೂ ಮುನ್ನ ಮಾವ ‘ಸುರೇಶ ನೀನು ಡಾಕ್ಟರ್ ಆಗಬೇಕು’ ಎನ್ನುತ್ತಲೇ ಕೊನೆಯುಸಿರೆಳೆದಿದ್ದರು. ಕಣ್ಣೆದುರೇ ಮಾವನ ಸಾವು ಕಂಡ ಡಾ.ಸುರೇಶ್ ಹನಗವಾಡಿ ಅವರು, ವೈದ್ಯನಾಗಲೇಬೇಕು ಎಂದು ಹಟತೊಟ್ಟು ಕಷ್ಟಪಟ್ಟು ಓದಿ, ಹುಬ್ಬಳ್ಳಿಯ ಕೆಎಂಸಿ ವೈದ್ಯ ಕಾಲೇಜಿನಿಂದ ಎಂಬಿಬಿಎಸ್ ಪದವಿ ಪಡೆದರು.

ಪದವಿ ಬಳಿಕ ಮೆಥಾಲಜಿ #Methodology ವಿಷಯದಲ್ಲಿ ಎಂಡಿ ಪೂರ್ಣಗೊಳಿಸಿ, ನಗರದ ಜೆಜೆಎಂ ಮೆಡಿಕಲ್ ಕಾಲೇಜಿನಲ್ಲಿ ಪ್ರಾಧ್ಯಾಪಕ ವೃತ್ತಿ ಆರಂಭಿಸಿದರು. ಆ ಬಳಿಕ ಮಾಡಿದ ಮೊದಲ ಕೆಲಸ ಕರ್ನಾಟಕ ಹಿಮೋಫೀಲಿಯಾ ಸೊಸೈಟಿ ಹುಟ್ಟು ಹಾಕಿದರು. ಅಲ್ಲಿಂದ ಇವರ ಸೇವಾ ಕಾರ್ಯಗಳು ಹಲವು ಮೈಲಿಗಲ್ಲುಗಳನ್ನೇ ಸೃಷ್ಠಿಸಿವೆ.

ಈ ಕುರಿತಂತೆ ಸ್ವತಃ ಮಾತನಾಡಿದ ಡಾ.ಸುರೇಶ್ ಹನಗವಾಡಿ ಅವರು,ಮೂರೂವರೆ ದಶಕಗಳ ನಮ್ಮ ಪರಿಶ್ರಮ ಗುರುತಿಸಿ ಕೇಂದ್ರ ಸರಕಾರ ಪದ್ಮಶ್ರೀ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ. ಹಿಮೋಫೀಲಿಯಾ ಮಾತ್ರವಲ್ಲದೆ, ಎಲ್ಲಾ ರಕ್ತ ಸಂಬಂಧಿ ರೋಗಗಳಿಗೆ ಒಂದೇ ಸೂರಿನಡಿ ಚಿಕಿತ್ಸೆ ಒದಗಿಸುವ ಸಂಶೋಧನಾ ಸಂಸ್ಥೆಯಾಗಿ ಕರ್ನಾಟಕ ಹಿಮೋಫೀಲಿಯಾ ಸೊಸೈಟಿ ಬೆಳೆಸುವ ಉದ್ದೇಶ ಹೊಂದಿದ್ದೇವೆ ಎನ್ನುತ್ತಾರೆ.
ಶಕ್ತಿ ತುಂಬಿದ ಎಸ್’ಪಿ ಬಾಲಸುಬ್ರಹ್ಮಣ್ಯಂ
`ರೋಗಿಗಳ ಚಿಕಿತ್ಸೆಗೆ ಹಣ ಹೊಂದಿಸಲು ಕಷ್ಟ ಎದುರಿಸುವಾಗ ನಮ್ಮ ಪಾಲಿಗೆ ನೆರವಿನ ದೊಡ್ಡ ಶಕ್ತಿಯಾಗಿ ಬಂದವರು ಗಾನ ಗಾರುಡಿಗ ಎಸ್.ಪಿ. ಬಾಲಸುಬ್ರಹ್ಮಣ್ಯಂ. #SPBalasubrahmanya

