ಕಲ್ಪ ಮೀಡಿಯಾ ಹೌಸ್ | ಮೈಸೂರು |
ಮೈಸೂರು ಒಡೆಯರ್ ಕುಟುಂಬದ ವಿರುದ್ದ ಸಿಎಂ ಸಿದ್ದರಾಮಯ್ಯ ಪುತ್ರ ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೇ, ಸಚಿವ ಮಹಾದೇವಪ್ಪ ಸಹ ಇಂತಹುದ್ದೇ ಹೇಳಿಕೆ ನೀಡಿದ್ದಾರೆ.
ಟಿಪ್ಪು ಹೊಗಳುವ ಭರದಲ್ಲಿ ಮೈಸೂರು ಅರಸರ ಸಾಧನೆಯನ್ನು ಕಡೆಗಣಿಸುವ ಕೆಲಸ ಮಾಡಿದ್ದಾರೆ. ಕೆಆರ್’ಎಸ್ ಡ್ಯಾಂಗೆ ಅಡಿಗಲ್ಲು ಹಾಕಿದ್ದೇ ಟಿಪ್ಪು ಎಂದು ಮಂಡ್ಯದಲ್ಲಿ ಮಾತನಾಡಿದ್ದಾರೆ.
ಕೆಆರ್’ಎಸ್ ಡ್ಯಾಂಗೆ ಮೊದಲು ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್. ಈ ಬಗ್ಗೆ ಕೆಆರ್’ಎಸ್ ಗೇಟ್ ಹೆಬ್ಬಾಗಿಲಿನಲ್ಲಿ ಸಾಕ್ಷಿ ಇದೆ. ಆದರೆ ಅದನ್ನು ಹೇಳೋಕೆ ಯಾರಿಗೂ ಧೈರ್ಯವಿಲ್ಲ ಎಂದು ಹೇಳಿದ್ದಾರೆ.
ಚರಿತ್ರೆ ಗೊತ್ತಿಲ್ಲದವರು ಚರಿತ್ರೆ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಟಿಪ್ಪು ಮಸೀದಿ ಇದೆ, ಪಕ್ಕದಲ್ಲಿ ದೇವಸ್ಥಾನ ಇದೆ. ಈಕಡೆ ಅಲ್ಲವೋ ಅಕ್ಬರ್ ಅಂತಾರೆ, ಆ ಕಡೆ ಗಂಟೆ ಟಣ್, ಟಣ್ ಅನ್ನುತ್ತೆ. ಎರಡನ್ನು ಕೇಳ್ತಿದ್ದರು ಅವರು. ಸಮಚಿತ್ತರಾಗಿದ್ದವರು ಟಿಪ್ಪು ಎಂದು ಸಚಿವರು ಬಣ್ಣಿಸಿದರು.
ದೇವದಾಸಿ ಪದ್ಧತಿಯನ್ನು ಟಿಪ್ಪು ರದ್ದು ಮಾಡಿದ್ದರು. ಶೋಷಿತ ಮಹಿಳೆಯರನ್ನು ದೇವದಾಸಿ ಪದ್ಧತಿಗೆ ದೂಡಲಾಗುತ್ತಿತ್ತು. ಆ ಕಾಲದಲ್ಲೇ ದೇವದಾಸಿ ಪದ್ಧತಿ ರದ್ದು ಮಾಡಿದ್ದು ಟಿಪ್ಪು. ಟಿಪ್ಪು ಅವರ ಕಾಲದಲ್ಲಿ ಒಂದೇ ಒಂದು ಇಂಚು ಭೂಮಿಯನ್ನು ಉಳ್ಳವರಿಗೆ ಕೊಟ್ಟಿರಲಿಲ್ಲ ಎಂದು ಹೇಳಿದರು.
ಭಾರತ ದೇಶಕ್ಕೆ ರೇಷ್ಮೆ ತಂದಿದ್ದೆ ಟಿಪ್ಪು ಸುಲ್ತಾನ್. ರಣರಂಗದಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ದೊಡ್ಡ ಸ್ವತಂತ್ರ ಸೇನಾನಿ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post