ಕಲ್ಪ ಮೀಡಿಯಾ ಹೌಸ್ | ನವದೆಹಲಿ/ಶ್ರೀಹರಿಕೋಟಾ |
ಭಾರತದ ಮಹತ್ವದ ಚಂದ್ರಯಾನ-3 #Chandrayana3 ಚಂದ್ರನ ಕಕ್ಷೆಯನ್ನು ಸುತ್ತುವುದನ್ನು ಮುಂದುವರೆಸಿದ್ದು, ಇದರ ಅಂತರವನ್ನು ಕಡಿಮೆ ಮಾಡುವುದು ಅಷ್ಟು ಸುಲಭವಾಗಿಲ್ಲ ಎಂದು ಹೇಳಲಾಗಿದೆ. ಕಾರಣ ಇಲ್ಲಿರುವ ಟ್ರಾಫಿಕ್ ಜಾಮ್…
ಹೌದು… ಪ್ರಸ್ತುತ ವರದಿಯಂತೆ ಚಂದ್ರನ #Moon ಸುತ್ತ ಕಕ್ಷೆಯಲ್ಲಿ ಒಟ್ಟು ಆರು ಸಕ್ರಿಯ ಕಕ್ಷಗಾಮಿಗಳು ಸುತ್ತುತ್ತಿದ್ದು, ಇವುಗಳ ನಡುವೆ ಚಂದ್ರಯಾನ-3ನ್ನು ಚಂದ್ರನ ಮೇಲೆ ಇಳಿಸುವುದು ಸವಾಲಿನ ಕಾರ್ಯವಾಗಿದೆ.
ಎಷ್ಟು ಕಕ್ಷಗಾಮಿಗಳಿವೆ?
ಪ್ರಸ್ತುತ ಚಂದ್ರನ ಸುತ್ತಲೂ ನಾಸಾದ #NASA ವಿಚಕ್ಷಣ ಕಕ್ಷಗಾಮಿ(Nasa’s Lunar Reconnaissance Orbiter), #ARTEMIS ಅಡಿಯಲ್ಲಿ ಮರುಸ್ಥಾಪಿಸಲಾಗಿರುವ ನಾಸಾದ ಆರ್ಟೆಮಿಸ್ ಮಿಷನ್’ನ ಎರಡು ತನಿಖಾ ಕಕ್ಷಗಾಮಿಗಳು, ಭಾರತದ ಚಂದ್ರಯಾನ-2, ಕೊರಿಯಾ ಪಾತ್’ಫೈಂಡರ್ ಲೂನಾರ್ ಆರ್ಬಿಟರ್ ಹಾಗೂ ನಾಸಾದ ಕ್ಯಾಪ್ಸ್ಟೋನ್ ಅನ್ನು ಒಳಗೊಂಡಿದೆ.
ನಾಸಾದಿಂದ 2009ರಲ್ಲಿ ಉಡಾವಣೆಯಾಗಿರುವ ಎಲ್’ಆರ್’ಒ ಆರ್ಬಿಟಡ್ ಚಂದ್ರನ ಕಕ್ಷೆಗೆ ಅತಿ ಹತ್ತಿರ ಅಂದರೆ 50-200 ಕಿಲೋ ಮೀಟರ್ ದೂರದಲ್ಲಿ ಸುತ್ತುತ್ತಿದ್ದು, ಇದು ಚಂದ್ರನ ಹೈ ರೆಸ್ಯುಲೂಷನ್ ನಕ್ಷೆಗಳನ್ನು ಒದಗಿಸಿದೆ. ಜೂನ್ 2011 ರಲ್ಲಿ ಚಂದ್ರನ ಕಕ್ಷೆಗೆ ಸೇರಿಸಲಾದ #ARTEMIS ಪಿ1 ಮತ್ತು ಪಿ2 ಶೋಧಕಗಳು, ಸರಿಸುಮಾರು 100 ಕಿಲೋ ಮೀಟರ್ X 19,000 ಕಿಲೋ ಮೀಟರ್ ಎತ್ತರದ ಸ್ಥಿರವಾದ ಸಮಭಾಜಕ, ಹೆಚ್ಚಿನ-ವಿಕೇಂದ್ರೀಯ ಕಕ್ಷೆಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.
ಇನ್ನು, ಚಂದ್ರಯಾನ-2, 2019 ರಲ್ಲಿ ತನ್ನ ವಿಕ್ರಮ್ ಲ್ಯಾಂಡರ್’ನೊಂದಿಗೆ #VikramLander ಸಂಪರ್ಕವನ್ನು ಕಳೆದುಕೊಂಡರೂ, 100 ಕಿಮೀ ಎತ್ತರದ ಧ್ರುವ ಕಕ್ಷೆಯಲ್ಲಿ ಕಾರ್ಯನಿರ್ವಹಿಸುವುದನ್ನು ಮುಂದುವರೆಸಿದೆ. ಕೆಪಿಎಲ್’ಒ ಮತ್ತು ಕ್ಯಾಪ್ಸ್ಟೋನ್ ಸಹ ಚಂದ್ರನ ಬಳಿಯ ಟ್ರಾಫಿಕ್’ಗೆ ಕಾರಣವಾಗಿವೆ. ಕ್ಯಾಪ್ಸ್ಟೋನ್ ನಿಯರ್-ರೆಕ್ಟಿಲಿನಿಯರ್ ಹಾಲೋ ಆರ್ಬಿಟ್’ನಲ್ಲಿ ಕಾರ್ಯನಿರ್ವಹಿಸುತ್ತದೆ.
