No Result
View All Result
b-y-raghavendra-freedom-fighters-independence-day
English Articles

Remembering Freedom Fighters Is the Duty of Every Indian: MP B.Y. Raghavendra

by kalpa News
August 17, 2026
0

Kalpa Media House  | SHIKARIPURA  | Remembering the freedom fighters who fought against British rule, made immense sacrifices and secured...

Read moreDetails
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
  • Advertise With Us
  • Grievances
  • About Us
  • Contact Us
Sunday, August 23, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ರಾಷ್ಟ್ರೀಯ

ಗಡಿಯಾಚೆಗಿನ ವ್ಯಾಪಾರದ ಸವಾಲು | ಮಹಿಳಾ ಉದ್ಯಮಿಗಳಿಗೆ Pay10 ನೆರವು

kalpa News by kalpa News
July 12, 2026
in ರಾಷ್ಟ್ರೀಯ
0
Trade Challenges Pay10 Supports Women Entrepreneur
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು/ಮುಂಬೈ  |

ದೇಶದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ವಲಯದಲ್ಲಿ ಮಹಿಳಾ ನೇತೃತ್ವದ ಉದ್ಯಮಗಳು ಅತ್ಯಂತ ವೇಗವಾಗಿ ಮುನ್ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ, ಪ್ರಾದೇಶಿಕ ಹಾಗೂ ಜಾಗತಿಕ ಮಟ್ಟದ ವ್ಯಾಪಾರ ವಹಿವಾಟುಗಳಲ್ಲಿ ಸಣ್ಣ ನಗರಗಳ ಮಹಿಳಾ ಉದ್ಯಮಿಗಳು ಸಕ್ರಿಯವಾಗಿ ಮತ್ತು ಆತ್ಮವಿಶ್ವಾಸದಿಂದ ಪಾಲ್ಗೊಳ್ಳಲು ನೆರವಾಗುವ ನಿಟ್ಟಿನಲ್ಲಿ ಪ್ರಮುಖ ಫಿನ್‌ ಟೆಕ್ ಸಂಸ್ಥೆ ಪೇ10 (Pay10) ವಿಶೇಷ ನೆರವು ಒದಗಿಸುತ್ತದೆ.

ಮುಖ್ಯವಾಗಿ ದೇಶದ 2ನೇ, 3ನೇ ಮತ್ತು 4ನೇ ಹಂತದ ನಗರ ಹಾಗೂ ಪಟ್ಟಣಗಳ ಮಹಿಳಾ ಉದ್ಯಮಿಗಳಿಗೆ ಜಾಗತಿಕ ಮಾರುಕಟ್ಟೆ ತಲುಪಲು ಸಂಸ್ಥೆ ಉತ್ತೇಜನ ನೀಡುತ್ತಿದೆ. ದೇಶಾದ್ಯಂತ ಡಿಜಿಟಲ್ ತಂತ್ರಜ್ಞಾನದ ಬಳಕೆ ವ್ಯಾಪಕವಾಗಿ ಹೆಚ್ಚುತ್ತಿರುವುದರಿಂದ, ಮಹಿಳಾ ಉದ್ಯಮಿಗಳು ಜವಳಿ, ಕರಕುಶಲ ಕಲೆ, ಸೌಂದರ್ಯವರ್ಧಕ, ಆಹಾರ ಸಂಸ್ಕರಣೆ, ಲೈಫ್‌ಸ್ಟೈಲ್ ಉತ್ಪನ್ನಗಳು ಹಾಗೂ ಡಿಜಿಟಲ್ ಸೇವೆಗಳು ಸೇರಿದಂತೆ ವಿವಿಧ ರಂಗಗಳಲ್ಲಿ ಯಶಸ್ವಿಯಾಗಿ ತಮ್ಮ ವ್ಯವಹಾರವನ್ನು ಬೆಳೆಸುತ್ತಿದ್ದಾರೆ.

