ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಡಿಯ ವಿಶ್ವವನ್ನೇ ಚಕಿತಗೊಳಿಸಿರುವ ಚಂದ್ರಯಾನ-3 ಯಶಸ್ಸಿಗೆ ವರ್ಷಗಟ್ಟಲೆ ಹಗಲು ರಾತ್ರಿ ಇಸ್ರೋ #ISRO ವಿಜ್ಞಾನಿಗಳ ತಂಡ ಶ್ರಮಿಸಿದ್ದು, ಇದರಲ್ಲಿ ನಮ್ಮ ಜಿಲ್ಲೆಯ ಇಬ್ಬರು ಸಾಧಕರೂ ಸಹ ಮಹತ್ವದ ಕೊಡುಗೆ ನೀಡಿದ್ದಾರೆ ಎಂಬುದು ಇಡಿಯ ಮಲೆನಾಡಿಗರು ಸಂತಸ ಪಡುವ ವಿಚಾರವಾಗಿದೆ.
ಹೌದು… ಜಿಲ್ಲೆಯ ಇಬ್ಬರು ವಿಜ್ಞಾನಿಗಳು ಚಂದ್ರಯಾನ-3ರ #Chandrayana3 ಮಿಷನ್’ನಲ್ಲಿ ಪ್ರಮುಖ ಜವಾಬ್ದಾರಿ ನಿರ್ವಹಿಸಿದ್ದು ದೇಶದ ಈ ಮಹತ್ವದ ಸಾಧನೆಯಲ್ಲಿ ನಮ್ಮ ಶಿವಮೊಗ್ಗದ #Shivamogga ಕೊಡುಗೆಯೂ ಸಹ ಇದೆ. ಹಾಗಾದರೆ, ಯಾರು ಆ ಇಬ್ಬರು ಸಾಧಕರು?
ಎಸ್.ಎನ್. ರಾಮ್, ಡಿಪಿಡಿ, ಪ್ರೊಪಲ್ಷನ್ ಮಾಡ್ಯುಲ್
ಚಂದ್ರಯಾನ-3ರ ಯೋಜನೆಯಲ್ಲಿನ ಪ್ರೊಪಲ್ಷನ್ ಸಿಸ್ಟಂ, ಪ್ರೊಪಲ್ಷನ್ ಮಾಡ್ಯುಲ್’ನಲ್ಲಿ #PropulsionModule ಡೆಪ್ಯೂಟಿ ಪ್ರಾಜೆಕ್ಟರ್ ಡೈರೆಕ್ಟರ್(ಡಿಪಿಡಿ) ಆಗಿ ಸೇವೆ ಸಲ್ಲಿಸುತ್ತಿರುವ ಶಿವಮೊಗ್ಗದ ಎಸ್.ಎನ್. ರಾಮ್ ಅವರು ಚಂದ್ರಯಾನ-3ರಲ್ಲಿ ಮಹತ್ವದ ಜವಾಬ್ದಾರಿ ನಿರ್ವಹಿಸಿದ್ದಾರೆ.
ಎಸ್.ಕೆ. ನಾಗಭೂಷಣ್ ಹಾಗೂ ಎ.ವಿ. ಸಾವಿತ್ರಿ ದಂಪತಿಗಳ ಪುತ್ರರಾದ ರಾಮ್ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಆರ್’ಸಿ ಶಾಲೆಯಲ್ಲಿ, ಪ್ರೌಢಶಾಲೆ ಹಾಗೂ ಪಿಯು ಶಿಕ್ಷಣವನ್ನು ಸೇಕ್ರೆಡ್ ಹಾರ್ಟ್ ಕಾಂಪೋಟಿಸ್ ಕಾಲೇಜಿನಲ್ಲಿ ಮುಕ್ತಾಯಗೊಳಿಸಿದ್ದಾರೆ.
ಜಿಲ್ಲೆಯ ಪ್ರತಿಷ್ಠಿತ ಜೆಎನ್’ಎನ್’ಸಿಇ ಕಾಲೇಜಿನಲ್ಲಿ #JNNCE ಮೆಕ್ಯಾನಿಕಲ್ ಇಂಜಿನಿಯರಿಂಗ್ ಮಾಡಿರುವ ಇವರು, ಆನಂತರ ಬೆಂಗಳೂರಿನ ಐಐಎಸ್’ಸಿಯಲ್ಲಿ #IISC ಏರೋಸ್ಪೇಸ್’ನಲ್ಲಿ ಎಂಎಸ್ ಮುಗಿಸಿದ್ದಾರೆ.
2004ರಲ್ಲಿ ಇಸ್ರೋಗೆ #ISRO ಸೇರಿದ ಇವರು ಪ್ರಸ್ತುತ ಬೆಂಗಳೂರಿನಲ್ಲಿರುವ ಕೇಂದ್ರದಲ್ಲಿ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಂ ಸೆಂಟರ್’ನಲ್ಲಿ ವಿಜ್ಞಾನ/ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ಚಂದ್ರಯಾನ 2 #Chandrayana2 ಆರ್ಬಿಟರ್’ನ ಡಿಪಿಡಿ ಸಹ ಇವರು ಕೆಲಸ ಮಾಡಿದ್ದಾರೆ.
ರಾಮ್ ಅವರ ಪತ್ನಿ ಹೊಸನಗರ ಮೂಲದ ಎನ್.ಆರ್. ರಂಜಿನಿ ಹಾಗೂ ಪುತ್ರಿಯರಾದ ಹಂಸಿಕಾ ಹಾಗೂ ಹರ್ಷಿಕಾ.
