ಕಲ್ಪ ಮೀಡಿಯಾ ಹೌಸ್
ತೀರ್ಥಹಳ್ಳಿ: ಕೊರೋನಾ ಸೋಂಕಿತರಿಗೆ ದೈಹಿಕ ಚಿಕಿತ್ಸೆ ಎಷ್ಟು ಮುಖ್ಯವೋ, ಮಾನಸಿಕ ಆರೋಗ್ಯವೂ ಸಹ ಅಷ್ಟೇ ಮುಖ್ಯ. ಹೀಗಾಗಿ, ನಗರದಲ್ಲಿರುವ ಸೋಂಕಿತರಿಗಾಗಿ ಚಿತ್ರಗೀತೆಗಳನ್ನು ಹಾಡುವ ಮೂಲಕ ಯುವ ನಟರೊಬ್ಬರು ಆತ್ಮಸ್ಥೈರ್ಯ ತುಂಬುವ ಮಾದರಿ ಕಾರ್ಯವನ್ನು ಮಾಡಿದ್ದಾರೆ.ವೇಷ ಚಿತ್ರದ ನಾಯಕ ನಟ ಹಾಗೂ ನಿರ್ಮಾಪಕರೂ ಆಗಿರುವ ರಾಘವೇಂದ್ರ ಅವರು ತೀರ್ಥಹಳ್ಳಿಯಲ್ಲಿ ಸೋಂಕಿತರು ಇರುವ ಆಸ್ಪತ್ರೆಯ ಮುಂಭಾಗದಲ್ಲಿ ಚಿತ್ರಗೀತೆಗಳು ಹಾಗೂ ಆತ್ಮಸ್ಥೈರ್ಯ ತುಂಬುವಂತಹ ಗೀತೆಗಳನ್ನು ಹಾಡುವ ಮೂಲಕ ಸೋಂಕಿತರಿಗೆ ಧೈರ್ಯ ಹೇಳಿ, ಮನರಂಜನೆಯನ್ನೂ ಸಹ ನೀಡಿದರು.
ಶಾಸಕ ಆರಗ ಜ್ಞಾನೇಂದ್ರ, ತಹಶೀಲ್ದಾರ್ ಶ್ರೀಪಾದ ಅವರುಗಳು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಇವರಿಗೆ ವೇಷ ಚಿತ್ರದ ನಿರ್ದೇಶಕ ಕೃಷ್ಣ ಹಾಗೂ ಚಿತ್ರದ ಕ್ರಿಯೇಟಿವ್ ಹೆಡ್ ಕಿರಿಕ್ ಹುಡ್ಗ ಕೀರ್ತನ್ ಶೆಟ್ಟಿ ಸಾಥ್ ಕೊಟ್ಟರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post