Also Read>> ವಿಭಿನ್ನ ಚಿಂತನೆ ಸಾಧನೆಯ ಉತ್ತುಂಗದ ದಾರಿ: ನಿವೇದನ್ ನೆಂಪೆ

ಮಹಿಳಾ ಉದ್ಯಮಿಗಳು (Women Entrepreneur) ಸ್ಥಳೀಯವಾಗಿ ಯಶಸ್ವಿಯಾಗುತ್ತಿದ್ದರೂ, ತಮ್ಮ ವ್ಯವಹಾರವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಮುಖ್ಯವಾಗಿ ಗಡಿಯಾಚೆ ಸುರಕ್ಷಿತ ಮತ್ತು ಸುಲಭವಾದ ಅಂತಾರಾಷ್ಟ್ರೀಯ ಪಾವತಿ ಮೂಲಸೌಕರ್ಯಗಳ ಕೊರತೆ, ವಿದೇಶಿ ವ್ಯಾಪಾರಕ್ಕೆ ಸಂಬಂಧಿಸಿದ ಸಂಕೀರ್ಣ ಕಾನೂನು ಮತ್ತು ನಿಯಮಗಳ ಅರಿವಿನ ಕೊರತೆ, ವಿದೇಶದಿಂದ ಬರುವ ಹಣದ ಇತ್ಯರ್ಥ ಪ್ರಕ್ರಿಯೆ ತಡವಾಗುತ್ತಿರುವುದು ಇತ್ಯಾದಿ ಸವಾಲುಗಳಿವೆ.ಈ ಎಲ್ಲಾ ಸವಾಲುಗಳು ಮಹಿಳಾ ಉದ್ಯಮಗಳು ಜಾಗತಿಕವಾಗಿ ಬೆಳೆಯಲು ಪ್ರಮುಖ ಅಡ್ಡಿಯಾಗಿವೆ. ಈ ನಿಟ್ಟಿನಲ್ಲಿ ಸುಲಭ ಹಾಗೂ ವೇಗದ ತಂತ್ರಜ್ಞಾನ ಆಧಾರಿತ ಪಾವತಿ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಮಹಿಳಾ ಸಬಲೀಕರಣಕ್ಕೆ ಧ್ವನಿಯಾಗಲು ಪೇ10 ಮುಂದಾಗಿದೆ.

Pay10 ಗಡಿಯಾಚೆಗಿನ ಸುರಕ್ಷಿತ ಪಾವತಿ ತಂತ್ರಜ್ಞಾನ

ಭಾರತದ ರಫ್ತು ವಲಯಕ್ಕೆ ಮಹಿಳಾ ನೇತೃತ್ವದ ಉದ್ಯಮಗಳು ನೀಡುತ್ತಿರುವ ಕೊಡುಗೆ ದಿನದಿಂದ ದಿನಕ್ಕೆ ಗಣನೀಯವಾಗಿ ಹೆಚ್ಚುತ್ತಿದೆ. ಜಾಗತಿಕ ಮಾರುಕಟ್ಟೆಯಲ್ಲಿ ತಮ್ಮ ಹೆಜ್ಜೆಯೂರಲು ಭಾರತೀಯ ಮಹಿಳಾ ಉದ್ಯಮಿಗಳು ಡಿಜಿಟಲ್ ಪಾವತಿ ಮೂಲಸೌಕರ್ಯಗಳನ್ನು ವ್ಯಾಪಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಮುಖ್ಯವಾಗಿ ಪೇ10 ಸಂಸ್ಥೆಯ ಗಡಿಯಾಚೆಗಿನ ಸುರಕ್ಷಿತ ಪಾವತಿ ತಂತ್ರಜ್ಞಾನದ ನೆರವು ಇವರ ಅಂತರರಾಷ್ಟ್ರೀಯ ವ್ಯವಹಾರದ ವಿಸ್ತರಣೆಗೆ ದೊಡ್ಡ ಶಕ್ತಿಯಾಗಿದೆ. ಡಿಜಿಟಲ್ ವಾಣಿಜ್ಯ ವೇದಿಕೆಗಳ ಬೆಳವಣಿಗೆ ಹಾಗೂ ಭಾರತೀಯ ವಿಶಿಷ್ಟ ಉತ್ಪನ್ನಗಳಿಗೆ ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ, ಮಹಿಳಾ ನೇತೃತ್ವದ ಎಂಎಸ್ಎಂಇಗಳು ವಿದೇಶಿ ಮಾರುಕಟ್ಟೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿವೆ.

