ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಜರಂಗದಳ ಕಾರ್ಯಕರ್ತ ಹರ್ಷನ ಹತ್ಯೆ ಪರಿಣಾಮ ನಿನ್ನೆ ನಗರದಲ್ಲಿ ನಡೆದ ಹಿಂಸಾಚಾರದ ಹಿನ್ನೆಲೆಯಲ್ಲಿ ನಗರದಾದ್ಯಂತ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
Also Read: ಶಿವಮೊಗ್ಗ: ಹರ್ಷ ಕೊಲೆ ಪ್ರಕರಣ ಎನ್‌ಐಎ ತನಿಖೆಯಾಗಲಿ : ಸಚಿವ ಈಶ್ವರಪ್ಪ ಆಗ್ರಹ
ಪ್ರಮುಖವಾಗಿ ಹಳೇ ಶಿವಮೊಗ್ಗ ಸೇರಿದಂತೆ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆ ಮಾಡಲಾಗಿದೆ.
ಎಷ್ಟು ಪೊಲೀಸರ ನಿಯೋಜನೆ?
ಇನ್ನು ನಗರದಾದ್ಯಂತ ಭದ್ರತೆಗಾಗಿ ಇಬ್ಬರು ಎಸ್’ಪಿ, ಒಬ್ಬರು ಹೆಚ್ಚುವರಿ ರಕ್ಷಣಾಧಿಕಾರಿ, 12 ಡಿವೈಎಸ್’ಪಿ, 29 ಇನ್ಸ್’ಪೆಕ್ಟರ್, 54 ಸಬ್ ಇನ್ಸ್’ಪೆಕ್ಟರ್, 48 ಎಎಸ್‘ಐ, 819 ಕಾನ್ಸ್’ಟೇಬಲ್, 20 ಕೆಎಸ್’ಆರ್’ಪಿ, 10 ಡಿಎಎಆರ್ ಹಾಗೂ ರ್ಯಾಪಿಡ್ ಆಕ್ಷನ್ ಫೋರ್ಸ್ ತುಕಡಿ ಸೇರಿದಂತೆ ಸುಮಾರು 2000 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ನಗರದಲ್ಲಿ ರೂಟ್ ಮಾರ್ಚ್
ಇನ್ನು, ನಿನ್ನೆ ಗಲಭೆ ನಡೆದ ಹಿನ್ನೆಲೆಯಲ್ಲಿ ಆರ್’ಎಎಫ್ ತುಕಡಿಗಳ ರೂಟ್ ಮಾರ್ಚ್ ನಡೆಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post