ಹೊಸಪೇಟೆ: ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನಾದ್ಯಂತ ಈ ವರ್ಷ ದೀಪಾವಳಿ ಸಂಭ್ರಮ ಜೋರಾಗಿದ್ದು, ಜನರು ಸಂಸತದಿಂದ ಹಬ್ಬ ಆಚರಿಸುತ್ತಿದ್ದಾರೆ.
ಜಿಲ್ಲಾಡಳಿತ ಹೊಸಪೇಟೆಯ ವಿಜಯನಗರ ಕಾಲೇಜು ಆವರಣದಲ್ಲಿ ಪಟಾಕಿಗಳ ಮಾರಾಟ ಮಾಡುವ ವ್ಯವಸ್ಥೆ ಮಾಡಿದ್ದು, ಸುಮಾರು 15 ಪಟಾಕಿ ಅಂಗಡಿಗಳು ಬಿರುಸಿನಿಂದ ಮಾರಾಟ ಮಾಡುತ್ತಿದ್ದಾರೆ.
ನಗರದಲ್ಲಿ ಪ್ರತಿವರ್ಷ ಹೊಸಪೇಟೆ ನಗರದ ಒಳಭಾಗದಲ್ಲಿ ಅಂಗಡಿಗಳ ಮುಂಭಾಗದಲ್ಲಿ ಪಟಾಕಿಗಳ ಮಾರಾಟ ನಡೆಯುತ್ತಿತ್ದು. ಆದರೆ ಈಗ ಈ ವ್ಯವಸ್ಥೆಗೆ ಜಿಲ್ಲಾಡಳಿತ ಕಡಿವಾಣ ಹಾಕಿ ಸುರಕ್ಷತೆಗೆ ಹೆಚ್ಚಿನ ಮಹತ್ವ ನೀಡಿ ಮಾದರಿ ರೂಪದಲ್ಲಿ ಮಾರಾಟಗಾರರಿಗೆ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ನಗರದ ಸುತ್ತಮುತ್ತಲಿನ ಪ್ರದೇಶದ ವಿವಿಧ ಅಂಗಡಿಗಳು ಈ ಮಾರಾಟ ಮಳಿಗೆಯಲ್ಲಿ ಇದ್ದು ಅದರಲ್ಲಿ ನವವೃಂದಾವನ ಎಂಟರ್ಪ್ರೈಸಸ್, ಶ್ರೀಸಿದ್ಧಿವಿನಾಯಕ ಎಂಟರ್ಪ್ರೈಸಸ್, ಶ್ರೀ ಗುರು ಎಂಟರ್ಪ್ರೈಸಸ್ ಹಾಗೂ ಭವಾನಿ ಎಂಟರ್ಪ್ರೈಸಸ್ ಅಂಗಡಿಯ ಮಾಲೀಕರು ಸುರಕ್ಷಿತವಾಗಿ ಅಂಗಡಿಗಳನ್ನು ತೆರೆದಿದ್ದು ಮಾರಾಟ ಮಾಡುತ್ತಿರುವ ದೃಶ್ಯಗಳು ಕಂಡುಬಂದಿದೆ.
ಇನ್ನು ಇದೇ ಆವರಣದಲ್ಲಿ ಮೂರು ದಿನಗಳ ಕಾಲ ಪಟಾಕಿಗಳ ಮಾರಾಟ ನಡೆಯುತ್ತದೆ. ಹೊಸಪೇಟೆ ನಗರದ ಜನತೆಗೆ ಹಬ್ಬದ ವಾತಾವರಣ ಮನೆಮಾಡಿದ್ದು, ಸಂಸಾರ ಸಮೇತ ಮಕ್ಕಳನ್ನು ಕರೆದುಕೊಂಡು ಬಂದು ಪಟಾಕಿಯಿಂದ ತೆಗೆದುಕೊಂಡು ಹೋಗುವಂತಹ ವ್ಯವಸ್ಥೆ ಜನರಲ್ಲಿ ಹರ್ಷವನ್ನು ಮೂಡಿದೆ. ಅಲ್ಲದೇ ಪಟಾಕಿ ಕಡಿಮೆ ದರದಲ್ಲಿ ಮಾರಾಟವಾಗುತ್ತಿದ್ದು ಜನರಿಗೆ ಉತ್ಸಾಹ ಹೆಚ್ಚಿದೆ. ಈ ವ್ಯವಸ್ಥೆಯ ನೋಡಿದರೆ ಈಗಾಗಲೇ ಜಿಲ್ಲಾಡಳಿತ ಪರಿಸರಕ್ಕೆ ಹಾನಿ ಉಂಟು ಮಾಡುವ ಈ ಪಟಾಕಿ ಮಾರಾಟವನ್ನು ಊರಿನಿಂದ ಹೊರಗಡೆ ಮಾರಾಟ ಮಾಡುವಂತಹ ವ್ಯವಸ್ಥೆ ಮಾಡಿದ್ದಾರೆ.