Also Read>> ಭಾರತೀಯ ರೈಲ್ವೆ ವಿಭಾಗಾಂತರ ನೃತ್ಯ ಸ್ಪರ್ಧೆ ಯಶಸ್ವಿ

ಇತ್ತೀಚಿನ ರಫ್ತು ಮತ್ತು ಲಾಜಿಸ್ಟಿಕ್ಸ್ ಅಂಕಿ-ಅಂಶಗಳ ಪ್ರಕಾರ, ಭಾರತದ ಒಟ್ಟು ರಫ್ತು ಪ್ರಮಾಣದಲ್ಲಿ ಮಹಿಳಾ ಉದ್ಯಮಿಗಳ ಪಾಲು ಸದ್ಯ ಸುಮಾರು ಶೇ. 8ರಷ್ಟಿದೆ. ಇವರಿಗೆ ಔಪಚಾರಿಕ ಸಾಲ ಸೌಲಭ್ಯ ಮತ್ತು ಡಿಜಿಟಲ್ ವ್ಯಾಪಾರ ಮೂಲಸೌಕರ್ಯಗಳು ಸುಲಭವಾಗಿ ಸಿಗುತ್ತಿರುವುದರಿಂದ, ಮುಂದಿನ ದಿನಗಳಲ್ಲಿ ಈ ಪಾಲು ಮತ್ತಷ್ಟು ಹೆಚ್ಚುವ ನಿರೀಕ್ಷೆಯಿದೆ. ಪ್ರಸ್ತುತ ಮಹಿಳಾ ನೇತೃತ್ವದ ಉದ್ಯಮಗಳ ರಫ್ತು ವಹಿವಾಟು ಜಗತ್ತಿನ 40ಕ್ಕೂ ಹೆಚ್ಚು ದೇಶಗಳಿಗೆ ವಿಸ್ತರಿಸಿದೆ. ಅಮೆರಿಕಕ್ಕೆ ರಫ್ತಾಗುವ ಸಿದ್ಧ ಉಡುಪುಗಳ ನಿರ್ದಿಷ್ಟ ವಿಭಾಗಗಳಲ್ಲಿ, ಭಾರತದ ಮಹಿಳಾ ನೇತೃತ್ವದ ಉದ್ಯಮಗಳು ಬರೋಬ್ಬರಿ ಶೇ. 33 ರಷ್ಟು ಮಾರುಕಟ್ಟೆ ಪಾಲನ್ನು ಹೊಂದುವ ಮೂಲಕ ಅಚ್ಚರಿಯ ಸಾಧನೆ ಮಾಡಿವೆ ಎಂದು ಅಂದಾಜಿಸಲಾಗಿದೆ.

ಮಹಿಳಾ ಉದ್ಯಮಿಗಳು ಅತಿ ಹೆಚ್ಚು ಅಂತಾರಾಷ್ಟ್ರೀಯ ಪಾವತಿಗಳನ್ನು ಸ್ವೀಕರಿಸುವ ಪ್ರಮುಖ ಜಾಗತಿಕ ಮಾರುಕಟ್ಟೆಗಳಲ್ಲಿ ಅಮೆರಿಕಾ ಶೇ. 33 ರಷ್ಟು ಪಾಲಿನೊಂದಿಗೆ ಮೊದಲ ಸ್ಥಾನದಲ್ಲಿದೆ. ಇದರ ಬೆನ್ನಲ್ಲೇ ಯುಎಇ ಸರಿಸುಮಾರು ಶೇ. 15 ರಿಂದ ಶೇ.20 ರಷ್ಟು ಮತ್ತು ಮಲೇಷ್ಯಾ ಶೇ. 15 ಕ್ಕಿಂತ ಹೆಚ್ಚಿನ ಪಾಲನ್ನು ಹೊಂದುವ ಮೂಲಕ ನಂತರದ ಸ್ಥಾನಗಳಲ್ಲಿವೆ.ಪ್ರಾದೇಶಿಕ ಮಾರುಕಟ್ಟೆಗಳಲ್ಲಿ ಸುರಕ್ಷಿತ, ವೇಗದ ಮತ್ತು ನಿಯಮಬದ್ಧ ವಹಿವಾಟುಗಳನ್ನು ಖಾತರಿಪಡಿಸುವ ಅತ್ಯಾಧುನಿಕ ಹಣಕಾಸು ತಂತ್ರಜ್ಞಾನದ ಮೂಲಕ ಪೇ10 ಸಂಸ್ಥೆಯು ಮಹಿಳಾ ಉದ್ಯಮಿಗಳ ಈ ಗಡಿಯಾಚೆಗಿನ ಪಾವತಿ ಪ್ರಕ್ರಿಯೆಯನ್ನು ಅತ್ಯಂತ ಸರಳಗೊಳಿಸುತ್ತಿದೆ.

