ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯದಲ್ಲಿ ಚಲಿಸುತ್ತಿದ್ದ ಬಸ್’ಗೆ ಬೆಂಕಿ ಹೊತ್ತಿಕೊಂಡು ಹಲವು ಮಂದಿ ಸಾವನ್ನಪ್ಪಿರುವ ಘಟನೆ ಕಳೆದ ಡಿ.25ರಂದು ನಡೆದ ಹಿನ್ನೆಲೆಯಲ್ಲಿ ಪ್ರಯಾಣಿಕರ ಹಿತದೃಷ್ಠಿಯಿಂದ ಸಾರಿಗೆ ಇಲಾಖೆ ಮಹತ್ವದ ನಿಯಮ ರೂಪಿಸಿದೆ.
ಖಾಸಗಿ ಬಸ್’ಗಳಿಗೆ #PrivateBus ಕೆಲವೊಂದು ನಿಯಮಗಳನ್ನು ಅನುಸರಿಸುವಂತೆ ಸೂಚನೆ ನೀಡಿರುವ ಸಾರಿಗೆ ಇಲಾಖೆ, ಬಸ್’ಗಳಲ್ಲಿ ಸುರಕ್ಷತಾ ಸೂಚನೆ #SafetyNotice ಹಾಗೂ ಸಂದೇಶಗಳನ್ನು ಪ್ರಕಟಿಸಬೇಕು ಎಂದು ತಿಳಿಸಿದೆ.
#Flight ವಿಮಾನ ಟೇಕ್ ಆಫ್ ಆಗುವ ಮುನ್ನ ಗಗನಸಖಿಯರು ಸುರಕ್ಷತಾ ಸಂದೇಶ ಹಾಗೂ #Emergency ತುರ್ತು ಸಂದರ್ಭಗಳಲ್ಲಿ ಪ್ರಯಾಣಿಕರು ಕೈಗೊಳ್ಳಬೇಕಾದ ನಿಯಮಗಳ ಸಂದೇಶ ನೀಡಲಾಗುತ್ತದೆ. ಅದೇ ರೀತಿಯಲ್ಲಿಯೇ ಖಾಸಗಿ ಬಸ್’ಗಳಲ್ಲೂ ಸಹ ಸಂದೇಶ ನೀಡಬೇಕು ಎಂದು ಸೂಚನೆ ನೀಡಲಾಗಿದೆ.
ಏನು ತಿಳಿಸಲಾಗುತ್ತದೆ ವಿಮಾನದಲ್ಲಿ?
ಪ್ರತಿ ವಿಮಾನ ಟೇಕ್ ಆಫ್ ಆಗುವ ಮುನ್ನ ಅದರಲ್ಲಿರುವ ಗಗನ ಸಖಿಯರು ತುರ್ತು ನಿರ್ಗಮನ ದ್ವಾರಗಳು, ತುರ್ತು ಸಂದರ್ಭದಲ್ಲಿ ಪ್ರಯಾಣಿಕರು ತಮ್ಮ ಜೀವ ರಕ್ಷಣೆ ಮಾಡಿಕೊಳ್ಳುವ ಜೊತೆಯಲ್ಲಿ, ಇತರರ ಜೀವ ಉಳಿಸುವ ಕ್ರಮಗಳ ಕುರಿತಾಗಿ ವಸ್ತುಗಳ ಜೊತೆಯಲ್ಲಿ ಸಂಪೂರ್ಣ ಮಾಹಿತಿ ನೀಡಲಾಗುತ್ತದೆ. ತುರ್ತು ಸಂದರ್ಭಗಳಲ್ಲಿ ತುರ್ತು ನಿರ್ಗಮನದ ಮೂಲಕ ಹೇಗೆ ನಿರ್ಗಮಿಸಬೇಕೆಂದು ತಿಳಿಸುತ್ತಾರೆ.

ವಿಮಾನದ ರೀತಿಯಲ್ಲಿ ಬಸ್ ಪ್ರಯಾಣಿಕರಿಗೂ ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿ ನೀಡಬೇಕು. ಒಂದು ವೇಳೆ ಪ್ರಯಾಣಿಕರಿಗೆ ಈ ಬಗ್ಗೆ ಮಾಹಿತಿ ನೀಡಲಿಲ್ಲ ಅಂದರೆ, ಖಾಸಗಿ ಬಸ್ ಮಾಲೀಕರ ಮೇಲೆ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಲು ಮುಂದಾಗುತ್ತೇವೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಖಾಸಗಿ ಬಸ್’ಗಳಿಗೆ ಈ ನಿಯಮಗಳು ಕಡ್ಡಾಯ!
- ಬಸ್ ಹೊರಡುವ ಮುನ್ನ ಪ್ರಯಾಣಿಕರಿಗೆ ಕಂಡಕ್ಟರ್ ಅಥವಾ ಚಾಲಕರಿಂದ ಸುರಕ್ಷತಾ ಮಾಹಿತಿ ನೀಡುವುದು ಕಡ್ಡಾಯ
- ತುರ್ತು ನಿರ್ಗಮನ ದ್ವಾರಗಳು ಎಲ್ಲೆಲ್ಲಿವೆ, ಎಮೆರ್ಜನ್ಸಿ ವಿಂಡೋಗಳು ಎಲ್ಲಿವೆ ಎಂಬ ಮಾಹಿತಿ ನೀಡಬೇಕು
- ತುರ್ತು ಸಂದರ್ಭದಲ್ಲಿ ಹೇಗೆ ಗಾಜಿನ ಕಿಟಕಿಯನ್ನು ಒಡೆದು ಪಾರಾಗಬೇಕು ಎಂಬ ಮಾಹಿತಿಯನ್ನು ಪ್ರತಿ ಪ್ರಯಾಣಿಕನಿಗೆ ನೀಡಬೇಕು
- ಎಮೆರ್ಜನ್ಸಿ ವಿಂಡೋಗಳಿರುವ ಸೀಟ್‌ಗಳನ್ನು ಯುವಕರು ಅಥವಾ ಮದ್ಯವಯಸ್ಕರಿಗೆ ನೀಡಬೇಕು
- ಪ್ರಯಾಣಿಕರ ಸುರಕ್ಷತೆಕ್ಕಾಗಿ ಈ ಮಾಹಿತಿಗಳನ್ನು ಬಸ್ ಹೊರಡುವ ಮುನ್ನ ನೀಡುವುದು ಕಡ್ಡಾಯ
ಸಾರಿಗೆ ಇಲಾಖೆ ಬಸ್ ಮಾಲೀಕರಿಗೆ ತಿಳಿಸಿದೆ. ಹೀಗೆ ಮಾಹಿತಿ ನೀಡುವುದರಿಂದ ಅವಘಡಗಳು ಸಂಭವಿಸಿದಾಗ, ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂಬುದು ಇಲಾಖೆಯ ಅಭಿಪ್ರಾಯ.
ಇನ್ನು, ಈ ಕುರಿತಂತೆ ಮಾಧ್ಯಮಗಳಿಗೆ ಮಾತನಾಡಿರುವ ರಾಜ್ಯ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ ಶರ್ಮಾ, ಸಾರಿಗೆ ಇಲಾಖೆಯ ಅಧಿಕಾರಿಗಳ ಸೂಚನೆಗಳನ್ನು ಸ್ವಾಗತಿಸುತ್ತೇವೆ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