ಹಾಗೆಯೇ, ಮುಂದಿನ ದಿನದಲ್ಲಿ ಪಟಾಕಿ ಮಾರಾಟ ನಿಲ್ಲುವ ಸಾಧ್ಯತೆ ಇರುತ್ತದೆ. ಏಕೆಂದರೆ ಅನೇಕ ರೀತಿಯಿಂದ ಪರಿಸರದ ಮೇಲೆ ಪ್ರಭಾವ ಬೀರುವುದರಿಂದ ಮತ್ತು ಸುರಕ್ಷಿತ ಅಲ್ಲದೆ ಅನೇಕ ರೀತಿಯ ಅಪಘಾತಕ್ಕೆ ಈಡು ಮಾಡುವುದರಿಂದ ಹೆಚ್ಚಾಗಿ ಪರಿಸರಕ್ಕೆ ಹಾಳು ಮಾಡುವಂತಹ ಈ ಪಟಾಕಿಗಳನ್ನು ನಿಲ್ಲಿಸುವ ವ್ಯವಸ್ಥೆ ಆಗಬೇಕು ಎಂದು ಹೊಸಪೇಟೆ ನಗರದ ಪರಿಸರ ಪ್ರೇಮಿಗಳು ಹೇಳುತ್ತಿರುತ್ತಾರೆ. ಈ ದೃಷ್ಟಿಯಲ್ಲಿ ಜನರು ಹಬ್ಬವನ್ನು ದೀಪ ಹಚ್ಚುವುದರ ಮೂಲಕ ಸಿಹಿಯನ್ನು ಹಂಚುವುದರ ಮೂಲಕ ದೀಪಾವಳಿಯನ್ನು ಆಚರಣೆ ಮಾಡಬೇಕು ಮತ್ತು ಸುರಕ್ಷಿತವಲ್ಲದ ಪರಿಸರಕ್ಕೆ ಮಾರಕವಾದ ಪಟಾಕಿ ಮಾರಾಟ ವ್ಯವಸ್ಥೆ ಮುಂದಿನ ದಿನದಲ್ಲಿ ನಿಲ್ಲಬೇಕು ಎನ್ನುವ ಪರಿಸರಪ್ರೇಮಿಗಳ ಬಯಕೆಯನ್ನು ಜಿಲ್ಲಾಡಳಿತ ನೆರವೇರಿಸಿ ಕೊಡಬೇಕು. ಈ ನಿಟ್ಟಿನಲ್ಲಿ ಈಗಾಗಲೇ ಪರಿಸರ ಪ್ರೇಮಿಗಳು ಈ ವ್ಯವಸ್ಥೆಯ ಮೇಲೆ ದೃಷ್ಠಿ ಹಾಕಿದ್ದು ಮುಂದಿನ ದಿನದಲ್ಲಿ ನಿಲ್ಲುವುದು. ಅಲ್ಲದೆ ಹೊಸಪೇಟೆ ನಗರದಲ್ಲಿ ಪರಿಸರ ನಾಶವಾಗದಂತೆ ಸಮಾಜವನ್ನು ಕಲ್ಪಿಸುವ ನಿಟ್ಟಿನಲ್ಲಿ ಜನರು ಎದ್ದು ನಿಲ್ಲಬೇಕು. ಹೋರಾಟ ಮಾಡಿ ಸುರಕ್ಷಿತವಾಗಿ ಹಬ್ಬವನ್ನು ಆಚರಣೆ ಮಾಡಬೇಕು ಎಂಬ ಬಯಕೆ ಒಂದು ಕಡೆ ಎದ್ದುನಿಂತಿದೆ.
ಪಟಾಕಿ ಅಂಗಡಿಗಳ ಮುಂಭಾಗದಲ್ಲಿ ಅಗ್ನಿಶಾಮಕ ದಳದಿಂದ ಸುರಕ್ಷಿತೆಗಾಗಿ ನೀರಿನ ಟ್ಯಾಂಕರ್ ವ್ಯವಸ್ಥೆ ಮಾಡಬಹುದಾಗಿತ್ತು. ಆದರೆ ಈ ದೃಶ್ಯ ಅಲ್ಲಿ ಕಂಡುಬರಲಿಲ್ಲ. ಆದರೆ ಈ ವ್ಯವಸ್ಥೆ ಮಾಡದೇ ಇರುವುದು ಸುರಕ್ಷತೆಗೆ ಹೆಚ್ಚಿನ ಮಹತ್ವ ನೀಡಿರುವುದಿಲ್ಲ ಎಂದು ತಿಳಿಯುತ್ತದೆ.
ಇನ್ನು, ನಗರದಾದ್ಯಂತ ದೀಪಾವಳಿ ಹಬ್ಬವು ಸಂಭ್ರಮ ಮೂಡಿದ್ದು, ಸಂತೋಷದಿಂದ ಜನರು ಆಚರಣೆ ಮಾಡುತ್ತಿರುವಂತಹ ದೃಶ್ಯ ಕಂಡುಬಂದಿದೆ. ಮನೆ ಮನೆ ಮುಂದೆ ವಿವಿಧ ರಂಗೋಲಿ ದೀಪಗಳಿಂದ ಅಲಂಕಾರ ಮಾಡಿ, ದೀಪಗಳನ್ನು ಹಚ್ಚಿ, ಹೊಸಬಟ್ಟೆಗಳನ್ನು ತೊಟ್ಟು, ಒಟ್ಟಾಗಿ ಹಬ್ಬವನ್ನು ಆಚರಣೆ ಮಾಡುತ್ತಾ ಸಂಭ್ರಮಿಸುತ್ತಿದ್ದಾರೆ. ದೀಪಾವಳಿ ಹಬ್ಬದ ಶುಭಾಶಯ ಹಂಚಿಕೊಳ್ಳುವುದರ ಜೊತೆಗೆ ಮನೆಮನೆಗಳಲ್ಲಿ, ಅಂಗಡಿಗಳಲ್ಲಿ ಸಂಜೆ ಲಕ್ಷ್ಮೀ ಪೂಜೆ ಮಾಡಿ ಸಿಹಿ ಹಂಚಿದ ದೃಶ್ಯಗಳು ಬಂದವು.
ವರದಿ: ಮುರಳೀಧರ್ ನಾಡಿಗೇರ್
ಹೊಸಪೇಟೆ
Get In Touch With Us info@kalpa.news Whatsapp: 9481252093
Discussion about this post