ಅಸ್ಪೈರ್ ಫಾರ್ ಹರ್ ಸಂಸ್ಥೆಯ 2025 ರ ವರದಿಯ ಪ್ರಕಾರ, ಭಾರತದಲ್ಲಿ ಮಹಿಳಾ ನೇತೃತ್ವದ ಉದ್ಯಮಗಳಲ್ಲಿ ಸುಮಾರು ಶೇ. 80 ರಷ್ಟು ಸಂಸ್ಥೆಗಳು ಅಂತಾರಾಷ್ಟ್ರೀಯ ಪಾವತಿಗಳನ್ನು ಸ್ವೀಕರಿಸುವಲ್ಲಿ ತೊಂದರೆಗಳನ್ನು ಎದುರಿಸುತ್ತಿವೆ. ಹಾಗೆಯೇ, ಶೇ. 60 ರಷ್ಟು ಉದ್ಯಮಿಗಳು ರಫ್ತು ಕಾನೂನುಗಳು ಮತ್ತು ನಿಯಂತ್ರಕ ನಿಯಮಗಳ ಪಾಲನೆಗೆ ಸಂಬಂಧಿಸಿದಂತೆ ಸವಾಲುಗಳನ್ನು ಎದುರಿಸುತ್ತಿದ್ದಾರೆ.

ಮಹಿಳಾ ಉದ್ಯಮಿಗಳು ಜಾಗತಿಕ ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವ ಈ ಸಂದರ್ಭದಲ್ಲಿ, ಪೇ10 ನಂತಹ ಫಿನ್‌ಟೆಕ್ ವೇದಿಕೆಗಳು ಸುಲಭವಾದ ಪಾವತಿ ಮೂಲಸೌಕರ್ಯ, ಪಾರದರ್ಶಕ ವಹಿವಾಟು ವ್ಯವಸ್ಥೆ ಮತ್ತು ಸಮಗ್ರ ನಿಯಮಾವಳಿಗಳ ಬೆಂಬಲವನ್ನು ನೀಡುವ ಮೂಲಕ ಈ ಎಲ್ಲ ಸವಾಲುಗಳನ್ನು ನಿವಾರಿಸಲು ನೆರವಾಗುತ್ತಿವೆ.

ದೇಶದಲ್ಲಿ ಮಹಿಳೆಯರಲ್ಲಿ ಉದ್ಯಮಶೀಲತೆಯ ಮಹತ್ವಾಕಾಂಕ್ಷೆ ಹೆಚ್ಚುತ್ತಿದ್ದರೂ, ಭಾರತದ ಒಟ್ಟು 5.85 ಕೋಟಿ (58.5 ಮಿಲಿಯನ್) ಉದ್ಯಮಗಳ ಪೈಕಿ ಮಹಿಳಾ ನೇತೃತ್ವದ ಉದ್ಯಮಗಳ ಪಾಲು ಕೇವಲ ಶೇ. 15.4 ರಷ್ಟು ಮಾತ್ರ ಇದೆ ಎಂದು ಈ ವರದಿ ಎತ್ತಿ ತೋರಿಸಿದೆ.

