Read - < 1 minute
ಬೆಂಗಳೂರು: ಇಂದು ವಿಧಿವಶರಾದ ಹಿರಿಯ ಸಾಹಿತಿ ಗಿರೀಶ್ ಕಾನಾರ್ಡ್ ಅವರ ಅಂತ್ಯ ಸಂಸ್ಕಾರ ಇಂದು ಮಧ್ಯಾಹ್ನ ನಡೆಯಲಿದ್ದು, ಯಾವುದೇ ರೀತಿಯ ಧಾರ್ಮಿಕ ವಿಧಿವಿಧಾನ ನಡೆಸದೇ ಇರಲು ನಿರ್ಧರಿಸಲಾಗಿದೆ.
ಕಾರ್ನಾಡ್ ಅವರ ಕುಟುಂಬದ ಆಪ್ತರಾದ ಚೈತನ್ಯ ಅವರು ಈ ಕುರಿತಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಕಾರ್ನಾಡ್ ಅವರ ಕೊನೆಯ ಆಸೆಯಂತೆ ಯಾವುದೇ ರೀತಿಯ ಧಾರ್ಮಿಕ ವಿಧಿವಿಧಾನಗಳನ್ನು ನಡೆಸದೇ, ಕೇವಲ ವಿದ್ಯುತ್ ಚಿತಾಗಾರದಲ್ಲಿ ಪಾರ್ಥಿವ ಶರೀರದ ಸಂಸ್ಕಾರ ನೆರವೇರಿಸಲಾಗುವುದು ಎಂದಿದ್ದಾರೆ.
Discussion about this post