ಕಲ್ಪ ಮೀಡಿಯಾ ಹೌಸ್ | ಬೆಂಗಳೂರು/ನವದೆಹಲಿ |
ಇತ್ತೀಚಿನ ವರ್ಷಗಳಲ್ಲಿ ವಿವಾಹಿತ ಪುರುಷರ ಆತ್ಮಹತ್ಯೆ #Suicide ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇದು ಆತಂಕಕ್ಕೆ ಕಾರಣವಾಗಿದೆ.
ಎನ್’ಸಿಆರ್’ಬಿ #NCRB ವರದಿಯಂತೆ, 2022ರಲ್ಲಿ, ಶೇ.3.28 ರಷ್ಟು ಪುರುಷರು ಅಂದರೆ ಸುಮಾರು 5,576 ಪುರುಷರು ವೈವಾಹಿಕ ಕಲಹದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆಘಾತಕಾರಿ ಅಂಶ ಹೊರಬಿದ್ದಿದೆ.
Also Read>> ಭಾರತ ವಿಶ್ವಗುರು ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ | ಶಾಸಕ ಚನ್ನಬಸಪ್ಪ ಹೇಳಿದ್ದೇನು?
ರಾಷ್ಟ್ರೀಯ ಅಪರಾಧ ಬ್ಯೂರೋ ಕೌಟುಂಬಿಕ ಸಮಸ್ಯೆಯನ್ನು ವ್ಯಾಖ್ಯಾನಿಸಿಲ್ಲವಾದರೂ, ಜಗಳ, ಮಾನಸಿಕ ಕಿರುಕುಳ, ದೈಹಿಕ ಕಿರುಕುಳದಂತಹ ವಿಷಯಗಳನ್ನು ಇದರಲ್ಲಿ ಉಲ್ಲೇಖಿಸಬಹುದು ಎಂದು ವರದಿಯಾಗಿದೆ.
ವಿವಾಹಿತ ಪುರುಷರ ಆತ್ಮಹತ್ಯೆಗೆ #MarriedMenSuicide ಕೇವಲ ವರದಕ್ಷಿಣೆ ಮಾತ್ರ ಕಾರಣವಲ್ಲ ಎನ್ನಲಾಗಿದ್ದು, ಹಲವು ಸಮಸ್ಯೆಗಳೂ ಸಹ ಇದಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.
Also Read>> ಬಿಜೆಪಿ ಸೇರ್ತಾರ ಡಿಸಿಎಂ ಶಿವಕುಮಾರ್? ವಿಜಯೇಂದ್ರ ಮಾರ್ಮಿಕ ನುಡಿಯೇನು?
ಹೆಂಡತಿ, ಅತ್ತೆ-ಮಾವನ ಜೊತೆ ಹೊಂದಿಕೊಳ್ಳದಿರುವುದು, ಗಂಡ ಹೆಂಡತಿಗೆ ಹೆಚ್ಚು ಸಮಯ ನೀಡದಿರುವ ಕಾರಣ ನಡೆಯುವ ಜಗಳ ಸೇರಿದಂತೆ ಆರ್ಥಿಕ ಸಮಸ್ಯೆ ಕೂಡ ಇವರ ಆತ್ಮಹತ್ಯೆಗೆ ಕಾರಣವಾಗುತ್ತದೆ.ವರದಿಗಳಂತೆ 2015 ರಿಂದ 2022 ರವರೆಗೆ 8 ಲಕ್ಷ 9 ಸಾವಿರ ಪುರುಷರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಪ್ರಕಾರ, ಪ್ರತಿ ವರ್ಷ ಒಂದು ಲಕ್ಷಕ್ಕೂ ಹೆಚ್ಚು ಪುರುಷರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.
ಇನ್ನು ಪ್ರತಿ ವರ್ಷ 43,314 ಮಹಿಳೆಯರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಪುರುಷರ ಸಂಖ್ಯೆಗಿಂತ ಮಹಿಳೆಯರ ಸಂಖ್ಯೆ ಅರ್ಧದಷ್ಟಿದೆ. 2022 ರಲ್ಲಿ ಆತ್ಮಹತ್ಯೆ ಮಾಡಿಕೊಂಡ 1 ಲಕ್ಷ 70 ಸಾವಿರ ಪುರುಷರಲ್ಲಿ ಶೇ.58.2 ರಷ್ಟು ಜನರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿ ಹೇಳಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post