ಇನ್ನೊಂದೆಡೆ, ಗ್ರಾಮೀಣ ಹಾಗೂ ಭಾರತದ ಸಣ್ಣ ನಗರಗಳ ಮಹಿಳೆಯರಲ್ಲಿ ಡಿಜಿಟಲ್ ಉದ್ಯಮಶೀಲತೆ ಅಭೂತಪೂರ್ವ ಬೆಳವಣಿಗೆಯನ್ನು ಕಾಣುತ್ತಿದೆ. ಟೈಡ್ ಇಂಡಿಯಾ ಸಂಸ್ಥೆಯ ಅಂಕಿ-ಅಂಶಗಳ ಪ್ರಕಾರ, ಡಿಜಿಟಲ್ ವ್ಯವಹಾರ ಪರಿಕರಗಳನ್ನು ಬಳಸುತ್ತಿರುವ ಮಹಿಳಾ ಉದ್ಯಮಿಗಳ ಪೈಕಿ ಶೇ. 96 ರಷ್ಟು ಮಂದಿ 2ನೇ, 3ನೇ ಮತ್ತು 4ನೇ ಹಂತದ ನಗರ ಹಾಗೂ ಪಟ್ಟಣಗಳಿಗೆ ಸೇರಿದವರಾಗಿದ್ದಾರೆ. ಇಷ್ಟೇ ಅಲ್ಲದೆ, ಕಳೆದ ವರ್ಷಕ್ಕೆ ಹೋಲಿಸಿದರೆ ಮಹಿಳಾ ನೇತೃತ್ವದ ಉದ್ಯಮಗಳಲ್ಲಿ ಡಿಜಿಟಲ್ ವ್ಯವಸ್ಥೆಯ ಅಳವಡಿಕೆಯು ಬರೋಬ್ಬರಿ ಶೇ. 282 ರಷ್ಟು ಭಾರಿ ಜಿಗಿತವನ್ನು ಕಂಡಿದೆ.

ಭಾರತದ ಒಟ್ಟಾರೆ ಎಂಎಸ್ಎಂಇ ಪರಿಸರ ವ್ಯವಸ್ಥೆಯಲ್ಲೂ ಮಹಿಳೆಯರ ಪಾಲ್ಗೊಳ್ಳುವಿಕೆ ತೀವ್ರವಾಗಿ ಹೆಚ್ಚುತ್ತಿದೆ. 2025 ರಲ್ಲಿ ಸಂಸತ್ತಿನಲ್ಲಿ ಮಂಡಿಸಲಾದ ಸರ್ಕಾರದ ಅಧಿಕೃತ ದತ್ತಾಂಶದ ಪ್ರಕಾರ, ದೇಶದಲ್ಲಿ ನೋಂದಾಯಿತ ಮಹಿಳಾ ನೇತೃತ್ವದ ಎಂಎಸ್ಎಂಇಗಳ ಸಂಖ್ಯೆ 2.86 ಕೋಟಿಯ ಗಡಿಯನ್ನು ದಾಟಿದೆ. ಇದು ದೇಶಾದ್ಯಂತ ಮಹಿಳಾ ಒಡೆತನದ ಉದ್ಯಮಗಳು ಅತ್ಯಂತ ವೇಗವಾಗಿ ಔಪಚಾರಿಕ ತಳಹದಿಗೆ (ಸ್ಥಿರ ವ್ಯವಸ್ಥೆಗೆ) ಒಳಪಡುತ್ತಿರುವುದನ್ನು ಸ್ಪಷ್ಟವಾಗಿ ಎತ್ತಿ ತೋರಿಸುತ್ತದೆ.JNNCE Shivamoggaಬದಲಾಗುತ್ತಿರುವ ಈ ಉದ್ಯಮದ ಚಿತ್ರಣದ ಕುರಿತು ಪೇ10 ಇಂಡಿಯಾ ಸಂಸ್ಥೆಯ ಸಿಇಓ ಡಾ. ಅತುಲ್ ಮೆಹ್ತಾ ಅವರು ಮಾತನಾಡಿ, “ಸಣ್ಣ ನಗರಗಳ ಮಹಿಳಾ ಉದ್ಯಮಿಗಳು ಭಾರತದ ಡಿಜಿಟಲ್ ವಾಣಿಜ್ಯ ಮತ್ತು ರಫ್ತು ಪ್ರಗತಿಯ ಯಶೋಗಾಥೆಯ ಪ್ರಮುಖ ಶಕ್ತಿಯಾಗಿ ಹೊರಹೊಮ್ಮುತ್ತಿದ್ದಾರೆ. ಆದಾಗ್ಯೂ, ಅವರಲ್ಲಿ ಹೆಚ್ಚಿನವರು ಇಂದಿಗೂ ಅಂತರರಾಷ್ಟ್ರೀಯ ವಹಿವಾಟುಗಳಲ್ಲಿ ತೊಂದರೆಗಳು, ವಿಳಂಬಿತ ಹಣ ಇತ್ಯರ್ಥ, ಪಾರದರ್ಶಕತೆಯ ಕೊರತೆ ಮತ್ತು ಕಾರ್ಯಾಚರಣೆಯ ಸಂಕೀರ್ಣತೆಗಳನ್ನು ಎದುರಿಸುತ್ತಿದ್ದಾರೆ. ಪೇ10 ಸಂಸ್ಥೆಯಲ್ಲಿ ನಾವು ಉತ್ತಮವಾದ ಗಡಿಯಾಚೆಗಿನ ಪಾವತಿ ವ್ಯವಸ್ಥೆಯನ್ನು ಕಲ್ಪಿಸುವತ್ತ ಗಮನ ಹರಿಸಿದ್ದೇವೆ. ಇದು ಈ ಉದ್ಯಮಗಳು ಸ್ಥಳೀಯ ಮಾರುಕಟ್ಟೆಗಳನ್ನು ಮೀರಿ, ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಆತ್ಮವಿಶ್ವಾಸದಿಂದ ಬೆಳೆಯಲು ಶಕ್ತಿ ನೀಡುತ್ತದೆ” ಎಂದಿದ್ದಾರೆ.

