ಕಲ್ಪ ಮೀಡಿಯಾ ಹೌಸ್ | ತುಮಕೂರು |
ಆಧುನಿಕತೆಯ ಭರಾಟೆಯಲ್ಲಿ ಸಾರಿಗೆ ವ್ಯವಸ್ಥೆ ಅತ್ಯಾಧುನಿಕವಾಗಿ ಮುಂದುವರಿದು ಮೆಟ್ರೋ ಟ್ರೈನ್ ಗಳು ಬಂದಿವೆ. ಬುಲೆಟ್ ಟ್ರೈನ್ ಬರುತ್ತಿವೆ. ಆದರೆ ಗ್ರಾಮವೊಂದು ಇದುವರೆಗೂ ಸರ್ಕಾರಿ ಬಸ್ ನ ಮುಖ ನೋಡಿಲ್ಲ ಅಂದ್ರೆ ನೀವು ನಂಬಲೇಬೇಕು.
ಹೌದು… ಸ್ವತಂತ್ರ ಭಾರತದ ಇತಿಹಾಸದಲ್ಲಿ ತುಮಕೂರು ಜಿಲ್ಲೆ ಹೆಬ್ಭೂರು ಹೋಬಳಿಯ ಚಿಕ್ಕಯ್ಯನ ಪಾಳ್ಯ ಗ್ರಾಮಕ್ಕೆ ಮೊದಲ ಬಾರಿ ಬಸ್ ಬಂದಿದ್ದು ಗ್ರಾಮದಲ್ಲಿ ಇನ್ನಿಲ್ಲದ ಸಡಗರ ತರುವಂತೆ ಮಾಡಿದೆ, ಮೊದಲ ಬಾರಿ ಸರ್ಕಾರಿ ಬಸ್ ನೋಡಿದ ಗ್ರಾಮದ ಜನತೆ ಬಸ್ ಗೆ ಪೂಜೆ ಮಾಡಿ ಸಿಹಿ ಹಂಚಿ ಸಂಭ್ರಮಿಸಿದರು.
Also read: ವಕ್ಫ್ ಬೋರ್ಡ್ ಪರಮಾಧಿಕಾರಕ್ಕೆ ಕತ್ತರಿ | ಲೋಕಸಭೆಯಲ್ಲಿ ತಿದ್ದುಪಡಿ ಕಾಯ್ದೆ ಮಂಡನೆ

ದಿನನಿತ್ಯ ಬೆಳ್ಳಿಗೆ ತುಮಕೂರಿನಿಂದ ಹೊನ್ನುಡಿಕೆ ಮಾರ್ಗವಾಗಿ ಸಂಚರಿಸಿ ಚಿಕ್ಕಯ್ಯನ ಪಾಳ್ಳ ಗ್ರಾಮ ತಲುಪಿ, ನಾಗವಲ್ಲಿ ಮಾರ್ಗವಾಗಿ ತುಮಕೂರು ತಲುಪುವುದು. ಇನ್ನು ಗ್ರಾಮದ ಜನತೆಯ ಹರ್ಷ ಕಂಡ ಸಾರಿಗೆ ಸಿಬ್ಬಂದಿ ಮೊದಲ ಬಾರಿಗೆ ಈ ರೂಟ್ ಗೆ ಬಂದಾಗ ನಿಜಕ್ಕೂ ಈ ಜನರ ಹರ್ಷ ನೋಡಿ ಖುಷಿಯಾಗುತ್ತೆ ಅಂತಾ ಹೇಳಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post