ಇನ್ನೂ ಹೆಚ್ಚಾಗಲಿದೆ ಟ್ರಾಫಿಕ್!
ಇದರೊಂದಿಗೆ ಮುಂದಿನ ತಿಂಗಳಿನಲ್ಲಿ ಚಂದ್ರನ ಕಕ್ಷೆಯಲ್ಲಿ ಟ್ರಾಫಿಕ್ #Traffic ಇನ್ನೂ ಹೆಚ್ಚಾಗಲಿದೆ. ಕಾರಣ, ರಷ್ಯಾದ ಲೂನಾ 25 ಮಿಷನ್ ಇದೇ ವರ್ಷ ಆಗಸ್ಟ್ 10,ರಂದು ಪ್ರಾರಂಭವಾಗಲಿದ್ದು, ಆಗಸ್ಟ್ 16, 2023 ರ ವೇಳೆಗೆ ಚಂದ್ರನ ಕಕ್ಷೆಗೆ ಸೇರುವ ನಿರೀಕ್ಷೆಯಿದೆ.
ಇದು, ಚಂದ್ರನ #Moon ದಕ್ಷಿಣ ಧ್ರುವವನ್ನು ಅನ್ವೇಷಿಸುವ ಗುರಿಯನ್ನು ಈ ಕಾರ್ಯಾಚರಣೆಯು ಹೊಂದಿದ್ದು, 47 ವರ್ಷಗಳ ಅವಧಿಯ ನಂತರ ಚಂದ್ರನ ಮೇಲ್ಮೈಗೆ ರಷ್ಯಾ ಮರಳಲಿದೆ. ಲೂನಾ 25 ಕಕ್ಷಗಾಮಿಯು 100 ಕಿಮೀ ಎತ್ತರದ ಕಕ್ಷೆಯಲ್ಲಿ ಚಂದ್ರನ ಕಕ್ಷೆಯನ್ನು ಸೇರಲಿದೆ. ಇದು, ಆಗಸ್ಟ್ 21-23ರ ನಡುವೆ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲು ನಿರ್ಧರಿಸಲಾಗಿದೆ.
ಲೂನಾ 25 ಜೊತೆಗೆ, ನಾಸಾದ ಆರ್ಟೆಮಿಸ್ ಕಾರ್ಯಕ್ರಮವು ಚಾಲ್ತಿಯಲ್ಲಿರುವ ಚಂದ್ರನ ಕಾರ್ಯಾಚರಣೆಗಳನ್ನು ಯೋಜಿಸುತ್ತಿದೆ. ಆರ್ಟೆಮಿಸ್ 1, ಸಿಬ್ಬಂದಿಗಳಿಲ್ಲದ ಪರೀಕ್ಷಾ ಹಾರಾಟ, 2022 ರ ಕೊನೆಯಲ್ಲಿ ಚಂದ್ರನ ಆಚೆಗೆ ಕಕ್ಷೆಯಲ್ಲಿ ಸುತ್ತುತ್ತದೆ. ಭವಿಷ್ಯದ ಆರ್ಟೆಮಿಸ್ ಕಾರ್ಯಾಚರಣೆಗಳು ಚಂದ್ರನ ಸಂಚಾರಕ್ಕೆ ಸೇರಿಸುವ ನಿರೀಕ್ಷೆಯಿದೆ.
ಹೆಚ್ಚಾಗುತ್ತಿರುವ ಯೋಜನೆ ಹಾಗೂ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಚಂದ್ರ ಗ್ರಹವು ವೈಜ್ಞಾನಿಕ ಆವಿಷ್ಕಾರ ಹಾಗೂ ಪರಿಶೋಧನೆಗೆ ಹಾಟ್’ಸ್ಪಾಟ್ #Hotspot ಆಗಿ ಪರಿವರ್ತನೆಯಾಗುತ್ತಿದೆ.
ಇದರ ನಡುವೆಯೇ ಚಂದ್ರನ ಕಕ್ಷೆಯನ್ನು ಹೆಚ್ಚುತ್ತಿರುವ ಈ ಸಂಚಾರಗಳಿಂದಾಗಿ ಘರ್ಷಣೆಗಳ ಸಂಭವಿಸುವ ಸಂಭವವೂ ಸಹ ಇದೆ ಎಂದು ಊಹಿಸಲಾಗಿದೆ. ಹೀಗಾಗಿ, ಕಕ್ಷೆಯನ್ನು ಸೇರಿಸುವುದು ಹಾಗೂ ಅದು ಸರಿಯಾದ ರೀತಿಯಲ್ಲಿ ಕಾರ್ಯಾಚರಣೆ ನಡೆಸುವಂತೆ ನಿರ್ವಹಿಸುವುದು ಒಂದು ಸವಾಲಿನ ಕಾರ್ಯವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post