ಕಲ್ಪ ಮೀಡಿಯಾ ಹೌಸ್ | ತಿರುಮಲ |
ಶ್ರೀನಿವಾಸ ದೇವರು ‘ದರ್ಶನ ಮಹಿತ. ಹಾಗಾಗಿಯೇ ವಿಶ್ವದ ಎಲ್ಲ ಭಾಗದ ಜನರು ಈತನ ದರ್ಶನಕ್ಕೆ ಮುಗಿ ಬೇಳುತ್ತಾರೆ ಎಂದು ಶ್ರೀ ಅಚ್ಯುಶ್ರಪ್ರೇಕ್ಷ ಸಂಸ್ಥಾನ ಉಡುಪಿ ಭಂಡಾರಕೇರಿ ಮಠದ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಹೇಳಿದರು.
ತಿರುಮಲ ತಿರುಪತಿ ದೇವಸ್ಥಾನಗಳ ಸಮಿತಿ ವಿಶೇಷ ಗೌರವಾದರಗಳೊಂದಿಗೆ ತಿಮ್ಮಪ್ಪನ ದರ್ಶನ ಪಡೆದ ನಂತರ ಭಕ್ತರಿಗೆ ಆಶೀರ್ವಚನ ನೀಡಿ ಮಾತನಾಡಿದ ಅವರು, ಭಗವಂತ ಇಲ್ಲಿ ದರ್ಶನದಿಂದ ಪೂಜಿತನಾಗಿದ್ದಾನೆ. ಹಾಗಾಗಿ ಆತನನ್ನು ಸುದರ್ಶನ ಎನ್ನುತ್ತಾರೆ ಎಂದರು.
ಕೊರೋನಾ ರೂಪಾಂತರಿಯ ಹಾವಳಿ ನಡುವೆಯೂ ಟಿಯವರು ವಿಶೇಷ ಗಮನ ಮತ್ತು ಕಾಳಜಿಯಿಂದ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿರುವುದು ಶ್ಲಾಘನೀಯ ಎಂದರು.
ಲೋಕವನ್ನು ಬಹುವಾಗಿ ಕಾಡಿದ ಕರೊನಾ ಮತ್ತು ಈಗ ಅದರ ರೂಪಾಂತರಿ ವೈರಸ್ಗಳು ನಾಶವಾಗಲಿ, ಲೋಕದ ಜನರು ಆರೋಗ್ಯ ಮತ್ತು ನೆಮ್ಮದಿಯಿಂದ ಜೀವಿಸುವಂತಾಗಲಿ, ಮುಕ್ತವಾಗಿ ತಿರುಪತಿ- ತಿರುಮಲದ ದರ್ಶನಕ್ಕೆ ಎಲ್ಲ ಭಕ್ತರು ಬರುವಂತಾಗಲಿ ಎಂದು ಶ್ರೀ ಶ್ರಿನಿವಾಸನಲ್ಲಿ ಪ್ರಾರ್ಥನೆ ಮಾಡಿದ್ದೇವೆ ಎಂದು ಶ್ರೀ ವಿದ್ಯೇಶತೀರ್ಥರು ಹೇಳಿದರು.
ತಿಮ್ಮಪ್ಪನ ದರ್ಶನಕ್ಕೆ ಭಕ್ತರಿಗೆ ಈಗ ಮಿತಿ ಇದೆ. ಇದು ಮೊದಲಿನಂತೆ ಅಪರಿಮಿತ ಆಗಬೇಕು. ಭಕ್ತರ ಭಕುತಿಗೆ ಗೌರವಿಸುವ ಕಾಲ ಮತ್ತೆ ಬರಬೇಕು. ಲೋಕದ ಎಲ್ಲೆಡೆ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಿಸಬೇಕು. ಸಾತ್ವಿಕರ ಸಂಗಮದಲ್ಲಿ ಹೋಮ, ಹವನ, ಪೂಜೆ ಇತ್ಯಾದಿಗಳು ವಿಜೃಂಭಿಸಬೇಕು. ಇದರಿಂದ ಲೋಕಕ್ಕೆ ಶಾಂತಿ ಲಭಿಸಬೇಕು. ಜ್ಞಾನ, ಭಕ್ತಿ, ವೈರಾಗ್ಯಭಾವ ಎಲ್ಲರಲ್ಲಿ ಮೂಡಬೇಕು ಎಂದು ಸ್ವಾಮೀಜಿ ಆಶಿಸಿದರು.
ಟಿಟಿಡಿ ಕಾರ್ಯ ನಿರ್ವಾಹಕ ಅಧಿಕಾರಿ ಎ.ವಿ. ಧರ್ಮಾರೆಡ್ಡಿ, ಟಿಟಿಡಿ ಬೋರ್ಡ್ ಸದಸ್ಯ ಡಿ.ಪಿ. ಅನಂತ, ಸ್ವಾಮೀಜಿಯವರ ಆಪ್ತ ಸಹಾಯಕರಾದ ಜಯರಾಂ ಇತರರು ಹಾಜರಿದ್ದರು.
ಇದಕ್ಕೂ ಮೊದಲು ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಅವರು ತಿರುಪತಿಯಲ್ಲಿ ಮಂಗಳವಾದ್ಯ, ಛತ್ರಿ ಚಾಮರ ಸಹಿತ ವಿಶೇಷ ಗೌರವದೊಂದಿಗೆ ಶ್ರೀ ಪದ್ಮಾವತಿ ಅಮ್ಮನವರ ದರ್ಶನ ಪಡೆದು ಧನ್ಯತೆ ಮೆರೆದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post