ಪ್ರಾದೇಶಿಕ ಉದ್ಯಮ ಪಾಲ್ಗೊಳ್ಳುವಿಕೆಗೆ ಉತ್ತೇಜನ

ಮಹಿಳಾ ನೇತೃತ್ವದ ಉದ್ಯಮಗಳು ಹೆಚ್ಚಿನ ಪ್ರಗತಿ ಕಾಣುತ್ತಿರುವ ಪ್ರಾದೇಶಿಕ ವ್ಯಾಪಾರ ಕಾರಿಡಾರ್‌ ಗಳು, ಭಾರತ-ಜಿಸಿಸಿ ಮಾರುಕಟ್ಟೆಗಳು, ಆಗ್ನೇಯ ಏಷ್ಯಾ, ದಕ್ಷಿಣ ಏಷ್ಯಾದ ವ್ಯಾಪಾರ ಪರಿಸರ ವ್ಯವಸ್ಥೆಗಳು ಮತ್ತು ಉದಯೋನ್ಮುಖ ಡಿಜಿಟಲ್ ವಾಣಿಜ್ಯ ಮಾರ್ಗಗಳಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಪಾಲ್ಗೊಳ್ಳಲು ನೆರವಾಗುವ ನಿಟ್ಟಿನಲ್ಲಿ ಪೇ10 ನ ಗಡಿಯಾಚೆಗಿನ ಸೇವೆಗಳನ್ನು ವಿನ್ಯಾಸಗೊಳಿಸಲಾಗಿದೆ. ಸರಳೀಕೃತ ಪಾವತಿ ಪ್ರಕ್ರಿಯೆಗಳು, ವೇಗದ ವಹಿವಾಟು ಪಾರದರ್ಶಕತೆ ಮತ್ತು ನಿಯಮಬದ್ಧ ಡಿಜಿಟಲ್ ಮೂಲಸೌಕರ್ಯವನ್ನು ಒದಗಿಸುವ ಮೂಲಕ, ಮೆಟ್ರೋ ಅಲ್ಲದ ನಗರಗಳಿಂದ ಅಂತರರಾಷ್ಟ್ರೀಯ ಮಟ್ಟಕ್ಕೆ ತಮ್ಮ ವ್ಯವಹಾರವನ್ನು ವಿಸ್ತರಿಸಲು ಬಯಸುವ ಮಹಿಳಾ ಉದ್ಯಮಿಗಳಿಗೆ ಬೆಂಬಲ ನೀಡುವ ಗುರಿಯನ್ನು ಪೇ10 ಹೊಂದಿದೆ.

