ಬೆಂಗಳೂರು: ಆಡಳಿತಾತ್ಮಕ ಹಿತದೃಷ್ಠಿಯಿಂದ ಐವರು ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಸಿಇಒ ಜನವಿಭವ ಸ್ವಾಮಿ ಅವರನ್ನು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶಕರನ್ನಾಗಿ ವರ್ಗಾವಣೆ ಮಾಡಲಾಗಿದೆ.
ಇನ್ನುಳಿದಂತೆ, ಹುದ್ದೆ ನಿರೀಕ್ಷೆಯಲ್ಲಿದ್ದ ಸಿ. ಅನಿತಾ ಅವರನ್ನು ಪೌರಾಡಳಿತ ನಿರ್ದೇಶನಲಾಯದ ಜಂಟಿ ನಿರ್ದೇಶಕರನ್ನಾಗಿ, ಇಲ್ಯಾಸ್ ಅಹ್ಮದ್ ಇಸಾಮದಿ ಅವರನ್ನು ಕರ್ನಾಟಕ ರಾಜ್ಯ ವಕ್‌ಫ್ ಮಂಡಳಿ ಸಿಇಒ ಆಗಿ, ಎನ್. ಮಹಮದ್ ಝುಬೇರ್ ಅವರನ್ನು ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಜಂಟಿ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಹಾಗೂ ಎಚ್. ಅಮರೇಶ್ ಅವರನ್ನು ಭೂಮಿ ಉಸ್ತುವಾರಿ ಕೋಶದ ವಿಶೇಷ ಉಪ ಆಯುಕ್ತರನ್ನಾಗಿ ನಿಯೋಜಿಸಿ ಆದೇಶ ಹೊರಡಿಸಲಾಗಿದೆ.
Discussion about this post