ನವದೆಹಲಿ: ಭಯೋತ್ಪಾದಕ ಪೋಷಣಾ ರಾಷ್ಟ್ರ ಪಾಕಿಸ್ಥಾನದ ಕೃತ್ಯಗಳು, ಉಗ್ರರಿಗೆ ಬೆಂಬಲ ನೀಡುವ ನೀಚ ಬುದ್ದಿ ಮಿತಿ ಮೀರಿದ್ದು, ಪಾಕಿಸ್ಥಾನದೊಂದಿಗೆ ಗಡಿ ಹಂಚಿಕೊಂಡಿರುವ ರಾಷ್ಟçಗಳ ಪೈಕಿ ಮೂರು ರಾಷ್ಟ್ರಗಳು ಪಾಕ್’ಗೆ ಉರುಳ ಹಗ್ಗವನ್ನು ಸುತ್ತುತ್ತಿವೆ.
ಪಿಒಕೆ ಹೊರತಾಗಿ ಭಾರತ, ಇರಾನ್, ಅಫ್ಘಾನಿಸ್ಥಾನ ಹಾಗೂ ಚೀನಾದೊಂದಿಗೆ ಪಾಕಿಸ್ಥಾನ ಗಡಿಯನ್ನು ಹಂಚಿಕೊಂಡಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಭಾರತ, ಇರಾನ್ ಹಾಗೂ ಅಫ್ಘಾನಿಸ್ಥಾನ ಮೂರೂ ರಾಷ್ಟ್ರಗಳ ಪಾಪಿ ಪಾಕಿಸ್ಥಾನಕ್ಕೆ ಬುದ್ದಿ ಕಲಿಸಲು ಶಪಥ ಮಾಡಿದ್ದು, ಇದಕ್ಕಾಗಿ ಎಲ್ಲ ತಯಾರಿಗಳನ್ನು ನಡೆಸುತ್ತಿವೆ. ಅಂದರೆ ಮೂರೂ ದಿಕ್ಕಿನಿಂದ ಪಾಕಿಸ್ಥಾನಕ್ಕೆ ಉರುಳು ಸುತ್ತಿಕೊಂಡಿದೆ. ಪಾಕ್ ಬೆಂಬಲಿಸುತ್ತಿರುವ ಭಯೋತ್ಪಾದಕರ ಉಟಪಳ ಮೂರೂ ರಾಷ್ಟ್ರಗಳಿಗೆ ಮಿತಿ ಮೀರಿದ ಹಿನ್ನೆಲೆಯಲ್ಲಿ ಈ ಸಮಸ್ಯೆಗೆ ಇತ್ಯರ್ಥ ಹಾಡಬೇಕು ಎಂದು ತೀರ್ಮಾನಿಸಿವೆ.
ಕಳೆದ ಗುರುವಾರ ಕಣಿವೆ ರಾಜ್ಯ ಪುಲ್ವಾಮಾದಲ್ಲಿ ಪಾಕ್ ಉಗ್ರರು ನಡೆಸಿದ ಭೀಕರ ಆತ್ಮಹತ್ಯಾ ದಾಳಿಗೆ ಸಿಆರ್’ಪಿಎಫ್’ನ 42 ಯೋಧರು ವೀರಸ್ವರ್ಗ ಸೇರಿದ್ದಾರೆ. ಈ ಘಟನೆಯಿಂದ ಕೆರಳಿರುವ ಭಾರತೀಯರು ಶತಾಯಗತಾಯ ಪಾಕಿಸ್ಥಾನಕ್ಕೆ ಬುದ್ದಿ ಕಲಿಸಲೇ ಬೇಕು ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನು, ಮೋದಿ ಸರ್ಕಾರವೂ ಸಹ ಈ ಬಾರಿ ಕೆರಳಿದ್ದು, ಸೇನೆಗೆ ಈಗಾಗಲೇ ಪೂರ್ಣ ಸ್ವಾತಂತ್ರವನ್ನು ನೀಡಿದ್ದು, ವಿಶೇಷ ತಂತ್ರಗಾರಿಕೆ ರೂಪಿಸಲಾಗುತ್ತಿದೆ.