1999ರಲ್ಲಿ ನಗರದ ಎವಿಕೆ ಕಾಲೇಜು ಮೈದಾನದಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಸಂಗ್ರಹವಾದ ಅಷ್ಟೂ ಹಣವನ್ನು ಎಸ್’ಪಿಬಿ ಅವರು ಸಂಸ್ಥೆಗೆ ನೀಡಿ, ರೋಗಿಗಳ ಚಿಕಿತ್ಸೆಗೆ ನೆರವಾದರು. ಎರಡು ದಶಕಗಳ ಕಾಲ ಬಾಲಸುಬ್ರಹ್ಮಣ್ಯಂ ಅವರು ನಿರಂತರವಾಗಿ ನಿಧಿ ಸಂಗ್ರಹಿಸಿ ಸಂಸ್ಥೆಗೆ ಬೆನ್ನೆಲುಬಾಗಿ ನಿಂತರು ಎನ್ನುತ್ತಾರೆ ವೈದ್ಯರು.

ಶರಣರ ನುಡಿಯಾದ ಕಾಯಕವೇ ಕೈಲಾಸ ಎಂಬ ನುಡಿಯಂತೆ ಸೇವೆ ಮಾಡುವುದರ ಮೂಲಕ ಸಮಾಜ ಸೇವೆಗೈದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ.ಡಾ.ಸುರೇಶ್ ಹನಗವಾಡಿಯವರಿಗೆ ಹೃದಯ ಪೂರ್ವಕ ಶುಭಾಶಯಗಳನ್ನು ಕೋರೋಣ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

Tags: DavanagereDr. Suresh HanagawadiHemophiliaKannada News WebsiteKarnataka Hemophilia SocietyLatest News KannadaPadmashri awardS P Balasubrahmanyamಕಾಯಿಲೆಡಾ. ಸುರೇಶ್ ಹನಗವಾಡಿದಾವಣಗೆರೆಪದ್ಮಶ್ರೀ ಪ್ರಶಸ್ತಿಹಿಮೋಫೀಲಿಯಾ
Share204Tweet127Send
Aniruddha Vasishta S R

Aniruddha Vasishta S R

Editor-in-Chief

Previous Post

ವಿಶ್ವ ಲೆಜೆಂಡ್ಸ್ ಪ್ರೊ T20 ಲೀಗ್; ಶೇನ್ ವಾಟ್ಸನ್ ನೇತೃತ್ವದ ಪುಣೆ ಪ್ಯಾಂಥರ್ಸ್ ಗೆ ಜಯ!

Next Post

ಇಂದಿನ ಪಂಚಾಂಗ | 2026ರ ಜನವರಿ 29, ಗುರುವಾರ | ಅಮೃತ ಕಾಲ ಎಷ್ಟೊತ್ತಿಗೆ?

kalpa News

kalpa News

Next Post
ಇಂದಿನ ಪಂಚಾಂಗ : 2026ರ ಜನವರಿ 7, ಮಂಗಳವಾರ

ಇಂದಿನ ಪಂಚಾಂಗ | 2026ರ ಜನವರಿ 29, ಗುರುವಾರ | ಅಮೃತ ಕಾಲ ಎಷ್ಟೊತ್ತಿಗೆ?

Leave a Reply Cancel reply

Your email address will not be published. Required fields are marked *

No Result
View All Result
Tumkur limited height subway opens at bheemasandra gate
English Articles

Tumkur Traffic Relief : New Limited Height Subway Opens At Old Bheemasandra Gate

by kalpa News
September 18, 2026
0

Kalpa Media House  |  Tumkur   | Union Minister of State for Railways and Jal Shakti V. Somanna inaugurated the newly...

Read moreDetails
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
swr mysuru division swacchata hi seva 2026 campaign

SWR : Mysuru Division Launches Swachhata Hi Seva 2026 Campaign

September 18, 2026
Teen Gang Rape Killed By 3 Minors Body Eaten By Dogs

Teen Gangraped, Killed by Minors in Delhi Body Eaten by Dogs

September 18, 2026
mysuru rss journey exhibition showcasing its history

A Century of RSS Through a Unique Exhibition

September 17, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL