ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ಅನ್ನದಾನಕ್ಕೆ ತಮ್ಮ ಕೊನೆಯಿಸಿರು ಇರುವವರೆಗೂ ಪ್ರಾಧಾನ್ಯತೆ ನೀಡಿದ್ದ ಸ್ನೇಹಜೀವಿ ಬಳಗದ ಅಧ್ಯಕ್ಷರಾಗಿದ್ದ ದಿ. ಸತೀಶ್ ಅವರ ಸವಿನೆನಪಿನಲ್ಲಿ ಇಂದು ದಯಾಸಾಗರ ಟ್ರಸ್ಟ್ ವತಿಯಿಂದ ನೂರಾರು ನಿರಾಶ್ರಿತರಿಗೆ ಅನ್ನದಾನ ಮಾಡಲಾಯಿತು.
ಲಾಕ್ ಡೌನ್’ನಿಂದಾಗಿ ಜನರು ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ದಿ. ರೋಸಯ್ಯನವರ ಆಶ್ರಯದಲ್ಲಿ ನಡೆಯುತ್ತಿರುವ ದಯಾಸಾಗರ ಟ್ರಸ್ಟ್ ವತಿಯಿಂದ ಕಡುಬಡತನದಲ್ಲಿರುವ ಹಾಗೂ ನಿರಾಶ್ರಿತರಿಗೆ ಪ್ರತಿದಿನ ಅನ್ನದಾನ ಮಾಡಲಾಗುತ್ತಿದೆ. ತಮ್ಮ ಜೀವಮಾನವಿಡೀ ಅನ್ನದಾನಕ್ಕೆ ಪ್ರಮುಖ್ಯತೆ ನೀಡಿ, ಅದನ್ನು ವ್ರತದಂತೆ ಪಾಲಿಸಿಕೊಂಡು ಬಂದಿದ್ದ ದಿ. ಸತೀಶ್ ಅವರ ಸವಿನೆನಪಿನಲ್ಲಿ ಇಂದು ಅನ್ನದಾನ ಮಾಡಲಾಯಿತು.
ಸತೀಶ್ ಸವಿನೆನಪಿನಲ್ಲಿ ಅವರ ಭಾವಚಿತ್ರಕ್ಕೆ ಪುತ್ರ ಸುಹಾಸ್ ಅವರು ಪೂಜೆ ಸಲ್ಲಿಸಿ ಅನ್ನದಾನ ಮಾಡಿದರು.
ಇಂತಹ ಪುಣ್ಯದ ಕಾರ್ಯವನ್ನು ಮಾಡಿರುವ ದಯಾಸಾಗರ ಟ್ರಸ್ಟ್ ಮುಖಂಡ ಮೊಸಸ್ ಹಾಗೂ ಸ್ನೇಹಿತರಿಗೆ, ಇದಕ್ಕೆ ಸಹಕರಿಸಿದ ಎಲ್ಲರಿಗೂ ಸ್ನೇಹಜೀವಿ ಬಳಗದ ಎಲ್ಲ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post