ಪುಲ್ವಾಮಾ ಘಟನೆಯನ್ನು ತನ್ನ ಪಾತ್ರವಿಲ್ಲ ಎಂದು ಪಾಕ್ ಹೇಳುತ್ತಿದ್ದರೂ ಎಲ್’ಒಸಿಯಲ್ಲಿ ಮಾತ್ರ ಪಾಕ್ ಸೈನಿಕರು ಉಗ್ರರ ಸಹಕಾರದಲ್ಲಿ ಅಪ್ರಚೋದಿತ ದಾಳಿ ನಡೆಸುತ್ತಲೇ ಇದ್ದಾರೆ. ಇದಕ್ಕೆ ಪೂರಕವೆಂಬಂತೆ ಇಂದು ನಸುಕಿನಲ್ಲಿ ಪುಲ್ವಾಮಾದಲ್ಲಿ ಉಗ್ರರು ದಾಳಿ ನಡೆಸಿದ್ದು, ಓರ್ವ ಮೇಜರ್ ಸೇರಿದಂತೆ ಭಾರತೀಯ ಸೇನೆಯ ನಾಲ್ವರು ಯೋಧರು ವೀರಸ್ವರ್ಗ ಸೇರಿದ್ದಾರೆ.
ಇನ್ನು ಪಾಕ್ ಉಗ್ರರು ನಡೆಸಿದ ದಾಳಿಯಲ್ಲಿ ಇರಾನ್ ಸೇನೆಯ 25 ಯೋಧರು ಬಲಿಯಾಗಿದ್ದು, ಅಲ್ಲಿನ ಸೇನಾ ಮುಖ್ಯಸ್ಥರು ಈಗಾಗಲೇ ಪಾಕಿಸ್ಥಾನಕ್ಕೆ ಬಹಿರಂಗವಾಗಿ ಎಚ್ಚರಿಕೆ ನೀಡಿದ್ದಾರೆ. ನಮ್ಮ ಸೈನಿಕ ಹನಿ ಹನಿ ರಕ್ತಕ್ಕೂ ಪ್ರತೀಕಾರ ತೆಗೆದುಕೊಳ್ಳುತ್ತೇವೆ. ನಮ್ಮ ಪ್ರತೀಕಾರದ ಕಿಚ್ಚನ್ನು ಎದುರಿಸಲು ಸಿದ್ದವಾಗಿ ಎಂದು ನೇರ ಎಚ್ಚರಿಕೆ ನೀಡಿದ್ದಾರೆ.
ಇನ್ನೊಂದೆಡೆ, ಪಾಕಿಸ್ಥಾನದಿಂದಾಗಿ ಅಫ್ಘಾನಿಸ್ಥಾನವೂ ಸಹ ಇನ್ನಿಲ್ಲದಂತೆ ಉಪಟಳ ಅನುಭವಿಸುತ್ತಿದ್ದು, ಅದರ ತಾಳ್ಮೆಯೂ ಸಹ ಮೀರಿದೆ. ಹೀಗಾಗಿ, ಹೇಗಾದರೂ ಮಾಡಿ ಪಾಕಿಗಳಿಗೆ ಪಾಠ ಕಲಿಸಬೇಕು ಎಂದು ಸರಿಯಾದ ಸಮಯಕ್ಕಾಗಿ ಕಾಯುತ್ತಿದೆ.
ಹೀಗಾಗಿ, ಪಾಕಿಸ್ಥಾನವನ್ನು ಸುತ್ತುವರೆದಿರುವ ಮೂರೂ ರಾಷ್ಟ್ರಗಳು ಈಗ ಪಾಪಿ ಪಾಕಿಸ್ಥಾನಕ್ಕೆ ಉರುಳು ಬಿಗಿ ಮಾಡುತ್ತಿದ್ದು, ಯಾವುದೇ ಕ್ಷಣದಲ್ಲಿ ಏನು ಬೇಕಾದರೂ ಸಂಭವಿಸಬಹುದು.
Discussion about this post