ಒಂದು ಉದಾಹರಣೆ ನೋಡುವುದಾದರೆ, ಜೈಪುರದ ಮಹಿಳಾ ಉದ್ಯಮಿಯೊಬ್ಬರು ಯುಎಇ ಮತ್ತು ಸಿಂಗಾಪುರದ ಗ್ರಾಹಕರಿಗೆ ಹ್ಯಾಂಡ್‌ ಕ್ರಾಫ್ಟೆಡ್ (ಕರಕುಶಲ) ಜವಳಿ ಉತ್ಪನ್ನಗಳನ್ನು ರಫ್ತು ಮಾಡುತ್ತಿದ್ದರು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅವರ ಉತ್ಪನ್ನಗಳಿಗೆ ಭಾರೀ ಬೇಡಿಕೆ ಇತ್ತಾದರೂ, ಗಡಿಯಾಚೆಗಿನ ಪಾವತಿಗಳನ್ನು ನಿರ್ವಹಿಸುವುದು ಅವರಿಗೆ ದೊಡ್ಡ ಸವಾಲಾಗಿತ್ತು. ಪಾವತಿ ವಿಳಂಬ, ವಹಿವಾಟಿನ ಅಪಾರದರ್ಶಕತೆ ಮತ್ತು ಸಂಕೀರ್ಣ ಹಣ ಇತ್ಯರ್ಥ ಪ್ರಕ್ರಿಯೆಗಳಿಂದಾಗಿ ಅವರ ನಗದು ಹರಿವಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿತ್ತು. ಇದು ಹಬ್ಬ ಹರಿದಿನಗಳಂತಹ ಹೆಚ್ಚಿನ ಬೇಡಿಕೆಯ ಅವಧಿಯಲ್ಲಿ ಸರಕು ದಾಸ್ತಾನು ಯೋಜಿಸಲು ಮತ್ತು ಆರ್ಡರ್‌ ಗಳನ್ನು ಪೂರೈಸಲು ಅಡ್ಡಿಯುಂಟುಮಾಡುತ್ತಿತ್ತು.

ಆದರೆ, ಅವರು ಪೇ10 ಸಂಸ್ಥೆಯ ಡಿಜಿಟಲ್ ಪಾವತಿ ಮೂಲಸೌಕರ್ಯವನ್ನು ಬಳಸಲು ಆರಂಭಿಸಿದ ನಂತರ, ವ್ಯವಹಾರದ ಚಿತ್ರಣವೇ ಬದಲಾಯಿತು. ವೇಗದ ವಹಿವಾಟು ಪಾರದರ್ಶಕತೆ, ನಿಖರವಾದ ಹಣ ಇತ್ಯರ್ಥ ಮತ್ತು ಅತ್ಯಂತ ಸರಳವಾದ ಗಡಿಯಾಚೆಗಿನ ಪಾವತಿ ಅನುಭವವನ್ನು ಅವರು ಪಡೆದರು. ವಿವಿಧ ಮೂಲಗಳಿಂದ ಬರುವ ಹಣವನ್ನು ಪತ್ತೆಹಚ್ಚಲು ಸಮಯ ವ್ಯರ್ಥ ಮಾಡುವ ಬದಲಾಗಿ, ಅವರು ತಮ್ಮ ಸಂಪೂರ್ಣ ಗಮನವನ್ನು ಉತ್ಪಾದನೆ, ಗ್ರಾಹಕರೊಂದಿಗಿನ ಬಾಂಧವ್ಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯ ವಿಸ್ತರಣೆಯತ್ತ ಹರಿಸಲು ಸಾಧ್ಯವಾಯಿತು.

