ಕಲ್ಪ ಮೀಡಿಯಾ ಹೌಸ್ | ತುಮಕೂರು |
ರಾಜ್ಯದ ಜನರಿಗೆ ಮಕ್ಮಲ್ ಟೋಪಿ ಹಾಕುವ ಸರ್ಕಾರ ಬಂದಿದ್ದು, ಶವ ಸಂಸ್ಕಾರಕ್ಕೆ ಕೊಟ್ಟ ಚೆಕ್ ಸಹ ಬೌನ್ಸ್ ಆಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಶಾಸಕ ಸುರೇಶ್ ಗೌಡ ಕಿಡಿ ಕಾರಿದ್ದಾರೆ.
ಕೈಗಾರಕೋದ್ಯಮಿಗಳ ಸಂವಾದಲ್ಲಿ ಮಾತನಾಡಿದ ಅವರು, ಜನರಿಗೆ ಮಕಮ್ಮಲ್ ಟೋಪಿ ಹಾಕಿ ಈ ಸರ್ಕಾರ ಬಂದಿದೆ. ತೀವ್ರ ಬರ ಬಂದಿದ್ದು, ಇದರ ಬಿಸಿ ಕೈಗಾರಿಕೆಗಳಿಗೂ ತಟ್ಟಿದೆ. ಮಾತ್ರವಲ್ಲ 3 ಗಂಟೆ ಕೂಡ ರೈತರಿಗೆ ತ್ರೀಫೇಸ್ ವಿದ್ಯುತ್ ಕೊಡುತ್ತಿಲ್ಲ. ಕಾವೇರಿ ನೀರು ಬೆಂಗಳೂರು ಕೊಡಲಿಕ್ಕೆ ಆಗುತ್ತಿಲ್ಲ. ಈ ಸಿದ್ದರಾಮಯ್ಯ ಸರ್ಕಾರ ಬಂದಮೇಲೆ ಗಾಳಿನೂ ಬೀಸುತ್ತಿಲ್ಲ, ಮಳೆನು ಬಂದಿಲ್ಲ ಎಂದು ಕಟಿಕಿಯಾಡಿದರು.
ಕಲಾವಿದರಿಗೆ ಕೊಟ್ಟಿರುವ ಚೆಕ್ ಮಾತ್ರವಲ್ಲ ಶವಸಂಸ್ಕಾರಕ್ಕೆ ಕೊಟ್ಟ ಚೆಕ್ ಸಹ ಬೌನ್ಸ್ ಆಗಿದೆ. ರಾಜ್ಯ ಆರ್ಥಿಕ ದಿವಾಳಿ ಆಗಿಬಿಟ್ಟಿದೆ ಎಂದರು.
ಯಡಿಯೂರಪ್ಪಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿ, ಜನರ ಕಷ್ಟ ನಿಭಾಯಿಸುವ ಶಕ್ತಿಯಿದೆ. ರಾಜ್ಯ ಸರ್ಕಾರಕ್ಕೆ ಛಾಟಿ ಬೀಸಬೇಕಿದೆ. ಕತ್ತಲೆ ಭಾಗ್ಯ, ಬಡವರಿಗೆ ಫ್ರೀ ವಿದ್ಯುತ್ ಕೊಡುವುದು ನ್ಯಾಯ. ಎರಡು ಲಕ್ಷ ಸಂಬಳ ಬರೋರಿಗೆ ಫ್ರೀ ಕೊಡುದು ಎಷ್ಟು ಸರಿ. 10 ವರ್ಷ ಆದರೂ ಬೆಸ್ಕಾಂ ಸಮಸ್ಯೆ ಬಗೆಹರಿಸಲಾಗದ ಪರಿಸ್ಥಿತಿ ಎದುರಾಗಿದೆ ಎಂದರು.
ತುಮಕೂರು ಗ್ರಾಂ ಕ್ಷೇತ್ರದಲ್ಲಿ ಟ್ರಾನ್ಫರ್ಮ್ 5 ಸಾವಿರ ಜನರು ಹಣ ನೀಡಿದ್ದಾರೆ. ಈವರೆಗೂ ಟಿಸಿ ಕೊಡಲು ಸಾಧ್ಯವಾಗಿಲ್ಲ. ದಿನ ಬೆಳಗಾದ್ರೆ ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಪರಮೇಶ್ವರ್ ಕಿತ್ತಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.
(ವರದಿ: ಡಿ.ಎಲ್. ಹರೀಶ್)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post