ಚಂದ್ರಯಾನ-3 ರ ಕುರಿತಂತೆ ತಮ್ಮ ಅನಿಸಿಕೆ ಹಂಚಿಕೊಂಡಿರುವ ರಾಮ್ ಅವರು, ಈ ಯೋಜನೆಯ ಭಾಗವಾಗಿರುವುದಕ್ಕೆ ಹಾಗೂ ವಿಕ್ರಂ ಲ್ಯಾಂಡರ್ #VikramLander ಲ್ಯಾಂಡ್ ಅಗುವ ಸಮಯಕ್ಕೆ ಸಾಕ್ಷಿಯಾಗಿದ್ದಕ್ಕೆ ಹೆಮ್ಮೆ ಪಡುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಚಂದ್ರಯಾನ-3ರ ಆರಂಭದಿಂದ ಪ್ರೊಪಲ್ಷನ್ ಸಿಸ್ಟಂ ಲ್ಯಾಂಡಿಂಗ್’ವರೆಗೂ ಒಂದು ಅದ್ಬುತವಾದ ಪ್ರಯಾಣವಾಗಿತ್ತು. ಡಿಪಿಡಿ ಆಗಿ ಚಂದ್ರಯಾನದ ಲ್ಯಾಂಡಿಂಗ್ ಸಮಯ ನನಗೆ ವೈಯಕ್ತಿಕವಾಗಿ ಒಂದು ರೋಮಾಂಚಕಾರಿ ಅನುಭವವಾಗಿದ್ದು, ನನ್ನ ಜೀವನದ ಅವಿಸ್ಮರಣೀಯ ಗಳಿಗೆಯಾಗಿದೆ ಎಂದಿದ್ದಾರೆ.
ಕೆ.ಎಲ್. ಶಿವಾನಿ, ಡೆಪ್ಯೂಟಿ ಡೈರೆಕ್ಟರ್
ಜಿಲ್ಲೆಯ ಕೋಣಂದೂರು #Konanduru ಮೂಲದ ಕೆ.ಎಲ್. ಶಿವಾನಿ ಅವರೂ ಸಹ ಇಸ್ರೋದಲ್ಲಿ ಸೇವೆ ಸಲ್ಲಿಸುತ್ತಿದ್ದು, ಚಂದ್ರಯಾನ-3ರ ಯೋಜನೆಯಲ್ಲಿ ಟೆಲಿಮೆಟ್ರಿ ಟ್ರ್ಯಾಕಿಂಗ್ ಅಂಡ್ ಕಮಾಂಡ್ ನೆಟ್ವರ್ಕ್ ವಿಭಾಗದ ಡೆಪ್ಯೂಟಿ ಡೈರೆಕ್ಟರ್ ಆಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.
ಮಾಜಿ ಶಾಸಕ ಕೋಣಂದೂರು ಲಿಂಗಪ್ಪ ಅವರ ಪುತ್ರಿಯಾದ ಶಿವಾನಿ ಅವರು, ಇಸ್ರೋ ವಿಜ್ಞಾನಿ ಕೆ.ಎಲ್. ಶಿವಾನಿ ಅವರು ಶಿವಮೊಗ್ಗದ ಜವಾಹರಲಾಲ್ ನೆಹರು ರಾಷ್ಟ್ರೀಯ ಇಂಜಿನಿಯರಿಂಗ್ ಕಾಲೇಜು #JNNCE ವಿದ್ಯಾರ್ಥಿನಿ.
1992ರಲ್ಲಿ ಈ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ ಅಂಡ್ ಕಮ್ಯೂನಿಕೇಷನ್ ಇಂಜಿನಿಯರಿಂಗ್ ಪದವಿ ಪಡೆದರು. 1993ರಲ್ಲಿ ಡಾ. ಯು.ಆರ್. ರಾವ್ ಅವರು ಇಸ್ರೋದ ಅಧ್ಯಕ್ಷರಾಗಿದ್ದಾಗ ಸಂಸ್ಥೆಗೆ ಸೇರಿದರು. ಅಂದಿನಿಂದ ಬಾಹ್ಯಾಕಾಶದ ವಿವಿಧ ಯೋಜನೆಗಳಲ್ಲಿ ಕೆಲಸ ಮಾಡಿದ್ದಾರೆ.
ಚಂದ್ರಯಾನ-3ರ ಯಶಸ್ಸಿಗೆ ಇಡಿಯ ಭಾರತವೇ ಹೆಮ್ಮೆ ಪಡುತ್ತಿದೆ. ವಿಶ್ವದ ಭೂಪಟದಲ್ಲಿ ಹಾಗೂ ಬಾಹ್ಯಾಕಾಶ ಕ್ಷೇತ್ರದ ಇತಿಹಾಸದಲ್ಲಿ ಅಪ್ರತಿಮ ಹೆಜ್ಜೆ ಗುರುತು ಮೂಡಿಸಿರುವ ಇಸ್ರೋದ ಈ ಸಾಧನೆಯಲ್ಲಿ ನಮ್ಮ ಜಿಲ್ಲೆಯ ಇಬ್ಬರು ವಿಜ್ಞಾನಿಗಳೂ ಸಹ ಭಾಗವಾಗಿರುವುದು ಇಡಿಯ ಮಲೆನಾಡು ಹೆಮ್ಮೆ ಪಡುತ್ತದೆ. ಇಬ್ಬರೂ ಸಾಧಕರನ್ನು ಕಲ್ಪ ಮೀಡಿಯಾ ಹೌಸ್(ರಿ.) ಮನದುಂಬಿ ಅಭಿನಂದಿಸುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post