ಜಾಗತಿಕ ವಾಣಿಜ್ಯದ ವೇಗಕ್ಕೆ ಸಿಗಬೇಕಿದೆ ಸಾಥ್

ಇಂದು ಭಾರತದಾದ್ಯಂತ ಇರುವ ಸಾವಿರಾರು ಎಸ್‌ಎಂಇ ಮತ್ತು ಮಹಿಳಾ ಉದ್ಯಮಿಗಳ ಮುಂದಿರುವ ನಿಜವಾದ ಸವಾಲು ವಿದೇಶಿ ಗ್ರಾಹಕರನ್ನು ಹುಡುಕುವುದಲ್ಲ; ಬದಲಿಗೆ ಜಾಗತಿಕ ವಾಣಿಜ್ಯದ ವೇಗಕ್ಕೆ ತಕ್ಕಂತೆ ಚಲಿಸುವ ಹಣಕಾಸು ಮೂಲಸೌಕರ್ಯವನ್ನು ಪಡೆದುಕೊಳ್ಳುವುದಾಗಿದೆ. ಇಂತಹ ಸಂದರ್ಭಗಳಲ್ಲೇ ಪೇ10 ನಂತಹ ಪರಸ್ಪರ ಕಾರ್ಯನಿರ್ವಹಿಸಬಲ್ಲ ಪಾವತಿ ವೇದಿಕೆಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಇವು ದೇಶದ ಸಣ್ಣ ಉದ್ಯಮಗಳು ಹೆಚ್ಚಿನ ಆತ್ಮವಿಶ್ವಾಸ, ದಕ್ಷತೆ ಮತ್ತು ಸಂಪೂರ್ಣ ನಿಯಂತ್ರಣದೊಂದಿಗೆ ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ಮುನ್ನಡೆಯಲು ನೆರವಾಗುತ್ತಿವೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news   Kalpa News Advertising DisclaimerKalahamsa Infotech private limited

Tags: Digital TechnologyFintech companyKannada News WebsiteLatest News KannadaPay10Women Entrepreneurಡಿಜಿಟಲ್ ತಂತ್ರಜ್ಞಾನಪೇ10ಫಿನ್‌ ಟೆಕ್ ಸಂಸ್ಥೆಬೆಂಗಳೂರುಮಹಿಳಾ ಉದ್ಯಮಿಮುಂಬೈಲೈಫ್‌ಸ್ಟೈಲ್ವ್ಯಾಪಾರ ವಹಿವಾಟು
Share202Tweet126Send
Aniruddha Vasishta S R

Aniruddha Vasishta S R

Editor-in-Chief

Previous Post

Mysuru | ಭಾರತೀಯ ರೈಲ್ವೆ ವಿಭಾಗಾಂತರ ನೃತ್ಯ ಸ್ಪರ್ಧೆ ಯಶಸ್ವಿ

Next Post

Shikaripura | ಸ್ಪರ್ಧಾತ್ಮಕ ಯುಗದಲ್ಲಿ ವಿಜ್ಞಾನ ಕ್ರಾಂತಿ ಅನಿವಾರ್ಯ: ಡಾ. ಶಿವಕುಮಾರ್

kalpa News

kalpa News

Next Post
Shikaripura Science Revolution Essential in a Competitive Era

Shikaripura | ಸ್ಪರ್ಧಾತ್ಮಕ ಯುಗದಲ್ಲಿ ವಿಜ್ಞಾನ ಕ್ರಾಂತಿ ಅನಿವಾರ್ಯ: ಡಾ. ಶಿವಕುಮಾರ್

Leave a Reply Cancel reply

Your email address will not be published. Required fields are marked *

No Result
View All Result
b-y-raghavendra-freedom-fighters-independence-day
English Articles

Remembering Freedom Fighters Is the Duty of Every Indian: MP B.Y. Raghavendra

by kalpa News
August 17, 2026
0

Kalpa Media House  | SHIKARIPURA  | Remembering the freedom fighters who fought against British rule, made immense sacrifices and secured...

Read moreDetails
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL