ಕಲ್ಪ ಮೀಡಿಯಾ ಹೌಸ್ | ಟಿಬೆಟ್ |
ಟಿಬೆಟ್’ನಲ್ಲಿ #Tibet ಒಂದರ ಹಿಂದೆ ಒಂದರಂತೆ ಆರು ಸರಣಿ ಭೂಕಂಪನ ಸಂಭವಿಸಿದ್ದು, ಪರಿಣಾಮವಾಗಿ ಸುಮಾರು 53 ಮಂದಿ ಸಾವಿಗೀಡಾಗಿದ್ದಾರೆ.
ಅಂತಾರಾಷ್ಟ್ರೀಯ ಮಾಧ್ಯಮ ಏಜೆನ್ಸಿಗಳ ವರದಿ ಪ್ರಕಾರ 7.1ರಷ್ಟು ತೀವ್ರತೆಯ ಭೂಕಂಪನ #Earthquake ಸಂಭವಿಸಿದ್ದು, 53 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ.
ಚೀನಾದ #China ಮಾಧ್ಯಮಗಳ ಪ್ರಕಾರ, ಭೂಕಂಪ ಸಂಭವಿಸಿದ ಸ್ಥಳಗಳಲ್ಲಿ ಹಲವು ಕಟ್ಟಡಗಳು ಕುಸಿದಿವೆ, ಟಿಬೆಟ್ ಡಿಂಗ್ರಿ ಕೌಂಟಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು ಬಲವಾದ ಕಂಪನಗಳನ್ನು ಅನುಭವಿಸಿವೆ.
Also read: ರಾಜಧಾನಿ ದೆಹಲಿ ಚುನಾವಣೆ ಘೋಷಣೆ | ಮತದಾನ, ಫಲಿತಾಂಶ ಯಾವತ್ತು? ಇಲ್ಲಿದೆ ಸಂಪೂರ್ಣ ಮಾಹಿತಿ
ಈ ಪ್ರದೇಶದಲ್ಲಿ ಭೂಕಂಪಗಳು ಸಾಮಾನ್ಯವಾಗಿದ್ದರೂ, ಇಂದಿನ ಭೂಕಂಪವು ಕಳೆದ ಐದು ವರ್ಷಗಳಲ್ಲಿ 200-ಕಿಮೀ ತ್ರಿಜ್ಯದಲ್ಲಿ ದಾಖಲಾದ ಅತ್ಯಂತ ಶಕ್ತಿಶಾಲಿ ಕಂಪನವಾಗಿದೆ. ನೇಪಾಳವು ಪ್ರಮುಖ ಭೌಗೋಳಿಕ ದೋಷದ ರೇಖೆಯ ಮೇಲೆ ನೆಲೆಸಿದೆ, ಅಲ್ಲಿ ಭಾರತೀಯ ಟೆಕ್ಟೋನಿಕ್ ಪ್ಲೇಟ್ ಯುರೇಷಿಯನ್ ಪ್ಲೇಟ್’ಗೆ ತಳ್ಳಿ ಹಿಮಾಲಯವನ್ನು ರೂಪಿಸುತ್ತದೆ.
ಈ ಭೂಕಂಪನದ ಪರಿಣಾಮ ಭಾರತದ ಮೇಲೂ ಆಗಿದ್ದು, ಭಾರತ, ನೇಪಾಳ, ಭೂತಾನ್ #India, Nepal, Bhutan ಸೇರಿದಂತೆ ಹಲವು ಪ್ರದೇಶಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಸ್ಥಳೀಯ ವರದಿಗಳನ್ನು ಆಧರಿಸಿ ಸುದ್ದಿಸಂಸ್ಥೆ ವರದಿ ಮಾಡಿದ್ದು, ಈ ದುರಂತದಲ್ಲಿ ಒಟ್ಟು 53 ಜನ ಸಾವನ್ನಪ್ಪಿದ್ದಾರೆ. ಟಿಬೇಟಿಯನ್ ಪ್ರದೇಶದಲ್ಲಿ ಭೂಕಂಪ ಸಂಭವಿಸಿದೆ ಎಂದು ಚೀನಾದ ನ್ಯೂಸ್ ಏಜೆನ್ಸಿ ಕ್ಸಿಷ್ಣುವಾ ವರದಿ ಮಾಡಿದೆ.
ಇದರ ಪರಿಣಾಮ ಭಾರತ ಕೆಲ ಪ್ರದೇಶಗಳಲ್ಲೂ ಅನುಭವಕ್ಕೆ ಬಂದಿವೆ. ದೆಹಲಿ ಮತ್ತು ಬಿಹಾರದ ರಾಜಧಾನಿ ಪಾಟ್ನಾ ಸೇರಿದಂತೆ ಉತ್ತರ ಭಾರತದ ವಿವಿಧ ಭಾಗಗಳಲ್ಲಿ ಮತ್ತು ರಾಜ್ಯದ ಉತ್ತರ ಭಾಗದ ಅನೇಕ ಸ್ಥಳಗಳಲ್ಲಿ ಬಲವಾದ ಕಂಪನಗಳು ಸಂಭವಿಸಿವೆ.
ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲೂ ಭೂಕಂಪನದ ಅನುಭವವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post