ಕಲ್ಪ ಮೀಡಿಯಾ ಹೌಸ್
ಟೋಕಿಯೊ: ಇದು ನನಗೆ ಹಾಗೂ ನನ್ನ ದೇಶಕ್ಕೆ ಐತಿಹಾಸಿಕ ಹೆಮ್ಮೆಯ ಕ್ಷಣ… ಇದು ಟೋಕಿಯೊ ಒಲಂಪಿಕ್ಸ್‌ನಲ್ಲಿ ಭಾರತಕ್ಕೆ ಐತಿಹಾಸಿಕ ಚಿನ್ನದ ಪದಕ ಗೆದ್ದ ಯೋಧ ನೀರಜ್ ಚೋಪ್ರಾ ಅವರ ಮೊದಲ ಭಾವನಾತ್ಮಕ ಮಾತುಗಳು.
ಪದಕ ಗೆದ್ದ ನಂತರ ಮಾತನಾಡಿರುವ ಚೋಪ್ರಾ ಚಿನ್ನದ ಪದಕ ಗೆದ್ದಿದ್ದೇನೆ ಎಂಬುದನ್ನು ಸ್ವತಃ ನನಗೆ ನಂಬಲಾಗುತ್ತಿಲ್ಲ. ಚಿನ್ನ ಗೆಲ್ಲುತ್ತೇನೆ ಎಂದು ನಾನು ನಿರೀಕ್ಷೆಯೂ ಸಹ ಮಾಡಿರಲಿಲ್ಲ. ಇದು ಇಂದು ನನಗೆ ಹಾಗೂ ನನ್ನ ದೇಶಕ್ಕೆ ಹೆಮ್ಮೆಯ ಕ್ಷಣಗಳು.
ಭಾರತೀಯ ದೇಶವಾಸಿಗಳ ಅಭಿನಂದನೆ ಹಾಗೂ ಸಂಭ್ರಮ ನನ್ನನ್ನು ಅತ್ಯಂತ ಭಾವುಕನನ್ನಾಗಿಸಿದೆ. ಎಂದಿದ್ದಾರೆ. ಪದಕ ಗೆದ್ದ ಸಂಭ್ರಮದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ತಮ್ಮ ಮೈಮೇಲೆ ಹೊದ್ದು, ಕ್ರೀಡಾಂಗಣದ ತುಂಬಾ ಓಡಿ ಸಂಭ್ರಮಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post